ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್: ಟೀಮ್ ಬ್ರದರ್ಸ್ ವಿನ್ನರ್ಸ್‌

| Published : Jul 11 2024, 01:31 AM IST

ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್: ಟೀಮ್ ಬ್ರದರ್ಸ್ ವಿನ್ನರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಆರ್‌ವಿ ಫುಟ್ಬಾಲ್‌ ಕಪ್‌ ಹೊನಲು ಬೆಳಕಿನ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಟೀಮ್ ಭಗವತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಅನುಕ್ರಮವಾಗಿ ಟೀಮ್ ಒನ್ ಟಚ್ ಮತ್ತು ವೈಲ್ಡ್ ಮಾಸ್ಟರ್ಸ್ ತಂಡ ಪಡೆದುಕೊಂಡವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಶ್ರೀ ರಾಜೇಶ್ವರಿ ವಿದ್ಯಾಲಯ ವತಿಯಿಂದ ನಡೆದ ಎಸ್‌ಆರ್‌ವಿ ಫುಟ್ಬಾಲ್‌ ಕಪ್‌ ಹೊನಲು ಬೆಳಕಿನ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಟೀಮ್ ಭಗವತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಅನುಕ್ರಮವಾಗಿ ಟೀಮ್ ಒನ್ ಟಚ್ ಮತ್ತು ವೈಲ್ಡ್ ಮಾಸ್ಟರ್ಸ್ ತಂಡ ಪಡೆದುಕೊಂಡವು.

ಇತ್ತೀಚೆಗೆ ನಗರದ ಗಾಂಧಿ ಮೈದಾನದಲ್ಲಿ ನಡೆದ ಎಸ್‌ಆರ್‌ವಿ ಚಾಂಪಿಯನ್ ಲೀಗ್ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ತಂಡವು ಟೀಮ್ ಒನ್ ಟಚ್ ವಿರುದ್ಧ ಪೆನಾಲ್ಟಿಯಲ್ಲಿ 1-0 ಅಂತರದ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.

ಎಲಿಮಿನೇಟರ್ ಪಂದ್ಯವು ಟೀಮ್ ಭಗವತಿ ಹಾಗೂ ವೈಲ್ಡ್ ಮಾಸ್ಟರ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಟೀಮ್ ಭಗವತಿ ತಂಡವು ಪೆನಾಲ್ಟಿ ಶೂಟ್ ಔಟ್ ನಲ್ಲಿ 8-7 ರ ಜಯ ಪಡೆದು ಕೊಂಡು ಕ್ವಾಲಿಫಯರ್ ಗೆ ಲಗ್ಗೆ ಇಟ್ಟಿತು.

ದ್ವಿತೀಯ ಕ್ವಾಲಿಫಯರ್ ಪಂದ್ಯವು ಟೀಮ್ ಭಗವತಿ ಹಾಗೂ ಟೀಮ್ ಒನ್ ಟಚ್ ತಂಡದ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ 2 ತಂಡಗಳು ಪೂರ್ಣ ಅವಧಿಯಲ್ಲಿ ಯಾವುದೆ ಗೋಲ್ ಗಳಿಸದೆ ಸಮಬಲ ಸಾಧಿಸಿ ಪೆನಾಲ್ಟಿಯತ್ತ ಸಾಗಿದವು. ಪೆನಾಲ್ಟಿ ಶೂಟೌಟ್‌ನಲ್ಲಿ ಟೀಮ್ ಭಗವತಿ ತಂಡವು 2-0 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್‌ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.

ಟೀಮ್ ಭಗವತಿ ಹಾಗೂ ಟೀಮ್ ಬ್ರದರ್ಸ್ ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಮ್ ಬ್ರದರ್ಸ್ ತಂಡವು ಭಗವತಿ ವಿರುದ್ಧ 3-0 ಅಂತರದಲ್ಲಿ ಗೆದ್ದು ಎಸ್ ಆರ್ ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್-1 ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಹೈ ಸ್ಕೋರರ್ ಪುರಸ್ಕಾರವನ್ನು ಟೀಮ್ ಬ್ರದರ್ಸ್ ತಂಡದ ಹಿಶಾಮ್ ಪಡೆದುಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಟೀಮ್ ಒನ್ ಟಚ್ ತಂಡದ ದಿನೇಶ್ (ಕುಳ್ಳಿ) ಪಡೆದು ಕೊಂಡರು. ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಟೀಮ್ ಬ್ರದರ್ಸ್ ತಂಡದ ಸುರೇಶ್ ಪಡೆದುಕೊಂಡರೆ , ಉದಯೋನ್ಮೋಕ ಪ್ರಶಸ್ತಿಯನ್ನು ಟೀಮ್ ಭಗವತಿ ತಂಡದ ಆಕಾಶ್ ಪಡೆದರು.

ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಟೀಮ್ ಭಗವತಿ ತಂಡದ ನಾಯಕ ಲೋಹಿತ್ (ಪಿಕ ) ಪಡೆದು ಕೊಂಡರು.

ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ಡಿವೈಎಸ್ಪಿ ಮಹೇಶ್‌ ಕುಮಾರ್ ಪಾಲ್ಗೊಂಡರು.

ಶ್ರೀ ರಾಜೇಶ್ವರಿ ವಿದ್ಯಾಲಯದ ಅಧ್ಯಕ್ಷ ಗೋವಿಂದ ರಾಜು ಮಾತನಾಡಿದರು. ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ರಾಜೇಶ್ವರಿ ವಿದ್ಯಾಲಯದ ನಿರ್ದೇಶಕ ದೇವರಾಜು, ಚುಮ್ಮಿ ದೇವಯ್ಯ, ನಗರ ಸಭೆ ಮಾಜಿ ಕೌನ್ಸಿಲರ್ ದಾಕ್ಷಾಯಿಣಿ ವಾಸುದೇವ್‌, ನಿರ್ದೇಶಕ ಸತೀಶ್, ಪ್ರಾಂಶುಪಾಲ ಲಕ್ಷ್ಮಿ ಸಚಿನ್, ಉಪಪ್ರಾಂಶುಪಾಲ ಮಂದಣ್ಣ, ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್‌, ಶ್ರೀ ರಾಜೇಶ್ವರಿ ವಿದ್ಯಾಲಯದ ಸದಸ್ಯರ ಕಿರಣ್ ಕುಮಾರ್, ಪ್ರಶಾಂತ್, ದಿಶಾಂತ್, ಪ್ರಜ್ವಲ್ ಮತ್ತಿತರರು ಪಾಲ್ಗೊಂಡರು.

ದೈಹಿಕ ಶಿಕ್ಷಣ ಶಿಕ್ಷಕ ಉನ್ನೈಸ್ ಎಂಎಂ, ಇಕ್ರಾ ಪಬ್ಲಿಕ್ ಸ್ಕೂಲ್ ಸಿದ್ದಾಪುರ ಹಾಗೂ ಬೆಂಗಳೂರಿನ ನರಸಿಂಹ (ನಾಣಿ) ತೀರ್ಪುಗಾರರಾಗಿದ್ದರು. ತೀರ್ಥಹಳ್ಳಿಯ ಶಿವು ಗೌಡ ಹಾಗೂ ರಮೇಶ್ ಹೆಬ್ಬಟ್ಟಗೇರಿ ವೀಕ್ಷಕ ವಿವರಣೆ ನೀಡಿದರು. ಅಶೋಕ್ ಮಡಿಕೇರಿ, ರಫೀಕ್, ಹಾಗೂ ಅಜಿತ್ ಲೈವ್‌ ಸ್ಕೋರರ್‌ಗಳಾಗಿದ್ದರು.