ಬ್ಯಾಡಗಿ: ಯಾವುದೇ ಪಕ್ಷದ ಸಿದ್ಧಾಂತಕ್ಕೆ ಒಪ್ಪಿ ಮತದಾನ ಮಾಡುವಂತಹ ಬಡ ಕೂಲಿ ಕಾರ್ಮಿಕರ ಮತಗಳನ್ನು ಅನಗತ್ಯ ಕಾರಣಗಳನ್ನು ಕೊಟ್ಟು ರದ್ದುಪಡಿಸುವಂತಹ ಕೆಲಸ ಯಾರಿಂದಲೂ ಆಗಬಾರದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷಬೇಧ ಮರೆತು ಕೆಲಸ ಮಾಡುವ ಮೂಲಕ ಗ್ರಾಮವನ್ನು ಬಿಟ್ಟು ತೆರಳಿದ ತಮ್ಮೂರಿನ ಜನರ ಮತಗಳ ರಕ್ಷಣೆಗೆ ಮುಂದಾಗುವಂತೆ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬಿಎಲ್ಎ-2 ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಹುತೇಕ ಕೂಲಿ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ಬೇರೊಂದು ಗ್ರಾಮಕ್ಕೆ ತೆರಳುವುದು ಸಹಜ ಇಂತಹ ಸಂದರ್ಭದಲ್ಲಿ ಅವರ ವೈಯಕ್ತಿಕ ಮೊಬೈಲ್ ನಂಬರಗಳ ಮೂಲಕ ಅವರನ್ನು ಸಂಪರ್ಕಿಸಿ ಅಗತ್ಯವಾದ ಮಾಹಿತಿಗಳನ್ನು ನೀಡಬೇಕು ಅಂದಾಗ ಮಾತ್ರ ಅವರ ಮತಗಳು ರದ್ದಾಗದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.ಬಿಎಲ್ ಓಗಳು ಯಾವುದೇ ಪಕ್ಷದ ಎಜೆಂಟರಲ್ಲ: ಸರ್ಕಾರ ನೇಮಕ ಮಾಡಿದಂತಹ ಬಿಎಲ್ ಓಗಳು ಯಾವುದೇ ಪಕ್ಷದ ಎಜೆಂಟರಂತೆ ವರ್ತಿಸಬಾರದು, ಬಡವರ ಮತಗಳನ್ನು ರದ್ದುಪಡಿಸುವ ಮುನ್ನ ಅವರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸಬೇಕು ಹೀಗಾಗಿ ಪಕ್ಷದ ಕಾರ್ಯಕರ್ತರು ಬಿಎಲ್ ಓಗಳ ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಸಂವಿಧಾನದಡಿಯಲ್ಲಿ ಪಡೆದಂತಹ ಮತದಾನದ ಹಕ್ಕುಗಳನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು.
ಈ ವೇಳೆ ಬ್ಲಾಕ್ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಡಿ.ಎಚ್.ಬುಡ್ಡನಗೌಡ್ರ, ವೀರನಗೌಡ ಪೋಲಿಸ ಪಾಟೀಲ, ಖಾದರಸಾಬ್ ದೊಡ್ಮನಿ, ರಮೇಶ ಸುತ್ತಕೋಟಿ, ಆರ್.ಜಿ.ಕಳ್ಯಾಳ, ಮುನಾಫ್ ಎರೇಶೀಮಿ, ಮಜೀದ್ ಮುಲ್ಲಾ, ಮಾರುತಿ ಅಚ್ಚಿಗೇರಿ, ಸುರೇಶಗೌಡ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.