ಸಾರಾಂಶ
ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಕಲ್ಬಿಗಿರಿ ಬೆಟ್ಟದ ರಂಗನಾಥಸ್ವಾಮಿ, ದಾಸರಹಟ್ಟಿ ಬೆಟ್ಟದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಅರೇಹಳ್ಳಿ ಗ್ರಾಮದ ಶ್ರೀ ತಿರುಮಲ ರಂಗನಾಥಸ್ವಾಮಿ, ಫಲವನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವರ ಭಕ್ತರ ಸಮ್ಮುಖದಲ್ಲಿ ದಸರಾ ಬನ್ನಿ ಉತ್ಸವವು ವಿವಿಧ ದೇವರಗಳ ಜಾತ್ರಾ ಮಹೋತ್ಸವವು ವೈಭವದಿಂದ ಭಾನುವಾರ ಜರುಗಿತು.ಕಲ್ಬಿಗಿರಿ ಬೆಟ್ಟದ ಶ್ರೀ ರಂಗನಾಥಸ್ವಾಮಿಯ ಭಕ್ತರುಗಳು ದೀಪಾರಾಧನೆಯ ಬನ್ನಿ ಉತ್ಸವವು ಅರಸು ವಿಜಯನಗರ ಸಂಸ್ಥಾನ ಬೆಳಗುತ್ತಿ ವಂಶಸ್ಥರು ದೇಗುಲದ ಧರ್ಮದರ್ಶಿಗಳು ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡುವ ಮೂಲಕ ಬನ್ನಿ ವೃಕ್ಷಕ್ಕೆ ಪೂಜೆ ನೆರವೇರಿಸಿ ಬನ್ನಿ ಮುಡಿದರು.
ಪೂಜಾ ಕೈಂಕರ್ಯದಲ್ಲಿ ನ್ಯಾಮತಿ ತಹಸೀಲ್ದಾರ್ ಎಂ.ಪಿ.ಕವಿರಾಜ್, ರಾಜಸ್ವ ನಿರೀಕ್ಷಕ ವೃಷಭೇಂದ್ರಸ್ವಾಮಿ, ಕಂದಾಯ ಇಲಾಖೆಯ ಸಿಬ್ಬಂದಿಗಳು, ಧರ್ಮದರ್ಶಿ ಅವಿನಾಸ್ ಅರಸ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.ಅರೇಹಳ್ಳಿ ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ, ಶ್ರೀ ತಿರುಮಲ ರಂಗನಾಥಸ್ವಾಮಿ, ಶ್ರೀ ಚೌಡಮ್ಮ ಮತ್ತು ಶ್ರೀ ಮಾತೆಂಗಮ್ಮ ದೇವಿಯ ಬನ್ನಿ ಮಹೋತ್ಸವವು ನಡೆಯಿತು. ಗ್ರಾಮದ ಶ್ರೀ ರುದ್ರೇಶ್ವರಸ್ವಾಮಿ, ಶ್ರೀ ತಿರುಮಲ ರಂಗನಾಥಸ್ವಾಮಿ, ಶ್ರೀ ಚೌಡಮ್ಮ ಮತ್ತು ಶ್ರೀ ಮಾತೆಂಗಮ್ಮ ದೇವಿಯ ದೇವರಿಗೆ ವಿಶೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಉತ್ಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಬನ್ನಿ ಮುಡಿದರು.
ಕುಂಕುವ ಗ್ರಾಮದ ಸಮೀಪದ ದಾಸರಹಟ್ಟಿ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಬನ್ನಿ ಉತ್ಸವವು ಜರುಗಿತು. ಬನ್ನಿ ಉತ್ಸವದ ಅಂಗವಾಗಿ ರುದ್ರಾಭಿಷೇಕ, ಮಹಾಮಂಗಳಾರತಿ ನಂತರ ರಂಗನಾಥಸ್ವಾಮಿ, ಚಿ.ಕಡದಕಟ್ಟೆ ರಂಗನಾಥಸ್ವಾಮಿ, ಗೊರವರಹಟ್ಟಿ ರಂಗನಾಥಸ್ವಾಮಿ, ಬ್ರಹ್ಮದೇವರು, ಕೇದರನಾಥೇಶ್ವರ, ಆಂಜನೇಯಸ್ವಾಮಿ ಹಾಗೂ ಚಿಕ್ಕಡದಮ್ಮ ದೇವಿ ದೇವರುಗಳು ಕುಂಕುವ ಗ್ರಾಮದಿಂದ ಮಂಗಳವಾಧ್ಯಗಳೊಂದಿಗೆ ಉತ್ಸವ ಹೊರಟು ದಾಸರಹಟ್ಟಿಯ ಬನ್ನಿ ವೃಕ್ಷಕ್ಕೆ ಪೂಜೆ ಮಾಡಿದರು.ಫಲವನಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಗಂಗಾಪರಮೇಶ್ವರಿ, ಸೇವಾಲಾಲ್ ಹಾಗೂ ಮರಿಯಮ್ಮ ದೇವರುಗಳ ನೇತೃತ್ವದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಅಂಬು ಹೊಡೆಯುವುದರ ಮೂಲಕ ದಸರಾ ಬನ್ನಿಯನ್ನು ಮುಡಿಯಲಾಯಿತು.