ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
₹೮.೫ ಕೋಟಿ ವೆಚ್ಚದಲ್ಲಿ ಗುಂಡ್ಲುಪೇಟೆಗೆ ಕೋಲ್ಡ್ ಸ್ಟೋರೇಜ್‌ಗೆ ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಗುದ್ದಲಿ ಪೂಜೆ ಸಮಾರಂಭದಲ್ಲಿ ಮಾತನಾಡಿ, ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೋಲ್ಡ್ ಸ್ಟೋರೇಜ್ ಮಂಜೂರಾಗಿದೆ ಆದಷ್ಟು ಬೇಗ ಚಾಲನೆ ಕೂಡ ಆಗಲಿದೆ ಎಂದರು. ನಾನು ಶಾಸಕನಾದ ಬಳಿಕ ತಾಲೂಕಿನ ಬೊಮ್ಮನಹಳ್ಳಿ ಅಂಬೇಡ್ಕರ್ ವಸತಿ ಶಾಲೆಗೆ ₹೧೮ ಕೋಟಿ, ಬೇಗೂರು ಹತ್ತಿ ಮಾರುಕಟ್ಟೆಗೆ ₹೬.೫ ಕೋಟಿ, ಮುಖ್ಯಮಂತ್ರಿ ವಿಶೇಷ ಅನುದಾನದಡಿ ಸಿಸಿ ರಸ್ತೆ, ಚರಂಡಿಗೆ ₹೨೫ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ತಲಾ ₹೫೦ ಲಕ್ಷದಲ್ಲಿ ಅಂಬೇಡ್ಕರ್, ಬಾಬೂಜಿ ಭವನಕ್ಕೆ ಗುದ್ದಲಿ ಪೂಜೆಹಂಗಳ ಗ್ರಾಮದಲ್ಲಿ ವಾಲ್ಮೀಕಿ ಭವನಕ್ಕೆ ಅನುದಾನ ನೀಡುತ್ತೇನೆ. ಸ್ವಲ್ಪ ದಿನ ಕಾಯಿರಿ ಎಂದು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹೇಳಿದರು. ತಾಲೂಕಿನ ಹಂಗಳ ಗ್ರಾಮದಲ್ಲಿ ತಲಾ ೫೦ ಲಕ್ಷ ರು.ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಸಮುದಾಯ ಭವನಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಹಂಗಳ ಗ್ರಾಮದಲ್ಲಿ ವಾಲ್ಮೀಕಿ ಭವನ ಬೇಕು ಎಂಬ ಬೇಡಿಕೆ ಹೇಳಿದ್ದೀರಾ? ವಾಲ್ಮೀಕಿ ಭವನಕ್ಕೆ ಅನುದಾನ ಬಿಡುಗಡೆ ಮಾಡಿಸಲು ಮನವಿ ಕೂಡ ಸಲ್ಲಿಸಿದ್ದೇನೆ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು.ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿದ್ದು, ರಸ್ತೆ ಅಭಿವೃದ್ಧಿಗೂ ಮುಖ್ಯಮಂತ್ರಿಗಳಿಗೆ ಅನುದಾನ ಬೇಕು ಎಂದು ಕೋರಿದ್ದೇನೆ ಅನುದಾನ ಮಂಜೂರಾದ ಬಳಿಕ ರಸ್ತೆಗಳ ಅಭಿವೃದ್ಧಿಯಾಗಲಿವೆ ಎಂದರು.
₹೧೦೦ ಕೋಟಿ ಅನುದಾನ:ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ನೂರು ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ, ಹಲವು ಕಾಮಗಾರಿಗಳಿಗೆ ಚಾಲನೆ ಕೂಡ ನೀಡಿದ್ದೇನೆ. ಇನ್ನು ಕೆಲವು ಕಾಮಗಾರಿಗೆ ಚಾಲನೆ ಕೊಡಬೇಕಿದೆ ಎಂದರು. ಹಂಗಳ ದೊಡ್ಡ ಗ್ರಾಮವಾಗಿದ್ದು, ಎಲ್ಲ ಸಮಾಜದವರು ಇದ್ದಾರೆ. ಗ್ರಾಮದ ಅಭಿವೃದ್ಧಿಗೆ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹಾಗೂ ನಿಮ್ಮ ಸಹಕಾರದಲ್ಲಿ ಶ್ರಮಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗುದ್ದಲಿ ಪೂಜೆ ಸಮಾರಂಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್,ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗಪ್ಪ,ಗ್ರಾಪಂ ಉಪಾಧ್ಯಕ್ಷ ನಾಗರಾಜು,ಗ್ರಾಪಂ ಸದಸ್ಯರಾದ ವೃಷಬೇಂದ್ರ,ರೂಪ,ಮಲ್ಲಪ್ಪ,ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಡಿ.ಬಿ.ಶಿವಕುಮಾರ್,ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗಮಲ್ಲು,ವಕೀಲ ರಾಜೇಶ್,ನಿರ್ಮಿತಿ ಕೇಂದ್ರದ ವೃಷಬೇಂದ್ರ ಸೇರಿದಂತೆ ಗ್ರಾಮಸ್ಥರು ಇದ್ದರು.