ಸಾರಾಂಶ
citu protest for fulfill there demands
ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರು
ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲೂಕು ಸಮಿತಿ ಪದಾಧಿಕಾರಿಗಳಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರುತಾಲೂಕು ಆಡಳಿತ ಸೌಧದ ಆವರಣದಲ್ಲಿ ಮನವಿ ಸಲ್ಲಿಸಿರುವ ಅವರು ಎಲ್ಲಾ ಸಂಘಟಿತ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿ ಖಾಸಗೀಕರಣ ನಿಲ್ಲಿಸುವ ಮೂಲಕ ಎನ್ಎಂಪಿ ರದ್ದು ಮಾಡಬೇಕು. ಕಾರ್ಮಿಕರಿಗೆ ಮಾಸಿಕ 25000 ಗಳ ಕನಿಷ್ಠ ವೇತನ ನಿಗದಿ ಮಾಡಬೇಕು. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದಿದ್ದಾರೆ.
ಅಂಗನವಾಡಿ ಬಿಸಿಯೂಟ ಆಶಾ ಕಾರ್ಯಕರ್ತರ ಉದ್ಯೋಗವನ್ನು ಖಾಯಂಗೊಳಿಸಿ ಕೆಲಸದ ಸಮಯವನ್ನು ಹೆಚ್ಚಿಸಲು ಶಾಸನ ಬದ್ಧ ತಿದ್ದುಪಡಿಗಳನ್ನು ರದ್ದುಪಡಿಸಬೇಕು. ಹಮಾಲಿ, ಬಂಡಿ ಚಾಲಕರಿಗೆ ಕಾರ್ಮಿಕ ಕಾರ್ಡ್ ವಿತರಿಸಿ ಸಾಮಾಜಿಕ ಭದ್ರತೆ ಯೋಜನೆಗಳನ್ನು ನೀಡಬೇಕು. ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಈವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಸಾಗುವಳಿದಾರರು ಸಂಕಷ್ಟಕ್ಕೆ ಒಳಗಾಗಿದ್ದು ಎಲ್ಲ ಸಾಗುವಳಿದಾರರಿಗೆ ಸಾಗುವಳಿ ಪತ್ರ ವಿತರಿಸಬೇಕು. ಅವೈಜ್ಞಾನಿಕ ನೇಮಕಾತಿ ಯಾಗಿರುವ ಅಗ್ನಿವೀರ್ ಸೇರಿದಂತೆ ವಿವಿಧ ಬಗೆಯ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಿರ ಉದ್ಯೋಗಗಳನ್ನು ಮುಂದುವರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ದಾನಸೂರ ನಾಯಕ, ಟಿ ನಾಗರಾಜ, ಗುರಪ್ಪ, ಪಾರ್ವತಮ್ಮ, ಜ್ಯೋತಿ ಶಿವಣ್ಣ ಪೂಜಾರಿ ಮಲ್ಲಣ್ಣ, ಈರಣ್ಣ, ಎಸ್ ಓಬಣ್ಣ, ಯಶೋಧಮ್ಮ, ದುರುಗೇಶ, ಹನುಮಂತ ಇದ್ದರು.
-----