ಸಾರಾಂಶ
ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಸಮಾಜ ಸಂಘಟನಾತ್ಮಕವಾಗಿ ಕಟ್ಟುವ ಕಾರ್ಯ, ಸಮಾಜ ಚಿಂತನೆ ಸೇರಿದಂತೆ ಪದಾಧಿಕಾರಿ, ಹಿರಿಯರಿಂದ ಬರುವ ಸಲಹೆ ಸೂಚನೆ ಅನುಸರಿಸಿಕೊಂಡು ಮುನ್ನಡೆ
ಗದಗ: ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ನಗರದ ವೀರಶೈವ ಲೈಬ್ರರಿಯಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಬುಧವಾರ ನಡೆದ ಮಹಾಸಭಾದ ಚುನಾವಣೆಯಲ್ಲಿ ಕಾರ್ಯಕಾರಿ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದವರಿಗೆ ಘೋಷಣಾ ಪತ್ರ ವಿತರಣಾ ಔಪಚಾರಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಾಸಭಾದ ಕಟ್ಟಡ ನಿರ್ಮಾಣ ಕಾರ್ಯ ಚುರುಕುಗೊಳಿಸುವ,ಆಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಸಮಾಜ ಸಂಘಟನಾತ್ಮಕವಾಗಿ ಕಟ್ಟುವ ಕಾರ್ಯ, ಸಮಾಜ ಚಿಂತನೆ ಸೇರಿದಂತೆ ಪದಾಧಿಕಾರಿ, ಹಿರಿಯರಿಂದ ಬರುವ ಸಲಹೆ ಸೂಚನೆ ಅನುಸರಿಸಿಕೊಂಡು ಮುನ್ನಡೆಯುವುದಾಗಿ ತಿಳಿಸಿದರು.
ಮಹಾಸಭಾದ ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಮಾಜದ ಹಿರಿಯರಾದ ಬಸವರಾಜ ಬಿಳೇಯಲಿ, ಅವಿರೋಧವಾಗಿ ಆಯ್ಕೆಯಾದ ಎಲ್ಲ ಕಾರ್ಯಕಾರಿ ಮಂಡಳಿಯವರಿಗೆ ಪ್ರಮಾಣ ಪತ್ರ ವಿತರಿಸಿ ಎಲ್ಲರೂ ಒಗ್ಗಟ್ಟಿನಿಂದ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಮಹಾಸಭಾದ, ಸಮಾಜದ ಘನತೆ ಗೌರವ ಹೆಚ್ಚಿಸಬೇಕೆಂದು ಹೇಳಿದರು.ಸದಾಶಿವಯ್ಯ ಮದರಿಮಠದ ಮಾತನಾಡಿ, ಮಹಾಸಭಾದ ಕಟ್ಟಡ ನಿರ್ಮಾಣ ಕಾರ್ಯ ಕುರಿತು ಮುಂದಿನ ವಾರದ ಕರೆಯಲಾಗುವ ಸಭೆಯಲ್ಲಿ ರೂಪುರೇಷೆ ತಿಳಿಸುವದಾಗಿ ಹೇಳಿದರು.
ಈ ವೇಳೆ ಸಂಶಿಮಠ ಹಾಗೂ ಬಸವರಾಜ ಕೊರ್ಲಹಳ್ಳಿ ಮಾತನಾಡಿದರು. ಎಸ್.ವಿ. ಜೀವನಗೌಡ್ರ, ಮುತ್ತನಗೌಡ ತೇಜಿಗೌಡ್ರ, ಮಲ್ಲಿಕಾರ್ಜುನಗೌಡ ಮಲ್ಲಾಪೂರ, ಬಸವರಾಜ ಅಂಗಡಿ, ಶ್ರೀಶೈಲಪ್ಪ ಚಳಗೇರಿ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಪ್ರಭಾತಕುಮಾರ ನಾರಾಯಣಪುರ, ಭೀಮರಡ್ಡೇಪ್ಪ ರಡ್ಡೇರ, ವೆಂಕಪ್ಪ ಬಂಗಾರಿ, ಮಂಜುನಾಥ ಮ್ಯಾಗೇರಿ, ಚನ್ನವೀರಪ್ಪ ಹುಣಸಿಕಟ್ಟಿ, ಚಂದ್ರಗೌಡ ಪಾಟೀಲ, ಚನ್ನಬಸಪ್ಪ ಕಂಠಿ, ಮುರುಘರಾಜೇಂದ್ರ ಬಡ್ನಿ, ಶಿವರಾಜಗೌಡ ಹಿರೇಮನಿಪಾಟೀಲ, ಕಾಶಪ್ಪ ಗದಗಿನ, ಬಾಪುಜಿ ಪಾಟೀಲ, ಶಿವಪ್ಪ ಅಂಕದ, ವಿಜಯಾನಂದ ಮುತ್ತಿನಪೆಂಡಿಮಠ, ಶಂಭು ಕಾರಕಟ್ಟಿ, ಉಮಾದೇವಿ ಕಾತರಕಿ, ಸುರೇಖಾ ಪಿಳ್ಳೆ, ಸುಪರ್ಣಾ ಬ್ಯಾಹಟ್ಟಿ, ಮಂಜುಳಾ ರೇವಡಿ, ನಿರ್ಮಲಾ ಚಿಕ್ಕನಗೌಡ್ರ, ಉಮಾವತಿ ನಾಯ್ಕರ್, ವಿಜಯಲಕ್ಷ್ಮೀ ಮಾನ್ವಿ, ಜಯಶ್ರೀ ಉಗಲಾಟದ, ಸುವರ್ಣಾ ಶೆಲ್ಲಿಕೇರಿ ಇದ್ದರು.