ಶಾಂತಿಯುತವಾಗಿ ದತ್ತಮಾಲಾ ಅಭಿಯಾನ ನಡೆಸಿ: ಡಿಸಿ ಮೀನಾ ನಾಗರಾಜ್
KannadaprabhaNewsNetwork | Published : Oct 23 2023, 12:16 AM IST
ಶಾಂತಿಯುತವಾಗಿ ದತ್ತಮಾಲಾ ಅಭಿಯಾನ ನಡೆಸಿ: ಡಿಸಿ ಮೀನಾ ನಾಗರಾಜ್
ಸಾರಾಂಶ
ಶಾಂತಿಯುತವಾಗಿ ದತ್ತಮಾಲಾ ಅಭಿಯಾನ ನಡೆಸಿ: ಡಿಸಿ ಮೀನಾ ನಾಗರಾಜ್
- ದತ್ತ ಮಾಲಾ ಅಭಿಯಾನದ ಪೂರ್ವ ಭಾವಿ ಸಭೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಇದೇ ಅ.30 ರಿಂದ ನ.5 ರವರೆಗೆ ಆಚರಿಸಲಾಗುವ ದತ್ತ ಮಾಲಾ ಅಭಿಯಾನವನ್ನು ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದತ್ತ ಮಾಲಾ ಅಭಿಯಾನದ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದತ್ತ ಪೀಠ ದರ್ಶನಕ್ಕೆ ಹೋಗುವ ಹಾಗೂ ಬರುವ ಸಮಯ ತಿಳಿಸಲಾಗುವುದು. ಗಿರಿಯಲ್ಲಿ ಸ್ವಚ್ಛತೆ ಕಾಪಾಡ ಬೇಕು. ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾಹನಗಳ ದಟ್ಟಣೆ ಉಂಟಾಗುವುದರಿಂದ ಗಿರಿಯಲ್ಲಿ ಲಾಂಗ್ ಚಾರ್ಸಿ ವಾಹನಗಳನ್ನು ಬಳಸದಂತೆ ಹೇಳಿದರು. ಅ. 30 ರಂದು ದತ್ತ ಮಾಲಾಧಾರಣೆ, ನ. 2 ರಂದು ದೀಪೋತ್ಸವವನ್ನು ಯಾವ ದೇವಾಲಯಗಳಲ್ಲಿ ಆಯೋಜಿಸಲಾಗುತ್ತದೆ, ಎಷ್ಟು ಜನರು ಭಾಗವಹಿಸುತ್ತಾರೆ. ಬೇರೆ ಜಿಲ್ಲೆಗಳಿಂದ ದತ್ತ ಮಾಲಾಧಾರಿಗಳು ಯಾರ ನೇತೃತ್ವದಲ್ಲಿ ಬರುತ್ತಾರೆ, ಭಕ್ತಾಧಿ ಗಳು ಉಳಿಯುವ ಸ್ಥಳ, ಹೊರ ರಾಜ್ಯಗಳಿಂದ ಬರುವವರ ಮಾಹಿತಿ ಮೊದಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಶ್ರೀರಾಮ ಸೇನೆ ಮುಖಂಡರಿಗೆ ಸೂಚಿಸಿದರು. ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆಯಾಗದಂತ ಹೇಳಿಕೆಗಳನ್ನು ಯಾರು ಕೊಡಬಾರದು, ಪೀಠದೊಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಪೋಟೋ ತೆಗೆಯುವಂತಿಲ್ಲ. ಪೊಲೀಸ್ ಇಲಾಖೆಯಿಂದ ಸುರಕ್ಷತಾ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕ ರೆಡ್ಡಿ, ಉಪ ವಿಭಾಗಾಧಿಕಾರಿ ರಾಜೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ಡಾ. ಸುಮಂತ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶ್ರೀರಾಮ ಸೇನೆ ಮುಖಂಡರು ಹಾಜರಿದ್ದರು. 22 ಕೆಸಿಕೆಎಂ 1 ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ದತ್ತಮಾಲಾ ಅಭಿಯಾನದ ಪೂರ್ವಭಾವಿ ಸಭೆ ನಡೆಯಿತು.