ಸಾರಾಂಶ
ಏಕವಚನದ ಸಂಸ್ಕೃತಿ ಪ್ರಾರಂಭ ಮಾಡಿದ್ದೇ ಸಿದ್ದರಾಮಯ್ಯ. ಏಕವಚನದಲ್ಲಿ ಟೀಕೆ ಮಾಡುವುದು ಬೇಡವೆಂದು ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ನಾನು ಸಲಹೆ ಕೊಡುತ್ತೇನೆ. ಆದರೆ ಕೇಸ್ ಮಾಡುವುದು ಸರಿಯಲ್ಲ ಎಂದು ಪ್ರಹ್ಲಾದ ಜೋಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗಂಗಾವತಿ/ಕೊಪ್ಪಳ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗುವುದಿಲ್ಲವೆಂದು ಹೇಳಿಕೆ ನೀಡಿ ಈಗ ಬರಲು ಸಿದ್ಧರಾಗಿದ್ದಾರೆ. ರಾಹುಲ್ ಗಾಂಧಿ ತರ ಕಾಂಗ್ರೆಸ್ ಕೂಡ ಕನ್ಫ್ಯೂಸ್ ಪಕ್ಷ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ನಗರದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲು ಶ್ರೀರಾಮಚಂದ್ರ ಎಲ್ಲ ಕಡೆ ಇದ್ದಾರೆ. ನಾವೇಕೆ ಹೋಗಬೇಕೆಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಕಾಂಗ್ರೆಸಿಗರು ವಿರೋಧಿಸಿದರೆ ಮತ ಬರುವುದಿಲ್ಲ ಎಂಬ ಕಾರಣಕ್ಕೆ ಅಯೋಧ್ಯೆಗೆ ಬರುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ ಎಂದರು.ರಾಮಚಂದ್ರ ಕಾಲ್ಪನಿಕ. ಅಯೋಧ್ಯೆಯಲ್ಲಿ ಶ್ರೀರಾಮ ಹುಟ್ಟಿದ್ದಾನೆ ಎನ್ನುವುದರ ಬಗ್ಗೆ ಏನು ಗ್ಯಾರಂಟಿ ಎಂದಿದ್ದರು. ಈಗ ತಾವೇ ಒಪ್ಪಿಕೊಂಡಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ಸಿಎಂ ಅಯೋಧ್ಯೆ ಹೇಳಿಕೆ ನೀಡಿದ್ದರು, ಈಗ ಅವರಿಗೆ ಮನವರಿಕೆಯಾಗಿದೆ ಎಂದರು.
ಸಿಎಂ ನೈತಿಕ ಪೊಲೀಸ್‌ಗಿರಿ ಸಹಿಸಲ್ಲ ಅಂತ ದೊಡ್ಡ ದೊಡ್ಡ ಮಾತಾಡಿದ್ದರು. ಹಾನಗಲ್‌ನಲ್ಲಿ ನಡೆದ ಪ್ರಕರಣ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಈ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.ಸಲಹೆ ಕೊಡುವೆ: ಏಕವಚನದ ಸಂಸ್ಕೃತಿ ಪ್ರಾರಂಭ ಮಾಡಿದ್ದೇ ಸಿದ್ದರಾಮಯ್ಯ. ಏಕವಚನದಲ್ಲಿ ಟೀಕೆ ಮಾಡುವುದು ಬೇಡವೆಂದು ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ನಾನು ಸಲಹೆ ಕೊಡುತ್ತೇನೆ. ಆದರೆ ಕೇಸ್ ಮಾಡುವುದು ಸರಿಯಲ್ಲ ಎಂದು ಪ್ರಹ್ಲಾದ ಜೋಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ವಿರೂಪಾಕ್ಷಪ್ಪ ಸಿಂಗನಾಳ, ತಿಪ್ಪೇರುದ್ರಸ್ವಾಮಿ, ಎಚ್.ಎಂ. ಸಿದ್ದರಾಮಸ್ವಾಮಿ, ನಗರಸಭಾ ಸದಸ್ಯ ವಾಸುದೇವ ನವಲಿ, ಯಂಕಪ್ಪ ಕಟ್ಟಿಮನಿ ಇದ್ದರು.