ಕನ್ನಡಪ್ರಭ ವಾರ್ತೆ ಪಾವಗಡ

ವೈದ್ಯರಂದರೆ ಮಕ್ಕಳಿಗೆ ಶತ್ರುಗಳಾಗಿ ಬಿಂಬಿಸಬೇಡಿ ವೈದ್ಯರಿಗೆ ಹೇಳಿ ಇಂಜೆಕ್ಷನ್ ಹಾಕಿಸುತ್ತೇನೆ ಎಂದು ಭಯ ಬೀಳಿಸಬೇಡಿ, ನಮ್ಮ ಮೇಲೆ ಮಕ್ಕಳಿಗೆ ಪ್ರೀತಿ ವಿಶ್ವಾಸ ಇರುವಂತ ವಾತಾವರಣ ರೂಪಿಸುವಂತೆ ಡಾ.ಅಜಯ್ ಫೋಷಕರಿಗೆ ಸಲಹೆ ನೀಡಿದರು. ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಪಟ್ಟಣದ ಅಕ್ಷಯ ಬ್ಲೂ ಜೆಮ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬ‍ಳಿಕ ಮಾತನಾಡಿದರು. ಮಕ್ಕಳಿಗೆ ಜಂಕ್ , ಬೇಕರಿ ತಿನುಸುಗಳನ್ನು ತಿನ್ನಿಸಬೇಡಿ. ಅವುಗಳಿಂದ ದೂರ ಇದ್ದರೆ ಆಸ್ಪತ್ರೆಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ. ತಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿಸಲು ತಾಯಂದಿರು ಪಾತ್ರ ಬಹು ಮುಖ್ಯವಾಗಿದೆ. ಉತ್ತಮ ಆಹಾರ ನೀಡಬೇಕು.ವೈದ್ಯರ ಬಗ್ಗೆ ಮಕ್ಕಳಲ್ಲಿ ಭಯಾಬೀತಿ ಸೃಷ್ಟಿಸಬೇಡಿ ಎಂದು ಕಿವಿ ಮಾತು ಹೇಳಿದರು. ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಬಾಬು ಮಾತನಾಡಿ, ನಮ್ಮ ಸೇವೆ ಗುರುತಿಸಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ನಮಗೆ ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಗಣೇಶ್ ಮಾತನಾಡಿದರು. ಹಿರಿಯ ಪತ್ರಕರ್ತ ಸತ್ಯ ಲೋಕೇಶ್, ಸೇವಾ ಟ್ರಸ್ಟ್ ವತಿಯಿಂದ ಎಲ್ಲಾ ರಾಷ್ಟ್ರೀಯ ಹಬ್ಬದ ದಿನಾಚರಣೆಯನ್ನು ಆಚರಿಸಿ ಸಂಬಂಧಪಟ್ಟ ಇಲಾಖೆಯವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ತಾಲೂಕು ವೈದ್ಯಾಧಿಕಾರಿ ನಾಗೇಶ್ ನಾಯಕ, ಡಾ. ನವೀನ್ ಡಾ. ರಾಜೇಶ್, ಮಾತನಾಡಿದರು.ಈ ವೇಳೆ, ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಾನಂ ಶಶಿಕಿರಣ್ ಸರ್ಕಾರಿ ಆಸ್ಪತ್ರೆಯ ಸೂಪರ್ವೈಸರ್ ರಮೇಶ್, ಅಕ್ಷಯ ಬ್ಲೂ ಜೆಮ್ ಶಾಲೆಯ ಆಡಳಿತಾಧಿಕಾರಿ ಸಂಧ್ಯಾಮಾನಂ, ಶಿಕ್ಷಕಿಯರಾದ ಭವ್ಯ ಸೀಮಾ ವಿಮಲ ನಜ್ರಮಾ ಗಾನಶ್ರಿ, ಪುಷ್ಪ ಮಂಜುನಾಥ್ ಮತ್ತು ಪೋಷಕರು ಮಕ್ಕಳು ಹಾಜರಿದ್ದರು.