ಸಾರಾಂಶ
ಬೀದರ್‌ನ ಹನುಮಾನ ನಗರದ ಕುದರೆ ಫಂಕ್ಷನ್ ಹಾಲ್‌ನಲ್ಲಿ ಜೀನಿಯಸ್ ಅಬಾಕಸ್ ಸೆಂಟರ್ ವತಿಯಿಂದ ನಡೆದ ಜಿಲ್ಲಾಮಟ್ಟದ ಅಬಾಕಸ್ ಸ್ಪರ್ಧೆಯನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಉದ್ಘಾಟಿಸಿರು.
ಕನ್ನಡಪ್ರಭ ವಾರ್ತೆ ಬೀದರ್‌ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಸ್ಪರ್ಧೆಗಳು ಸಹಕಾರಿಯಾಗಲಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು.
ಇಲ್ಲಿಯ ಹನುಮಾನ ನಗರದ ಕುದರೆ ಫಂಕ್ಷನ್ ಹಾಲ್‌ನಲ್ಲಿ ಜೀನಿಯಸ್ ಅಬಾಕಸ್ ಸೆಂಟರ್ ವತಿಯಿಂದ ನಡೆದ ಜಿಲ್ಲಾಮಟ್ಟದ ಅಬಾಕಸ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ಸೆಂಟರ್ ಮುಖ್ಯಸ್ಥ ಪ್ರವೀಣ ಸ್ವಾಮಿ ಮಾತನಾಡಿ, ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ 1ರಿಂದ 7ನೇ ತರಗತಿ ವರೆಗಿನ 600 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತರಗತಿ ಹಾಗೂ ಹಂತವಾರು 120 ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಹುಮನಾಬಾದ್‌ನ ಗಂಗಾಧರ ಸ್ವಾಮಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್, ಪ್ರಮುಖರಾದ ಶಂಭುಲಿಂಗ ಕುದರೆ, ಅಶ್ವಿನಿ ಕುದರೆ, ವಿ. ಜ್ಞಾನಗಾಂಧಿ, ಬಸವರಾಜ ಉಮ್ರಾಣಿ, ಶಿವಲಿಂಗಯ್ಯ ಸ್ವಾಮಿ, ಮುಕ್ತಾಂಜಲಿ ಜಿ. ಹಿರೇಮಠ, ಸೆಂಟರ್ ಸಿಬ್ಬಂದಿ ಇದ್ದರು.