ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೃಷ್ಣಮೂರ್ತಿ ಭಟ್ಟ

| Published : May 29 2024, 12:46 AM IST

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೃಷ್ಣಮೂರ್ತಿ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಕಾಲೇಜಿನ ಬಿಸಿಎ ವಿಭಾಗ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚುತ್ತಿದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜತೆ ಶಿಸ್ತು ಮತ್ತು ಸಂಸ್ಕಾರ ನೀಡುತ್ತಿದ್ದೇವೆ.

ಹೊನ್ನಾವರ: ಕಳೆದ 60 ವರ್ಷಗಳಿಂದ ವಿದ್ಯಾದಾನ ಮಾಡಿದ ಹಿರಿಮೆ ನಮ್ಮ ಸಂಸ್ಥೆಯದ್ದು. ನಮ್ಮ ಸಂಸ್ಥೆಯ ಎಸ್‌ಡಿಎಂ ಕಾಲೇಜು 3 ತಲೆಮಾರುಗಳಿಗೆ ಶಿಕ್ಷಣ ನೀಡಿದ ಹಿರಿಮೆ ಹೊಂದಿದೆ. ಸೇವಾಮನೋಭಾವನೆಯಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆ ಎಂದು ಎಂಪಿಇ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ತಿಳಿಸಿದರು.

ಎಸ್‌ಡಿಎಂ ಪದವಿ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿ ಪಾಲಕರಿಗೆ ಬಿಸಿಎ ಕುರಿತು ತಿಳಿವಳಿಕೆ ಕಾರ್ಯಕ್ರಮವಾದ ಮೀಟ್- ಗ್ರೀಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಕಾಲೇಜಿನ ಬಿಸಿಎ ವಿಭಾಗ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚುತ್ತಿದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜತೆ ಶಿಸ್ತು ಮತ್ತು ಸಂಸ್ಕಾರ ನೀಡುತ್ತಿದ್ದೇವೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದ ಸಂಪತ್ತಾಗುತ್ತಾರೆ. ಪಠ್ಯದ ಜತೆಗೆ ಸಹಪಠ್ಯಕ್ಕೂ ವಿಫುಲ ಅವಕಾಶಗಳಿವೆ. ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಂಸಿಎ ಪ್ರಾರಂಭಿಸುವ ಪ್ರಯತ್ನದಲ್ಲಿದ್ದೇವೆ ಎಂದರು.

ಪ್ರಾಚಾರ್ಯೆ ಡಾ. ರೇಣುಕಾದೇವಿ ಗೋಳಿಕಟ್ಟೆ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು. ನಮ್ಮ ಕಾಲೇಜಿನಲ್ಲಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣ ನೀಡುತ್ತಿದ್ದೇವೆ. ಎಲ್ಲ ವಿಭಾಗಗಳಿಗೂ ಉತ್ತಮ ಪ್ರಾಧ್ಯಾಪಕ ವೃಂದವಿದೆ. ಸ್ಥಳೀಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಎಸ್.ಎಂ. ಭಟ್, ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ, ಡಾ. ಶಿವಾರಾಮ ಶಾಸ್ತ್ರಿ, ಬಿಸಿಎ ವಿಭಾಗದ ಮುಖ್ಯಸ್ಥರಾದ ವಂದನಾ ಭಟ್ಟ ಉಪಸ್ಥಿತರಿದ್ದರು.