ಸಾರಾಂಶ
ಸಂವಿಧಾನ ರಾಷ್ಟ್ರದ ಮಹೋನ್ನತ ಆಸ್ತಿಯಾಗಿದ್ದು, ಇದು ಸಮಾಜವಾದಿ, ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿದೆ.
ಹಿರಿಯೂರು: ಸಂವಿಧಾನ ರಾಷ್ಟ್ರದ ಮಹೋನ್ನತ ಆಸ್ತಿಯಾಗಿದ್ದು, ಇದು ಸಮಾಜವಾದಿ, ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿದೆ ಎಂದು ಸಾಂಸ್ಕೃತಿಕ ಚಿಂತಕ ರಾಮಚಂದ್ರಪ್ಪ ತಿಳಿಸಿದರು.
ತಾಲೂಕಿನ ಮೇಟಿಕುರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿದ ಭಾರತದ ಸಂವಿಧಾನ ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿ ಸಂಜೆಯ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಸಂವಿಧಾನ ದೇಶದ ಎಲ್ಲಾ ವಿದ್ಯಮಾನಗಳಿಗೆ ಮೂಲ ಆಧಾರವಾಗಿದೆ. ಭಾರತದ ವೈವಿಧ್ಯಮಯ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ಮತ್ತು ನೀತಿ ನಿಯಮಗಳ ಮೇಲೆ ವಿಸ್ತ್ರತವಾದ ಚರ್ಚೆ ನಡೆದು ಸಂವಿಧಾನ ರಚಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ಲೋಕೇಶ್, ಉಪಾಧ್ಯಕ್ಷೆ ಜಯಲಕ್ಷ್ಮಿ, ನಾಗಲಕ್ಷ್ಮಿ, ಮಮತಾ, ಅನುಸೂಯಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಲಾ, ಸದಸ್ಯರಾದ ಮಂಜುನಾಥ್, ರೇಣುಕಮ್ಮ, ರಾಜಕ್ಕ, ಶಕುಂತಲಮ್ಮ, ವೇದಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಮುಂತಾದವರು ಉಪಸ್ಥಿತರಿದ್ದರು. ಸಂವಿಧಾನ ಜಾಗೃತಿ ಜಾಥಾದ ರಥ ಸಾಗುವ ದಾರಿಯಲ್ಲಿ ವಿವಿಧ ಬಗೆಯ ರಂಗೋಲಿ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಲ್ಪಾ ಪ್ರಥಮ ಸ್ಥಾನ, ನಾಗರತ್ನ ದ್ವಿತೀಯ ಸ್ಥಾನ ಪಡೆದರು.ಮಹಿಳಾ ಸಂಘ, ಸ್ತ್ರೀಶಕ್ತಿ ಸಂಘ, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದು, ಕುಂಭಮೇಳದೊಂದಿಗೆ ಸಂವಿಧಾನ ಜಾಗೃತಿ ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿ ಮರುದಿನ ಬೀಳ್ಕೊಟ್ಟರು.