31ರಿಂದ ಶಾಲೆಗಳಲ್ಲಿ ಮಕ್ಕಳ ಕಲರವ: ಸ್ವಾಗತಕ್ಕೆ ಸಿದ್ಧತೆ

| Published : May 29 2024, 12:46 AM IST

31ರಿಂದ ಶಾಲೆಗಳಲ್ಲಿ ಮಕ್ಕಳ ಕಲರವ: ಸ್ವಾಗತಕ್ಕೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಶಾಲೆಗೆಬರುವ ದಿನ ಶಾಲೆಯಲ್ಲಿ ಹಬ್ಬದಂತಿರಬೇಕು, ಈಗಾಗಲೇ ಶಾಲೆಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸರಬರಾಜು ಮಾಡಲು ಅಗತ್ಯ ಕ್ರಮವಹಿಸಲಾಗಿದೆ, ಶಾಲಾರಂಭದ ದಿನ ಮೇ ೩೦ ಅಥವಾ ೩೧ ರಂದೇ ಮಕ್ಕಳಿಗೆ ವಿತರಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರಶಾಲೆಗಳು ಆರಂಭಕ್ಕೆ ಮೇ ೨೯ ರಂದು ಸಕಲ ಸಿದ್ದತೆ ಮಾಡಿಕೊಂಡು ಮೇ.೩೧ ರಂದು ಶಾಲಾ ಆರಂಭೋತ್ಸವ ಹಬ್ಬವಾಗಿ ಸಂಭ್ರಮದಿಂದ ಆಚರಿಸಿ, ತಳಿರುತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳನ್ನು ಸ್ವಾಗತಿಸಿ, ಈ ಶೈಕ್ಷಣಿಕ ಸಾಲನ್ನು ಗುಣಾತ್ಮಕ ಶೈಕ್ಷಣಿಕ ವರ್ಷವಾಗಿಸಲು ಸಜ್ಜಾಗಿ ಎಂದು ಶಿಕ್ಷಕರಿಗೆ ಬಿಇಓ ಕನ್ನಯ್ಯ ಕರೆ ನೀಡಿದರು.ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಾಲಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಕ್ಕಳಿಗೆ ಮೇ೩೧ರೊಳಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿರಬೇಕು ಎಂದು ತಾಕೀತು ಮಾಡಿದರು.ಶೇ.100 ಫಲಿತಾಶ ಗುರಿ

ಶಾಲೆಗಳ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿ, ನಿಮ್ಮ ಗುರಿ ಶೇ. ೧೦೦ ಫಲಿತಾಂಶವಾಗಿರಲಿ, ಪ್ರತಿ ಮಗುವು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುವ ಸಂಕಲ್ಪ ಮಾಡಬೇಕು. ಶಾಲೆ ಆರಂಭಕ್ಕೆ ಮುನ್ನಾ ಒಂದು ದಿನ ಎಲ್ಲಾ ಶಿಕ್ಷಕರು, ಸಿಬ್ಬಂದಿ ಶಾಲಾ ಪ್ರಾರಂಭದ ಪೂರ್ವದಲ್ಲಿ ಶಾಲೆಗಳನ್ನು ಸಿದ್ದಗೊಳಿಸಿ ಆಕರ್ಷಣೀಯಗೊಳಿಸಲು ಕ್ರಮ ವಹಿಸುವಂತೆ ಹೇಳಿದರು. ಮಕ್ಕಳು ಶಾಲೆಗೆಬರುವ ದಿನ ಶಾಲೆಯಲ್ಲಿ ಹಬ್ಬದಂತಿರಬೇಕು, ಈ ಸಂದೇಶ ಪೋಷಕರಿಗೆ ತಲುಪಬೇಕು. ಈಗಾಗಲೇ ಶಾಲೆಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸರಬರಾಜು ಮಾಡಲು ಅಗತ್ಯ ಕ್ರಮವಹಿಸಲಾಗಿದೆ, ಶಾಲಾರಂಭದ ದಿನ ಮೇ ೩೦ ಅಥವಾ ೩೧ ರಂದೇ ಮಕ್ಕಳಿಗೆ ವಿತರಿಸಲು ಸೂಚಿಸಿದರು.೩೧ ರಿಂದ ದಾಖಲಾಗಿ ಆಂದೋಲನಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕ್ರಮವಹಿಸಲು ಇಲಾಖೆಯ ಸುತ್ತೋಲೆಯಂತೆ ಮೇ ೩೧ ರಿಂದ ಜೂ.೩ ರವರೆಗೂ ದಾಖಲಾತಿ ಆಂದೋಲನ ನಡೆಸಿ, ಮಕ್ಕಳನ್ನು ಶಾಲೆಗೆ ಸ್ವಾಗತಿಸಿ, ಮತ್ತಷ್ಟು ಮಕ್ಕಳಿಗೆ ನಿಮ್ಮ ಕಾರ್ಯ ಪ್ರೇರಣೆ ನೀಡುವಂತಿರಲಿ, ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಆಕರ್ಷಣೀಯವಾದ ರೀತಿಯಲ್ಲಿ ಸಜ್ಜುಗೊಳಲಿಸಲು ಸೂಚಿಸಿದರು.೨೯ ರಿಂದ ಜೂ.೧೫ ಮಿಂಚಿನ ಸಂಚಾರಡಿಡಿಪಿಐ ಹಾಗೂ ಬಿಇಒ ನೇತೃತ್ವದ ತಂಡಗಳಿಂದ ಮಿಂಚಿನ ಸಂಚಾರ ನಡೆಯಲಿದೆ. ಮಿಂಚಿನ ಸಂಚಾರದ ತಂಡಗಳು ಜಿಲ್ಲಾದ್ಯಂತ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಸ್ವಚ್ಚತೆ, ಶಾಲಾ ಪ್ರಾರಂಭೋತ್ಸವಕ್ಕೆ ಕೈಗೊಂಡಿರುವ ಕ್ರಮಗಳು, ದಾಖಲೆಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.೮, ೯ನೇ ತರಗತಿಗಳಲ್ಲಿ ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳನ್ನು ಮುಂದಿನ ತರಗತಿಗಳಿಗೆ ದಾಖಲಿಸಿಕೊಳ್ಳುವುದಿಲ್ಲ ಎಂದರೆ ಅದು ಅಪರಾಧವಾಗುತ್ತದೆ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೆ ಪಟ್ಟಿ ಮಾಡಿ, ಶಿಕ್ಷಕರ ಕೊರತೆ ಇದ್ದರೆ ಅಗತ್ಯ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆಗೆ ಮಾಹಿತಿ ರವಾನಿಸಲು ಸೂಚಿಸಿ ಎಂದು ತಿಳಿಸಿದರು.ಶುಚಿ, ರುಚಿ ಊಟಕ್ಕೆ ಆದ್ಯತೆತಾಲೂಕು ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಂ ಮಾತನಾಡಿ, ಶಾಲೆ ಆರಂಭಕ್ಕೆ ಮುನ್ನವೇ ಬಿಸಿಯೂಟಕ್ಕೆ ಆಹಾರಧಾನ್ಯ, ಹಾಲಿನಪುಡಿ ಸರಬರಾಜಾಗಲಿದೆ, ಕಳೆದ ಬಾರಿಯ ಉಳಿಕೆ ಧಾನ್ಯಗಳನ್ನು ಸಂರಕ್ಷಣೆ ಮಾಡಿ ಎಂದು ತಾಕೀತು ಮಾಡಿದ ಅವರು, ಮಕ್ಕಳಿಗೆ ಗುಣಮಟ್ಟದ, ಶುಚಿ, ರುಚಿಯಾದ ಆಹಾರ ಸಿಗಬೇಕು ಎಂದರು.ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಇಸಿಒಗಳಾದ ರಾಘವೇಂದ್ರ, ಸಿಆರ್‌ಪಿ ಜಮೀಲ್ ಅಹಮದ್ ಇದ್ದರು.