ಮಕ್ಕಳ ಪ್ರತಿಭೆ ಅನಾವರಣವಾಗಬೇಕು: ಸೂರಿ ಶ್ರೀನಿವಾಸ್

| Published : Jul 20 2024, 12:53 AM IST

ಮಕ್ಕಳ ಪ್ರತಿಭೆ ಅನಾವರಣವಾಗಬೇಕು: ಸೂರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಕ್ಕಳಲ್ಲಿ ಅಡಗಿರುವ ಕಲೆ, ರಂಗೋಲಿಯಂತಹ ಹಲವಾರು ಪ್ರತಿಭೆಗಳು ಆನಾವರಣವಾಗಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಸೂರಿ ಶ್ರೀನಿವಾಸ್ ಹೇಳಿದ್ದಾರೆ.

- ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕ ಸೇವಾ ದೀಕ್ಷೆ ಸಮಾರಂಭಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳಲ್ಲಿ ಅಡಗಿರುವ ಕಲೆ, ರಂಗೋಲಿಯಂತಹ ಹಲವಾರು ಪ್ರತಿಭೆಗಳು ಆನಾವರಣವಾಗಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಸೂರಿ ಶ್ರೀನಿವಾಸ್ ಹೇಳಿದ್ದಾರೆ.

ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮತ್ತು ಐಕ್ಯೂಎಸಿಇವರ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯದಲ್ಲಿಯೇ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕ ಸೇವಾ ದೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಇತಿಹಾಸ ಮತ್ತು ರಾಜ್ಯದಲ್ಲೇ ಪ್ರಥಮ ಬಾರಿಗೆ ಕಸಾಪ ಯುವ ಘಟಕ ಈ ಕಾಲೇಜಿನಲ್ಲಿ ಪ್ರಾರಂಭವಾಗಿರುವುದು ಎಲ್ಲರಿಗೂ ಸಂತೋಷ ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ರವಿ ದಳವಾಯಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕ ಸ್ಥಾಪಿಸಿದ ಕೀರ್ತಿಗೆ ಪಾತ್ರ ರಾಗಿದ್ದಾರೆ. ಕನ್ನಡ ಹಬ್ಬವನ್ನು ಇಲ್ಲಿ ಸಂಭ್ರಮದಿಂದ ಆಯೋಜಿಸಲಾಗಿದೆ ಕಸಾಪ ಜಿಲ್ಲೆಯಲ್ಲೇ ಹಲವು ಪ್ರಥಮಗಳನ್ನು ಸಾಧಿಸಿದೆ. ಕನ್ನಡದ ಕಾಳಜಿ ಪ್ರತಿಯೊಬ್ಬರಲ್ಲೂ ಹುಟ್ಟಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ರಾಜ್ಯದಲ್ಲೇ ಪ್ರಥಮವಾಗಿ ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕವನ್ನು ತರೀಕೆರೆಯಲ್ಲಿ ಪ್ರಾರಂಭಿಸಿದ್ದು. ಈ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಸಾಹಿತ್ಯ ಪರಿಷತ್ತು ಯುವ ಜನಾಂಗಕ್ಕೆ ಒತ್ತು ನೀಡಿ, ಕನ್ನಡ ಜಾಗೃತಿ ಮೂಡಿಸಬೇಕು. ಪ್ರತಿಭೆಗಳನ್ನು ಗುರುತಿಸಬೇಕು ಎಂದು ಹೇಳಿದರು.

ಸಾಹಿತಿ ಹಾಗೂ ಕುವೆಂಪು ವಿವಿ ಹಿರಿಯ ಪ್ರಾಧ್ಯಾಪಕ ಜಿ.ಪ್ರಶಾಂತ್ ನಾಯಕ್ ಮಾತನಾಡಿ ಪುಸ್ತಕಗಳನ್ನು ಓದಬೇಕು, ಕನ್ನಡ ಎಂಬುವುದು ನಮ್ಮ ಬದುಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕದ ನೂತನ ಅಧ್ಯಕ್ಷ ವೈ.ಪ್ರೇಮ್ ಕುಮಾರ್ ಮಾತನಾಡಿ ಯುವ ಕವಿಗೋಷ್ಠಿ, ಕಾಲೇಜಿನಲ್ಲಿ ಜಿಲ್ಲಾ ಯುವ ಸಮ್ಮೇಳನ ಅಥವಾ ತಾಲೂಕು ಯುವ ಸಮ್ಮೇಳನ ನಡೆಸಲು ಅವಕಾಶ ಕೊಡಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರಲ್ಲಿ ಮನವಿ ಮಾಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಮಂಜುನಾಥ್ ಟಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಸಲೇಹಳ್ಳಿ ಸೋಮಶೇಖರ್ ಏಕಪಾತ್ರಾಭಿನಯ ಮಾಡಿದರು. ಹಿರೇನಲ್ಲೂರು ಶ್ರೀನಿವಾಸ್ ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾ ವಿಧಿ ಬೋಧೀಸಿದರು. ಸಾಹಿತಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಸಬಿತಾ ಬನ್ನಾಡಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಚಿಕ್ಕಮಗಳೂರು ಮಹಿಳಾ ಕಸಾಪ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್, ತರೀಕೆರೆ ಮಹಿಳಾ ಕಸಾಪ ಅಧ್ಯಕ್ಷೆ ಸುನಿತಾ ಕಿರಣ್, ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ತ.ಮ. ದೇವಾನಂದ್, ಕೋಶಾಧ್ಯಕ್ಷ ಕೆ.ಜಯಸ್ವಾಮಿ, ಮಧು, ಮತ್ತಿತರರು ಭಾಗವಹಿಸಿದ್ದರು.

19ಕೆಟಿಆರ್.ಕೆ.04ಃ

ತರೀಕೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಾಡಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕ ಸೇವಾ ದೀಕ್ಷೆ ಸಮಾರಂಭವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಯುವ ಘಟಕದ ನೂತನ ಅಧ್ಯಕ್ಷ ವೈ.ಪ್ರೇಮ್ ಕುಮಾರ್ ಮತ್ತಿತರರು ಇದ್ದರು.

---------------------