‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಹುಲಿಗಳು | Kannada Prabha
Image Credit: KP
ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ. ಕಲಾವಿದರು ತಮ್ಮ ಎದೆ, ಹೊಟ್ಟೆ ಭಾಗದಲ್ಲಿ ‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಎಂಬ ಒಕ್ಕಣೆಯನ್ನು ಬರೆಸಿಕೊಂಡಿದ್ದಾರೆ
ಕನ್ನಡಪ್ರಭ ವಾರ್ತೆ ಮಂಗಳೂರು ನವರಾತ್ರಿ ಬಂತೆಂದರೆ ಕರಾವಳಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಫೇಮಸ್. ಆದರೆ ಈ ವರ್ಷ ವಿಶೇಷ ಹುಲಿಗಳು ಬಂದಿವೆ. ಇವು ‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಹುಲಿಗಳು! ಹೌದು, ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ. ಕಲಾವಿದರು ತಮ್ಮ ಎದೆ, ಹೊಟ್ಟೆ ಭಾಗದಲ್ಲಿ ‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಎಂಬ ಒಕ್ಕಣೆಯನ್ನು ಬರೆಸಿಕೊಂಡಿದ್ದಾರೆ. ಇಸ್ರೇಲ್- ಪ್ಯಾಲಿಸ್ತೇನ್ ಯುದ್ಧದ ಈ ಸಂದರ್ಭದಲ್ಲಿ ಭಾರತವು ಇಸ್ರೇಲ್ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಈ ಹುಲಿವೇಷ ಹಾಕಲಾಗಿದೆ. ಈ ಹುಲಿಗಳ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.