ಮಸಬಹಂಚಿನಾಳದಲ್ಲಿ ಮಾರುತೇಶ್ವರ ಕಾರ್ತಿಕ

| Published : Dec 06 2023, 01:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಕಾರ್ತಿಕ ಮಹೋತ್ಸವ ಸೋಮವಾರ ರಾತ್ರಿ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಂದ ಸಂಪನ್ನವಾಯಿತು.ಈ ಭಾಗದ ಆರಾಧ್ಯ ದೈವ ಆಂಜನೇಯ ಸ್ವಾಮಿಗೆ ಭಕ್ತರು ಮಧ್ಯಾಹ್ನದಿಂದ ತಂಡೋಪತಂಡವಾಗಿ ಹರಿದು ಬಂದರು. ಕೆಲವರು ಪಾದ ನಡಿಗೆಯಿಂದ ಬಂದರು. ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಕಾರ್ತಿಕ ಮಹೋತ್ಸವ ಸೋಮವಾರ ರಾತ್ರಿ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಂದ ಸಂಪನ್ನವಾಯಿತು.

ಈ ಭಾಗದ ಆರಾಧ್ಯ ದೈವ ಆಂಜನೇಯ ಸ್ವಾಮಿಗೆ ಭಕ್ತರು ಮಧ್ಯಾಹ್ನದಿಂದ ತಂಡೋಪತಂಡವಾಗಿ ಹರಿದು ಬಂದರು. ಕೆಲವರು ಪಾದ ನಡಿಗೆಯಿಂದ ಬಂದರು. ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಹರಕೆ ಹೊತ್ತವರು ಮಡಿ ಉಡಿಯಿಂದ ಭಕ್ತಿ ಸಮರ್ಪಿಸಿದರು.ಸಂಜೆ ಆಗುತ್ತಿದ್ದಂತೆ ಭಕ್ತರು ದೇವಸ್ಥಾನ ಬಳಿ ಆಗಮಿಸಿ ದೀಪ ಹಚ್ಚಿದರು. ಕೆಲವು ಭಕ್ತರು ಮನೆಯಿಂದ ಅಡುಗೆ ತಂದು ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.ಕಣ್ಮನ ಸೆಳೆದ ದೀಪಾಲಂಕಾರ:

ಮಾರುತೇಶ್ವರ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ವಿಶೇಷವಾಗಿ ಮಾಡಿದ ದೀಪಗಳು ಭಕ್ತಾದಿಗಳ ಕಣ್ಮನ ಸೆಳೆದವು. ದೀಪಾಲಂಕಾರ ದೇವಸ್ಥಾನದ ಅಂದ ಹೆಚ್ಚಿಸಿದ್ದವು. ಜತೆಗೆ ಭಕ್ತರನ್ನು ತನ್ನತ್ತ ಸೆಳೆದವು.ಕಾರ್ತಿಕಕ್ಕೆ ಆಗಮಿಸಿದ ಅಪಾರ ಭಕ್ತಾದಿಗಳಿಗೆ ಮಂಗಳವಾರ ಬೆಳಗ್ಗಿನವರೆಗೂ ಅನ್ನಸಂತರ್ಪಣೆ ಜರುಗಿತು. ಗೋದಿ ಹುಗ್ಗಿ, ಕುಂಬಳಿಕಾಯಿ, ಬದನೆಕಾಯಿ ಪಲ್ಲೆ, ಅನ್ನ, ಸಾಂಬಾರ ಪ್ರಸಾದ ವಿತರಣೆ ಮಾಡಲಾಯಿತು. ಗ್ರಾಮಸ್ಥರು ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.