ಜನವಸತಿ ಪ್ರದೇಶದಲ್ಲಿ ಬಾರ್‌ ತೆರೆಯಲು ನಾಗರಿಕರ ವಿರೋಧ

| Published : Feb 08 2024, 01:32 AM IST

ಜನವಸತಿ ಪ್ರದೇಶದಲ್ಲಿ ಬಾರ್‌ ತೆರೆಯಲು ನಾಗರಿಕರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ದರ್ಗಾ ಜೋಗಿಹಳ್ಳಿಯ ಗಣೇಶ ದೇವಾಲಯ ಸಮೀಪ ಹಳೇ ರಾಜೇಶ್ವರಿ ಟೆಂಟ್‌ ಸಮೀಪ ಜನವಸತಿ ಪ್ರದೇಶದಲ್ಲಿ ಬಾರ್‌ ತೆರೆಯಲು ಸಿದ್ದತೆಗಳು ನಡೆದಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು, ಬುಧವಾರ ಸಂಜೆ ಸ್ಥಳದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಇದು ಕೊಳಗೇರಿಯ ಸಮೀಪದ ಪ್ರದೇಶ ಹಾಗೂ ಜನವಸತಿ ಪ್ರದೇಶವಾಗಿದ್ದು, ಈ ಸ್ಥಳದಲ್ಲಿ ಬಾರ್‌ ತೆರೆದರೆ ಸ್ಥಳೀಯರಿಗೆ ಅನೇಕ ರೀತಿಯ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಮಹಿಳೆಯರು, ಮಕ್ಕಳು ಸಂಚರಿಸುವುದು ಕಷ್ಟಕರವಾಗಲಿದ್ದು, ಅಕ್ಕಪಕ್ಕದ ಮನೆಗಳಲ್ಲಿ ವಾಸ ಮಾಡುವುದು ಕೂಡ ಸವಾಲಿನ ಕೆಲಸವಾಗುತ್ತದೆ. ಪಿಜಿ ಮಾಡುವುದಾಗಿ ಹೇಳಿ, ಬಳಿಕ ಲಾಡ್ಜಿಂಗ್ ಮತ್ತು ಬೋರ್ಡಿಂಗ್‌ ಹೆಸರಿನಲ್ಲಿ ರೆಸ್ಟೋರೆಂಟ್ ಆರಂಬಿಸುವ ಕೆಲಸ ನಡೆದಿದೆ. ಈ ಹಿನ್ನಲೆಯಲ್ಲಿ ಕೂಡಲೇ ಬಾರ್‌ ತೆರೆಯುವ ಪ್ರಯತ್ನ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಆರಕ್ಷಕ ನಿರೀಕ್ಷಕ ಸಾದಿಕ್ ಪಾಷಾ, ಸ್ಥಳ ಪರಿಶೀಲನೆ ನಡೆಸಿ, ನಾಗರಿಕರ ಅಹವಾಲು ಆಲಿಸಿದರು. ಸಾರ್ವಜನಿಕರ ಒತ್ತಾಯದ ಕುರಿತು ಸ್ಥಳದ ಮಾಲೀಕರೊಂದಿಗೆ ಚರ್ಚಿಸಿ ಧನಾತ್ಮಕವಾಗಿ ಸಮಸ್ಯೆಯ ಪರಿಹಾರಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.

ನಗರಸಭಾ ಸದಸ್ಯೆ ಪ್ರಭಾ ನಾಗರಾಜ್ ಮಾತನಾಡಿ, ಸ್ಥಳೀಯ ನಾಗರಿಕರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಬಾರ್‌ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ನಾಗಣ್ಣ, ಸ್ಥಳೀಯರಾದ ಆದಿಲ್ ಪಾಷಾ, ನಯಾಜ್‌ಖಾನ್, ಮಹಬೂಬ್‌ ಖಾನ್, ಮುಜಾಹಿದ್ ಖಾನ್, ಇಮ್ತಿಯಾಜ್ ಪಾಷಾ, ವಾಜೀದ್ ಪಾಷಾ, ಸೈಯದ್ ಬದ್ರುದ್ದೀನ್, ಚಾಂದ್‌ಪಾಷಾ ಮತ್ತಿತರರು ಉಪಸ್ಥಿತರಿದ್ದರು.ಫೋಟೋ-

7ಕೆಡಿಬಿಪಿ5- ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿಯ ಜನವಸತಿ ಪ್ರದೇಶದಲ್ಲಿ ಬಾರ್‌ ತೆರೆವ ಪ್ರಯತ್ನ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.