ನಾಳೆಯಿಂದ ಗುರು ಅನ್ನದಾನ ಶ್ರೀಗಳ ಪುಣ್ಯಸ್ಮರಣೋತ್ಸವ

| Published : Aug 02 2025, 12:00 AM IST

ಸಾರಾಂಶ

ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮಿಗಳ 48ನೇ ಪುಣ್ಯಸ್ಮರಣೋತ್ಸವ, ಆಧ್ಯಾತ್ಮ ಪ್ರವಚನ ಮಂಗಲಮಹೋತ್ಸವ, 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಹಿರಿಯ ತಾಯಂದಿರ ಸನ್ಮಾನ ಕಾರ್ಯಕ್ರಮ, ಹೃದಯ ರೋಗ ಆರೋಗ್ಯ ತಪಾಸಣಾ ಶಿಬಿರ, ಮರಳಿ ಮಣ್ಣಿಗೆ ಜನಜಾಗೃತಿ ಅಭಿಯಾನ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮ ಆ. 3, 4ರಂದು ನಡೆಯಲಿವೆ.

ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮಿಗಳ 48ನೇ ಪುಣ್ಯಸ್ಮರಣೋತ್ಸವ, ಆಧ್ಯಾತ್ಮ ಪ್ರವಚನ ಮಂಗಲಮಹೋತ್ಸವ, 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಹಿರಿಯ ತಾಯಂದಿರ ಸನ್ಮಾನ ಕಾರ್ಯಕ್ರಮ, ಹೃದಯ ರೋಗ ಆರೋಗ್ಯ ತಪಾಸಣಾ ಶಿಬಿರ, ಮರಳಿ ಮಣ್ಣಿಗೆ ಜನಜಾಗೃತಿ ಅಭಿಯಾನ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮ ಆ. 3, 4ರಂದು ನಡೆಯಲಿವೆ.

ಆ.3ರಂದು ಬೆಳಗ್ಗೆ 10ಕ್ಕೆ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 12ಕ್ಕೆ ಮಹಾಗಣಾರಾಧನೆ, ಸಂಜೆ 7ಕ್ಕೆ ಪುಣ್ಯಸ್ಮರಣೋತ್ಸವ ಹಾಗೂ ಅಧ್ಯಾತ್ಮ ಪ್ರವಚನದ ಮಂಗಲೋತ್ಸವ ನಡೆಯಲಿದೆ.

ಸಾನ್ನಿಧ್ಯವನ್ನು ನಂದವಾಡಗಿಯ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ದರೂರ ಕೊಟ್ಟೂರು ಸ್ವಾಮಿಗಳು, ಒಪ್ಪತ್ತೇಶ್ವರ ಸ್ವಾಮಿ ಮಠದ ನಿರಂಜನ ಪ್ರಭು ಸ್ವಾಮಿಗಳು, ಸೋಮಸಮುದ್ರದ ಕೊಟ್ಟೂರು ಸ್ವಾಮಿಮಠದ ಸಿದ್ದಲಿಂಗ ಸ್ವಾಮಿಗಳು, ಅಳಿಂಗಳಿ ಕಮರಿಮಠದ ಶರಣಬಸವ ದೇವರು, ಬನವಾಸಿಯು ಶಿವಲಿಂಗ ದೇಶಿಕರು, ಸಂಗನಾಳದ ವಿಶ್ವೇಶ್ವರ ದೇವರು ಹಾಗೂ ಬುದುಗುಂಪ ಸಿದ್ದೇಶ್ವರ ಸ್ವಾಮಿಗಳು ವಹಿಸುವರು. ರೋಣ ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕ ಕಳಕಪ್ಪ ಜಿ.ಬಂಡಿ, ಡಾ. ಬಿ.ಎನ್. ಪಾಟೀಲ, ಆರ್.ಬಿ. ಪಾಟೀಲ, ಗಿರೀಶಗೌಡ ಮುಲ್ಕಿಪಾಟೀಲ, ಡಾ. ಬಿ.ವಿ. ಕಂಬಳ್ಯಾಳ, ದೇವಿಂದ್ರಪ್ಪ ಬೊಳೊಟಗಿ ಪಾಲ್ಗೊಳ್ಳಲಿದ್ದಾರೆ. ನಂತರ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಂಗ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಆ.4ರಂದು ಬೆಳಗ್ಗೆ 8.30ಕ್ಕೆ ಮಕ್ಕಳಿಗಾಗಿ ವಿದ್ಯಾರಂಭದ ವಿಶೇಷ ಅಕ್ಷರ ಅಭ್ಯಾಸ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ಕ್ಕೆ ಧಾರವಾಡ ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್‌ ಅವರ ಸಂಯುಕ್ತಾಶ್ರಯದಲ್ಲಿ ತಜ್ಞ ವೈದ್ಯರಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರ, ಬೆಳಗ್ಗೆ 11ಕ್ಕೆ 501 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮರಳಿ ಮಣ್ಣಿಗೆ ಜನಜಾಗೃತಿ ಅಭಿಯಾನ ನಡೆಯಲಿವೆ. ಸಂಜೆ 5ಕ್ಕೆ ನಡೆಯುವ ಬೆಳ್ಳಿ ರಥೋತ್ಸವಕ್ಕೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಚಾಲನೆ ನೀಡಲಿದ್ದಾರೆ.

ಸಂಜೆ 6ಕ್ಕೆ ನಡೆಯುವ ಬೆತ್ತದ ಅಜ್ಜ ಕಿರು ಚಿತ್ರ ಲೋಕಾರ್ಪಣೆ ಹಾಗೂ ಶಿವಾನುಭವ ಗೋಷ್ಠಿಯ ಸಾನಿಧ್ಯವನ್ನು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮಿಗಳು, ಸಂತೆಕೆಲ್ಲೂರ ಘನಮಠೇಶ್ವರ ಮಠದ ಗುರುಬಸವ ಸ್ವಾಮಿಗಳು, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಒಳಬಳ್ಳಾರಿ ವಿರಕ್ತಮಠದ ಬಸವಲಿಂಗ ಸ್ವಾಮಿಗಳು, ಖೇಳಗಿಯ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಸ್ವಾಮಿಗಳು, ಗಳೇದಗುಡ್ಡದ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀಧರ ರೆಡ್ಡಿಯ ಕೊಟ್ಟೂರುಸ್ವಾಮಿ ಶಾಖಮಠದ ಮರಿ ಕೊಟ್ಟೂರು ದೇಶಿಕರು ವಹಿಸುವರು. ಮಹಿಳಾ ಮಂಡಳದ ಅಧ್ಯಕ್ಷೆ ಸಂಯುಕ್ತ ಕೆ.ಬಂಡಿ, ಅಕ್ಕನಬಳಗದ ಅಧ್ಯಕ್ಷೆ ಅನ್ನಪೂರ್ಣ ಜಿ.ಪಾಟೀಲ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹಾಲಕೆರೆಯ ಶ್ರೀ ಮಹಾತಪಸ್ವಿ ಅನ್ನದಾನೇಶ್ವರ ಮಹಿಮೆ ಹಾಗೂ ಹಾಲಕೆರೆಯಿಂದ ಹಿಮಾಲಯದವರೆಗೆ ಎಂಬ ಎರಡು ಕೃತಿಗಳು ಬಿಡುಗಡೆಯಾಗಲಿವೆ. ಹಿರಿಯ ತಾಯಂದಿರ ಸನ್ಮಾನ ಕಾರ್ಯಕ್ರಮಗಳು ಜರಗುವವು ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.