ಪತ್ರಕರ್ತರ ಭವನದಲ್ಲಿ ಪತ್ರಕರ್ತ ಮುರುಳಿ ನಿಧನಕ್ಕೆ ಸಂತಾಪ

| Published : Jan 06 2025, 01:04 AM IST

ಸಾರಾಂಶ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುರುಳಿರವರು ನಿಧನರಾಗಿದ್ದು ನಮ್ಮ ಸಂಘಕ್ಕೆ ತುಂಬಾ ನೋವುಂಟು ಮಾಡಿದೆ. ಕಳೆದ ವಾರ ಸುರೇಶ್ ಅವರ ನಿಧನ ಮಾಸುವ ಮುನ್ನವೇ ಮತ್ತೊಂದು ಸಾವು ಸಂಭವಿಸಿದ್ದು, ತೀವ್ರ ದುಃಖವನ್ನು ವ್ಯಕ್ತ ಪಡಿಸುತ್ತಿದೆ ಮತ್ತು ಮೃತರ ಕುಟುಂಬ ಸದಸ್ಯರಿಗೆ ನಮ್ಮ ಸಂತಾಪವನ್ನು ತಿಳಿಸುತ್ತಿದೆ. ಅವರ ನಿಧನದಿಂದ ನಾವು ಒಬ್ಬ ನಿಪುಣ ಪತ್ರಕರ್ತನನ್ನು ಕಳೆದುಕೊಂಡಿದ್ದೇವೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಸಿದ್ದ ಪತ್ರಕರ್ತ ಮುರುಳಿ ನಿಧನಕ್ಕೆ ಸಂತಾಪ ಸೂಚಕ ಸಭೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಜಯರಾಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಕರ್ತ ಮುರುಳಿ ನಿಧನಕ್ಕೆ ಸಂತಾಪ ಸೂಚಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಜಯರಾಮ್ ಮಾತನಾಡಿ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುರುಳಿರವರು ನಿಧನರಾಗಿದ್ದು ನಮ್ಮ ಸಂಘಕ್ಕೆ ತುಂಬಾ ನೋವುಂಟು ಮಾಡಿದೆ. ಕಳೆದ ವಾರ ಸುರೇಶ್ ಅವರ ನಿಧನ ಮಾಸುವ ಮುನ್ನವೇ ಮತ್ತೊಂದು ಸಾವು ಸಂಭವಿಸಿದ್ದು, ತೀವ್ರ ದುಃಖವನ್ನು ವ್ಯಕ್ತ ಪಡಿಸುತ್ತಿದೆ ಮತ್ತು ಮೃತರ ಕುಟುಂಬ ಸದಸ್ಯರಿಗೆ ನಮ್ಮ ಸಂತಾಪವನ್ನು ತಿಳಿಸುತ್ತಿದೆ. ಅವರ ನಿಧನದಿಂದ ನಾವು ಒಬ್ಬ ನಿಪುಣ ಪತ್ರಕರ್ತನನ್ನು ಕಳೆದುಕೊಂಡಿದ್ದೇವೆ ಎಂದರು.

ನಂತರ ಹಿರಿಯ ಪತ್ರಕರ್ತ ಹಾಗೂ ಪತ್ರ ಕರ್ತರ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಹಿರಿಯ ಪತ್ರಕರ್ತ ಸುರೇಶ್ ನಿಧನ ಬೆನ್ನಲ್ಲೇ ಇದೀಗ ಮತ್ತೋರ್ವ ಹಿರಿಯ ಪತ್ರಕರ್ತರಾಗಿದ್ದ ಮುರುಳಿ ಅಗಲಿಕೆ ಪತ್ರಿಕಾ ರಂಗಕ್ಕೆ ಆಘಾತ ತಂದಿದೆ. ಹಿರಿಯ ಪತ್ರಕರ್ತರ ನಿಧನಕ್ಕೆ ಪತ್ರಿಕಾ ರಂಗದವರು ಬೇಸರಗೊಂಡಿದ್ದೇವೆ. ಪತ್ರಿಕೆಯಲ್ಲಿ ಮಾಹಿತಿಕೋಶ ಎಂದೇ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ದೇವರು ಮೃತನ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನಟರಾಜು ನಾಕಲಗೂಡು ಮಾತನಾಡಿ, ಮುರುಳಿಯವರು ಪತ್ರಿಕಾ ಏಜೆಂಟರಾಗಿ ಹಾಗೂ ಹಲೋ ಹಾಸನ ಪತ್ರಿಕೆಯ ತಾಲೂಕು ವರದಿಗಾರನಾಗಿ ಮತ್ತು ಮಾರ್ಗಪ್ರಭ ಪತ್ರಿಕೆಯಲ್ಲೂ ಸೇವೆ ಸಲ್ಲಿಸಿದ್ದರು. ಸುದೀರ್ಘ ಹದಿನೈದು ವರ್ಷಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಅನಾರೋಗ್ಯ ಸಮಸ್ಯೆಯಿಂದ ನಮ್ಮನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದು, ನಮಗೆ ಬೇಸರ ತಂದಿದೆ. ಮತ್ತು ಈಗೀನ ಆಹಾರ ಪದ್ಧತಿ ನಮ್ಮೆಲ್ಲರ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದು, ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಯಾವಾಗ ಏನಾಗುತ್ತದೆ ಎಂಬ ಆತಂಕ ಹೆಚ್ಚಿದ್ದು ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ದೇವರು ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶೋಕಿಸಿದರು.

ಈ ಸಂತಾಪ ಸೂಚಕ ಸಭೆಯಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರು ಮತ್ತು ಸಂಘದ ಸದಸ್ಯರುಗಳಿದ್ದರು.