ಕುರಟ್ಟಿ ಹೊಸೂರಿನಲ್ಲಿ ಮುಂದುವರಿದ ಜಾನುವಾರು ಸಾವು

| Published : Sep 14 2025, 01:04 AM IST

ಸಾರಾಂಶ

ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರುಗಳ ಸರಣಿ ಸಾವು ಸಂಭವಿಸುತ್ತಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ, ಹನೂರು

ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರುಗಳ ಸರಣಿ ಸಾವು ಸಂಭವಿಸುತ್ತಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕುರಟ್ಟಿ ಹೊಸೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ 15ಕ್ಕೂ ಹೆಚ್ಚು ಜಾನುವಾರುಗಳು ಚರ್ಮ ಗಂಟು ರೋಗಕ್ಕೆ ಬಲಿಯಾಗಿದ್ದು ಕಳೆದ ಎರಡು ಮೂರು ದಿನಗಳಲ್ಲಿ ನಾಲ್ಕು ಜಾನುವಾರಗಳು ಬಲಿಯಾಗಿವೆ.ಅಧಿಕಾರಿಗಳ ಭೇಟಿ:

ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕರಾದ ಡಾ. ಮಂಜುನಾಥ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ಸಿದ್ದರಾಜು ಅವರು ಕುರಟ್ಟಿ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚರ್ಮ ಗಂಟು ರೋಗಕ್ಕೆ ಬಲಿಯಾದ ಜಾನುವಾರುಗಳ ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿತ್ತು ವರದಿ ಬಂದ ನಂತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾಗಿ ಜಾನುವಾರುಗಳು ಸಾವನುಪುತ್ತಿವೆ. ಜೊತೆಗೆ ರೋಗ ಮತ್ತಷ್ಟು ಉಲ್ಬಣಗೊಂಡು ಹತೋಟಿಗೆ ಬರದೆ ಗ್ರಾಮದಲ್ಲಿ ರೈತರ ಆತಂಕಕ್ಕೆ ಕಾರಣವಾಗಿದೆ.

ಚರ್ಮ ಗಂಟು ರೋಗಕ್ಕೆ ಹಲವಾರು ಜಾನುವಾರುಗಳು ಬಲಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಉಳಿದ ಜಾನುವಾರುಗಳನ್ನು ಚರ್ಮ ಗಂಟು ರೋಗದಿಂದ ಪಾರು ಮಾಡಲು ಪಶುಪಾಲನ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಬೇಕು. ಹೈನುಗಾರಿಕೆಯನ್ನು ಕಸುಬಾಗಿರುವ ಗ್ರಾಮದಲ್ಲಿ ಮಳೆ ಇಲ್ಲದೆ ಕಂಗಲಾಗಿರುವ ರೈತನಿಗೆ ಕೃಷಿ ಕೈಕೊಟ್ಟಿದೆ. ಜಾನುವಾರಗಳ ಸಾಕಾಣಿಕೆಯಿಂದ ಕುಟುಂಬಗಳ ನಿರ್ವಹಣೆ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳನ್ನು ಸಂರಕ್ಷಿಸುವಂತೆ ಗ್ರಾಮದ ರೈತರು ಮನವಿ ಮಾಡಿದ್ದಾರೆ.ಕುರಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳು ಚರ್ಮಗಂಟು ರೋಗ ಬಾಧೆಯಿಂದ ಸಾವನ್ನಪ್ಪಿರುವ ಬಗ್ಗೆ ಪಶು ಸಂಗೋಪನ ಇಲಾಖೆ ಡಾ. ಸಿದ್ದರಾಜುಗೆ ಸೂಚನೆ ನೀಡಲಾಗಿದೆ. ಗ್ರಾಮಕ್ಕೆ ತೆರಳಿ ಮುಂದೆ ಇಂತಹ ಘಟನೆ ಜರುಗದಂತೆ ಜಾನುವಾರುಗಳಿಗೆ ಲಸಿಕೆಗಳನ್ನು ನೀಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ

ಎಂ. ಆರ್, ಮಂಜುನಾಥ್ , ಶಾಸಕ, ಹನೂರು