ಗವಿರಂಗಾಪುರದಲ್ಲಿ ಕಟ್ಟಲಾಗಿದ್ದ ಫ್ಲಕ್ಸ್ಗಳನ್ನು ಗ್ರಾಪಂ ಸಿಬ್ಬಂದಿ ತೆರವುಗೊಳಿಸುತ್ತಿರುವುದು
ಕನ್ನಡಪ್ರಭ ವಾರ್ತೆ ಹೊಸದುರ್ಗ
ಬಿಜೆಪಿ ಮುಖಂಡನೋರ್ವನ ಅಭಿಮಾನಿಗಳು ಜಾತ್ರಾ ಮಹೋತ್ಸವಕ್ಕೆ ಶುಭಾಶಯ ಕೋರಿ ಕಟ್ಟಿದ ಫ್ಲೇಕ್ಸ್‌ಗಳನ್ನು ಗ್ರಾಮಾಡಳಿತ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೋಲೀಸರ ನೆರವು ಪಡೆದು ತೆರವುಗೊಳಿಸಿದ ಘಟನೆ ತಾಲೂಕಿನ ಶ್ರೀರಾಂಪುರ ಸಮೀಪದ ಗವಿರಂಗಾಪುರ ಬೆಟ್ಟದಲ್ಲಿ ಗುರುವಾರ ನಡೆದಿದೆ.ಬಿಜೆಪಿ ಮುಖಂಡ ಶಿವ ಮಠ ಅವರ ಅಭಿಮಾನಿಗಳು ತಮ್ಮ ಪೋಟೋಗಳೊಂದಿಗೆ ಶಿವಮಠ ಹಾಗೂ ಪ್ರಧಾನಿ ಮೋದಿಜಿ, ಯಡಿಯೂರಪ್ಪ ವಿಜಯೇಂದ್ರ ಹಾಗೂ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ನಾಯಕರಿರುವ ಫೋಟೋಗಳನ್ನು ಹಾಕಿಕೊಂಡು ಡಿ.30ರಂದು ಗವಿರಂಗಾಪುರ ಬೆಟ್ಟದ ಗವಿರಂಗನಾಥ ಸ್ವಾಮಿಯ ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ದೇವಾಲಯದ ಮುಖ್ಯ ರಸ್ತೆಯ ಇಕ್ಕೆಲೆಗಳಲ್ಲಿ ಫ್ಲೇಕ್ಸ್ ಕಟ್ಟಿದ್ದರು.ಗುರುವಾರ ಬೆಳಗ್ಗೆ ಫ್ಲೇಕ್ಸ್ ಕಟ್ಟಿಸಿದ್ದ ಸ್ಥಳೀಯ ಯುವಕನಿಗೆ ಗ್ರಾಪಂ ಪಿಡಿಒ ದೂರವಾಣಿ ಕರೆ ಮಾಡಿ ಅನುಮತಿಯಿಲ್ಲದೆ ಫ್ಲೇಕ್ಸ್ ಕಟ್ಟಲಾಗಿದೆ ಎಂದು ನಮಗೆ ದೂರುಗಳು ಬಂದಿವೆ ಕೂಡಲೇ ತೆರವುಗೊಳಿಸಿ ಎಂದು ತಿಳಿಸಿದ್ದಾರೆ. ಇದಕ್ಕೆ ಯುವಕರು ಇಲ್ಲಿಯವರೆಗೂ ಯಾರೂ ಅನುಮತಿ ಪಡೆಯಿರಿ ಎಂದು ಹೇಳಿರಲಿಲ್ಲ ಹಾಗಾಗಿ ಈ ಬಾರಿಯೂ ಪಡೆದಿಲ್ಲ ಈಗ ಹೇಳುತ್ತಿದ್ದೀರಿ ಅನುಮತಿ ಪಡೆಯಲು ಸಿದ್ದರಿದ್ದೇವೆ ನಿಮ್ಮ ಶುಲ್ಕ ಎಷ್ಠು ಎಂಬುದನ್ನು ತಿಳಿಸಿ ಕಟ್ಟುತ್ತೇವೆ ಎಂದು ಉತ್ತರಿದ್ದಾರೆ.
ಇದಕ್ಕೆ ಒಪ್ಪದ ಪಿಡಿಒ ಅಶ್ವಿನಿ ಇಂದು ರಜೆ ಇದೆ ಪರವಾನಿಗೆ ಕೊಡಲು ಸಾಧ್ಯವಿಲ್ಲ ಮೊದಲು ಫ್ಲೇಕ್ಸ್‌ಗಳನ್ನು ಬಿಚ್ಚಿರಿ ಅನುಮತಿ ಪಡೆದ ನಂತರ ಬೇಕಾದರೆ ಕಟ್ಟಿ ಎಂದು ತಿಳಿಸಿದ್ದಾರೆ.ಇದಕ್ಕೆ ಸ್ಥಳೀಯ ಯುವಕರು ನಾವು ಕಟ್ಟಿದ ಫ್ಲೇಕ್ಸ್ ಗಳನ್ನು ಬಿಚ್ಚುವುದಿಲ್ಲ ಎಂದು ಹಠ ಹಿಡಿದ್ದಾರೆ.
ನಂತರ ಪೋಲೀಸರ ನೆರವಿನೊಂದಿಗೆ ಸ್ಥಳಕ್ಕೆ ಬಂದ ಪಿಡಿಒ ಆಶ್ವಿನಿ ಹಾಗೂ ದೇವಾಲಯದ ಆಡಳಿತಾಧಿಕಾರಿಯಾದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಯುವಕರೊಂದಿಗೆ ಮಾತುಕತೆ ನಡೆಸಿ ಫ್ಲೇಕ್ಸ್ ತೆರವು ಗೊಳಿಸುವಂತೆ ಮನವಿ ಮಾಡಿದ್ದಾರೆ. ಪರವಾನಿಗೆ ಕೋಡಿ ಕಟ್ಟಿರುವ ಫಕ್ಸ್ ಗಳನ್ನು ನಾವು ಯಾವುದೇ ಕಾರಣಕ್ಕೂ ಬಿಚ್ಚುವುದಿಲ್ಲ ಎಂದು ಹಠಕ್ಕೆ ನಿಂತಿದ್ದಾರೆ. ಒಂದು ಹಂತದಲ್ಲಿ ಪರವಾನಿಗಿ ನೀಡುವುದಾಗಿ ಸುಮ್ಮನಾಗಿದ್ದ ಅಧಿಕಾರಿಗಳು ಕೆಲ ಗಂಟೆಯ ನಂತರ ಹಿರಿಯ ಅಧಿಕಾರಿಗಳ ಒತ್ತಡವಿದೆ ನೀವು ಫ್ಲೇಕ್ಸ್ ಗಳನ್ನು ಬಿಚ್ಚದಿದ್ದರೆ ನಾವೇ ತೆರವುಗೊಳಿಸುತ್ತೇವೆ ಎಂದು ಗ್ರಾಪಂ ಸಿಬ್ಬಂದಿಯಿಂದ ತೆರವು ಗೊಳಿಸಿದ್ದಾರೆ.ಅಧಿಕಾರಿಗಳ ಈ ವರ್ತನೆಯಿಂದ ಅಸಮಾದಾನಿತರಾದ ಸ್ತಳೀಯ ಯುವಕರು ಬಿಜೆಪಿ ಮುಖಂಡ ಶಿವಮಠ ಅವರೊಂದಿಗೆ ಚರ್ಚಿಸಿ ಹೊಸದುರ್ಗಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಗವಿರಂಗಾಪುರ ಬೆಟ್ಟದ ದೇವಾಲಯದ ಬಳಿ ಸ್ಥಳೀಯ ಆಡಳಿತದಿಂದ ಪರವಾನಿಗೆ ಪಡೆಯದೆ ಫ್ಲೇಕ್ಸ್ ಗಳನ್ನು ಕಟ್ಟಿದ್ದಾರೆ ಅವುಗಳನ್ನು ತೆರವು ಗೊಳಿಸಿ ಎಂದು ತಹಸೀಲ್ದಾರ್ ಸೂಚನೆ ಕೊಟ್ಟಿದ್ದರು, ಅವರ ಸೂಚನೆ ಮೇರೆಗೆ ಫ್ಲೇಕ್ಸ್‌ಗಳನ್ನು ತೆರವು ಗೊಳಿಸಲಾಗಿದೆ. ಇಲ್ಲಿಯವರೆಗೆ ಪರವಾನಿಗಿ ಪಡೆದೇ ಫ್ಲೇಕ್ಸ್ ಕಟ್ಟಿದ್ದಾರಾ ಎಂದು ಕನ್ನಡಪ್ರಭ ಪ್ರಶ್ನಿಸಿದ್ದಕ್ಕೆ ಇಲ್ಲಿಯವರೆಗೆ ಯಾವ ರೀತಿ ಫ್ಲೇಕ್ಸ್‌ಗಳನ್ನು ಕಟ್ಟಿದ್ದಾರೂ ನನಗೆ ಗೊತ್ತಿಲ್ಲ ನಾನು ಹೊಸದಾಗಿ ಬಂದಿದ್ದೇನೆ ಅವರು ಪರವಾನಿಗೆ ಪಡೆಯಬೇಕಿತ್ತು ಪಡೆದಿಲ್ಲ ಹೆಚ್ಚಿನ ಮಾಹಿತಿ ಬೇಕಿದ್ದರೆ ತಹಸೀಲ್ದಾರ್ ಅವರನ್ನೇ ಕೇಳಿ ಎಂದು ಪಿಡಿಒ ಅಶ್ವಿನಿ ಕನ್ನಡಪ್ರಭಕ್ಕೆ ತಿಳಿಸಿದರು.
ಅನುಮತಿ ನೀಡಲು ನೀರಾಕರಿಸಿದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ
ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ ಫ್ಲೇಕ್ಸ್ ಕಟ್ಟಲು ಇದುವರೆವಿಗೂ ಯಾವುದೇ ಪರವಾನಿಗೆ ಪಡೆಯಬೇಕೆಂಬ ಕಾನೂನು ಕೇಳಿಲ್ಲ ಅಲ್ಲದೆ ತಾಲೂಕಿನ ಅನೇಕ ಮುಜರಾಯಿ ದೇವಾಲಯದ ಬಳಿಯೂ ಫ್ಲೇಕ್ಸ್ ಕಟ್ಟಿದಾಗಲೂ ಕೇಳೀಲ್ಲ ಆದರೆ ಈಗ ಗವಿರಂಗಾಪುರ ಬೆಟ್ಟದಲ್ಲಿ ನಮ್ಮ ಅಭಿಮಾನಿಗಳು ಕಟ್ಟಿದ ಫ್ಲಕ್ಸ್ ಗಳನ್ನು ದುರುದ್ದೇಶ ಪೂರ್ವಕವಾಗಿ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಈ ತಾಲೂಕಿನ ಜನಪ್ರತಿನಿಧಿಯೊಬ್ಬರು ತೆರವು ಗೊಳಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಮುಖಂಡ ಶಿವ ಮಠ ತಿಳಿಸಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿ ಮುಂಚೆಯೇ ಅನುಮತಿ ಪಡೆಯಬೇಕಿತ್ತು ಎಂದಿದ್ದರೆ ನಾವು ಅನುಮತಿ ಪಡೆಯುತ್ತಿದ್ದೆವು ಈಗಲೂ ಅನುಮತಿ ಪಡೆಯಲು ಸಿದ್ದರಿದ್ದೇವೆ ಆದರೆ ಅನುಮತಿ ನೀಡಲು ಈಗ ಇಲ್ಲ ಸಲ್ಲದ ಕಾನೂನು ಹೇಳಲಾಗುತ್ತಿದೆ ನಾಳೆ ಅನುಮತಿ ನೀಡದಿದ್ದರೆ ತಾಲೂಕು ಕಚೇರಿ ಹಾಗೂ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದು ತಿಳಿಸಿದರು.