ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುಬಡ ಮತ್ತು ಮಧ್ಯಮ ವರ್ಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಶುದ್ಧ ನೀರಿನ ಘಟಕಗಳಿಗೆ (ಆರ್‌ಓ ಫಟಕ) ಏಕರೂಪದ ದರ ನಿಗದಿಗೆ ಬೆಂಗಳೂರು ಜಲಮಂಡಳಿ ನಿರ್ಧರಿಸಿದ್ದು, ಪ್ರತಿ 20 ಲೀಟರ್‌ಗೆ 10 ರು. ನಿಗದಿಗೆ ಚಿಂತನೆ ನಡೆಸಿದೆ.
ಇತ್ತೀಚೆಗಷ್ಟೇ ಬಿಬಿಎಂಪಿ ನಿರ್ವಹಣೆ ಮಾಡುತ್ತಿದ್ದ 1,084 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿಯು ಆರ್‌ಓ ಘಟಕಗಳನ್ನು ದುರಸ್ತಿ ಪಡಿಸುವುದರೊಂದಿಗೆ ನಿರ್ವಹಣೆಗೆ ಗುತ್ತಿಗೆ ನೀಡುವುದಕ್ಕೆ ಯೋಜನೆ ರೂಪಿಸಿದೆ.ಇಷ್ಟು ದಿನ ಶಾಸಕ, ಸಂಸದರು, ಸಚಿವರು, ರಾಜ್ಯಸಭಾ ಸದಸ್ಯರ ವಿವಿಧ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗುತ್ತಿತ್ತು. ಇದರಿಂದ ಕೆಲವು ಆರ್‌ಓ ಘಟಕದಲ್ಲಿ 5 ರು. ಮತ್ತೆ ಕೆಲವು ಘಟಕದಲ್ಲಿ 10 ರು. ದರ ನಿಗದಿ ಪಡಿಸಲಾಗಿತ್ತು. ಇದೀಗ, ಏಕರೂಪದಲ್ಲಿ 10 ರು. ದರ ನಿಗದಿ ಪಡಿಸುವುದಕ್ಕೆ ಚಿಂತನೆ ನಡೆಸಲಾಗಿದೆ.
ಯುಪಿಐ ಅಥವಾ ಪ್ರಿಪೇಡ್ ಕಾರ್ಡ್ನಾಣ್ಯದ ಬಳಕೆ ವ್ಯವಸ್ಥೆಗೆ ತಿಲಾಂಜಲಿ ಹೇಳುವುದಕ್ಕೆ ನಿರ್ಧರಿಸಲಾಗಿದ್ದು, ಎಲ್ಲ ಆರ್‌ಒ ಘಟಕದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ನೀರು ಪಡೆಯುವುದಕ್ಕೆ ಕ್ಯೂರ್ ಆರ್ ಕೋಡ್ ವ್ಯವಸ್ಥೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಜತೆಗೆ, ಯುಪಿಐ ಬಳಕೆ ಇಲ್ಲದವರಿಗೆ ಜಲಮಂಡಳಿಯಿಂದ ಪ್ರಿಪೇಡ್ ಕಾರ್ಡ್ ನೀಡುವುದು. ಅಗತ್ಯವಿರುವ ಗ್ರಾಹಕರು ಜಲಮಂಡಳಿಯ ಸೇವಾ ಕೇಂದ್ರ ಅಥವಾ ಕಿಯೋಸ್ಕ್‌ಗಳಲ್ಲಿ ಕಾರ್ಡ್‌ಗೆ ಹಣ ತುಂಬಿಸಿಕೊಂಡು ಬಳಕೆ ಮಾಡುವ ವ್ಯವಸ್ಥೆ ಅಕ್ಟೋಬರ್ ಅಂತ್ಯದೊಳಗೆ ಜಾರಿಗೆ ತರುವುದಕ್ಕೆ ಯೋಜನೆ ರೂಪಿಸಲಾಗಿದೆ.
ಜಲಮಂಡಳಿ ಖಾತೆಗೆ ನೇರ ಹಣಸದ್ಯ ಆರ್‌ಒ ಘಟಕಗಳಲ್ಲಿ ಗ್ರಾಹಕರು ನೀಡುವ ಹಣ ನಿರ್ವಹಣೆ ಮಾಡುವ ವ್ಯಕ್ತಿಗಳ ಕೈಗೆ ಸೇರುತ್ತಿದೆ. ಇನ್ಮುಂದೆ, ನಿರ್ವಹಣೆ ಮಾಡುವವರಿಗೆ ಹಣ ಹೋಗುವುದಿಲ್ಲ. ಗ್ರಾಹಕರು ಯುಪಿಐ ಅಥವಾ ಪ್ರಿಪೇಡ್ ಕಾರ್ಡ್ ಮೂಲಕ ಪಾವತಿಸುವ ಹಣವು ನೇರವಾಗಿ ಬೆಂಗಳೂರು ಜಲಮಂಡಳಿಯ ಖಾತೆಗೆ ಜಮಾ ಆಗಲಿದೆ. ತಿಂಗಳ ಅಂತ್ಯಕ್ಕೆ ಆಯಾ ಘಟಕ ನಿರ್ವಹಣೆಯ ಗುತ್ತಿಗೆ ಪಡೆದವರಿಗೆ ಲಾಭದ ಮೊತ್ತ ಜಮಾ ಆಗಲಿದೆ.
60:40 ಅನುಪಾತದಲ್ಲಿ ಟೆಂಡರ್1,084 ಆರ್‌ಒ ಘಟಕಗಳ ನಿರ್ವಹಣೆಗೆ 20 ಪ್ಯಾಕೇಜ್ ಮಾಡಿ ಟೆಂಡರ್ ಆಹ್ವಾನಿಸಲಾಗಿದೆ. ಪ್ರತಿ ಪ್ಯಾಕೇಜ್‌ನಲ್ಲಿ 50 ರಿಂದ 55 ಘಟಕ ಇರಲಿವೆ. ಗ್ರಾಹಕರಿಂದ ಬರುವ ಹಣದಲ್ಲಿ ಶೇ.60 ರಷ್ಟು ಗುತ್ತಿಗೆದಾರರಿಗೆ, ಶೇ.40 ರಷ್ಟು ಜಲಮಂಡಳಿ ಪಡೆಯಲಿದೆ. ಗುತ್ತಿಗೆದಾರರಿಗೆ ನೀಡುವ ಶೇ.60ರಷ್ಟರ ಪೈಕಿ ಶೇ.50 ರಷ್ಟು ನಿರ್ವಹಣೆ ವೆಚ್ಚವಾಗಿ, ಶೇ.10 ರಷ್ಟು ಲಾಭವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ.
ಜಲಮಂಡಳಿಯ ಶೇ.40 ರಷ್ಟಿನ ಪೈಕಿ ಶೇ. ಶೇ.22.5 ರಷ್ಟು ವಿದ್ಯುತ್ ಬಿಲ್ ಪಾವತಿಗೆ ಹಾಗೂ ಶೇ.12.50 ರಷ್ಟು ಜಲಮಂಡಳಿಯು ಆದಾಯ ಪಡೆಯಲಿದೆ. ಉಳಿದ ಶೇ5 ರಷ್ಟು ಇತರೆ ವೆಚ್ಚಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.ಬಡವರಿಗೆ, ಮಧ್ಯಮ ವರ್ಗವರಿಗೆ ಶುದ್ಧ ಕುರಿಯುವ ನೀರು ನೀಡುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಸೇರಿದಂತೆ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಯೋಜನೆ ರೂಪಿಸಲಾಗಿದ್ದು, ಅಕ್ಟೋಬರ್ ವೇಳೆಗೆ ಚಾಲನೆ ನೀಡಲಾಗುವುದು. ಚರ್ಚೆ ಮಾಡಿ ನಗರದಲ್ಲಿ ಏಕ ರೂಪದ ದರ ನಿಗದಿ ಮಾಡಲಾಗುವುದು.
- ಡಾ.ರಾಮಪ್ರಸಾತ್ ಮನೋಹರ್, ಅಧ್ಯಕ್ಷರು, ಜಲಮಂಡಳಿಹಳೇ ವಿದ್ಯುತ್ ಬಿಲ್ ಪಾವತಿ ಇಲ್ಲ
ಬಿಬಿಎಂಪಿಯು ಆರ್‌ಒ ಘಟಕ ನಿರ್ವಹಣೆ ಮಾಡುತ್ತಿದ್ದ ಅವಧಿಯಲ್ಲಿರುವ ಬಾಕಿ ಬಿಲ್ ಅನ್ನು ಈಗ ಬೆಂಗಳೂರು ಜಲಮಂಡಳಿ ಪಾವತಿಸುವುದಿಲ್ಲ. ಹಸ್ತಾಂತರದ ಬಳಿಕ ಬಿಲ್ ಅನ್ನು ಮಾತ್ರ ಜಲಮಂಡಳಿ ಪಾವತಿ ಮಾಡಲಿದೆ ಎಂದು ಜಲಮಂಡಳಿಯ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.