ಸಾರಾಂಶ
ಆರಾಧನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗೆ ರಘುನಂದನ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷವಾಗಿ ಫಲಪಂಚಾಮೃತಾಭಿಷೇಕ, ಅರ್ಚನೆ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.ಮಧ್ಯಾರಾಧನೆ ನಿಮಿತ್ತ ಬೃಂದಾವನಕ್ಕೆ ವಿಶೇಷವಾಗಿ ರಜತ, ರೇಷ್ಮೆ ಅಲಂಕಾರ ಮಾಡಲಾಗಿತ್ತು. ನಂತರ ಹಸ್ತೋದಕ, ನೇವೈದ್ಯೆ, ಮಹಾಮಂಗಳಾರತಿ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿ ತುಂಗಭದ್ರಾ ನದಿ ತೀರದ ರಘುನಂದನ ತೀರ್ಥರ ಮೂಲ ಬೃಂದಾವನ ಸನ್ನಿಧಿಯಲ್ಲಿ ರಘುನಂದನ ತೀರ್ಥರ ಮಧ್ಯಾರಾಧನೆ ನಡೆಯಿತು.ಆರಾಧನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗೆ ರಘುನಂದನ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷವಾಗಿ ಫಲಪಂಚಾಮೃತಾಭಿಷೇಕ, ಅರ್ಚನೆ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.
ಮಧ್ಯಾರಾಧನೆ ನಿಮಿತ್ತ ಬೃಂದಾವನಕ್ಕೆ ವಿಶೇಷವಾಗಿ ರಜತ, ರೇಷ್ಮೆ ಅಲಂಕಾರ ಮಾಡಲಾಗಿತ್ತು. ನಂತರ ಹಸ್ತೋದಕ, ನೇವೈದ್ಯೆ, ಮಹಾಮಂಗಳಾರತಿ ನೆರವೇರಿಸಲಾಯಿತು.ಪಂಡಿತ್ ಗುರುಪ್ರಸಾದ್ ಆಚಾರ್ಯ ಮಾತನಾಡಿ, ರಾಘವೇಂದ್ರ ಸ್ವಾಮಿ ಮಠದ ಪೂರ್ವಿಕ ಯತಿಗಳಾದ ರಘುನಂದನ ತೀರ್ಥರ ಕೊಡುಗೆ ಅಪಾರ. ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮೂಲರಾಮದೇವರ ಪ್ರತಿಮೆಯನ್ನು ಪುನಃ ತಂದುಕೊಟ್ಟ ಮಹನೀಯರು. ಅಧ್ಯಾತ್ಮ, ಧಾರ್ಮಿಕ ಜಗತ್ತಿಗೆ ಗುರುಗಳ ಕೊಡುಗೆ ಅನನ್ಯ ಎಂದರು.
ಪಂಡಿತರಾದ ದ್ವಾರಕನಾಥ ಆಚಾರ್ಯ, ಸಿರುಗುಪ್ಪಿ ಕೃಷ್ಣಾಚಾರ್ಯ, ರಮೇಶ್ ಆಚಾರ್ಯ ವಿಶೇಷ ಉಪನ್ಯಾಸ ನೀಡಿದರು. ಭಜನೆ, ಅಷ್ಟೋತ್ತರ ಪಾರಾಯಣ ನಡೆಯಿತು.ಶ್ರೀಮಠದ ಸುಧೀಂದ್ರ ಆಚಾರ್ಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ವ್ಯವಸ್ಥಾಪಕ ಸುಮಂತ್ ಕುಲಕರ್ಣಿ, ವಿಚಾರಣಕರ್ತ ಗುರುರಾಜ್ ದಿಗ್ಗಾವಿ, ಗುನ್ನಾಳ್ ವೆಂಕಟೇಶ, ಶ್ರೀನಿವಾಸ ಪುರಾಣಿಕ, ನರಸಿಂಹ ಆಚಾರ್ಯ, ಭೀಮಸೇನ ಆಚಾರ್ಯ, ಪವನ್ ಆಚಾರ್ಯ, ಅಪ್ಪಣ್ಣ, ಟೀಕಾಚಾರ್ಯ, ವಿಜಿಯೀಂದ್ರ, ನಾಗರಾಜು ಹಾವೇರಿ, ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಅನಂತ ಪದ್ಮನಾಭ ಇತರರಿದ್ದರು.