ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಹಿಳೆಯರು ಹಾಗೂ ಬಡವರ ಸ್ವಾವಲಂಭಿ ಬದುಕಿಗೆ ಮಹಿಳಾ ಸಂಘ ಸಂಸ್ಥೆಗಳು ಪ್ರಸ್ತುತ ದಿನದಲ್ಲಿ ಸಹಕಾರವಾಗುತ್ತಿದೆ ಎಂದು ಗ್ರಾಪಂ ಅಧಿಕಾರಿ ಪಿಡಿಒ ಡಾ.ಶೋಭಾರಾಣಿ ಹೇಳಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಪಂ ಆವರಣದಲ್ಲಿ ‘ಐಕ್ಯ’ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಹಾಗೂ ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಬ್ಯಾಂಕ್‌ಗಳಲ್ಲಿ ಮಹಿಳಾ ಸಂಘಟನೆ, ಸಂಘ ಸಂಸ್ಥೆಗಳಿಗೆ ಸರ್ಕಾರಗಳು ಅವರ ಅನುಗುಣವಾಗಿ ಗುಂಪುಗಳ ಮೂಲಕ ಆರ್ಥಿಕ ಸಹಾಯ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸಂಘ-ಸಂಸ್ಥೆಗಳು ಮುಂದೆ ಬರಬೇಕು. ‘ಐಕ್ಯ’ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ನವರು ಮಹಿಳೆಯರು, ಕಾರ್ಮಿಕರ ಪರವಾಗಿ ನಿಂತು ಅವರ ಏಳಿಗೆಗೆ ಶ್ರಮವಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷೆ ಆಶಾಲತ ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಮೈಸೂರು ಪ್ರಾದೇಶಿಕ ಅಧ್ಯಕ್ಷೆ ಎನ್. ಸರಸ್ವತಿ, ಕಾರ್ಮಿಕರು, ಅಗ್ನಿಶಾಮಕ ದಳದವರ ಸೇವೆ ಹಾಗೂ ಪತ್ರಕರ್ತರ ಶ್ರಮ ತ್ಯಾಗಗಳ ಬಗ್ಗೆ ಕುರಿತು ಮಾತನಾಡಿ, ನಂತರ ಸನ್ಮಾನ ಸ್ವೀಕರಿಸಿದರು. ಇದೇ ವೇಳೆ ಗ್ರಾಪಂ ಮಾಜಿ ಸದಸ್ಯ ಅಪ್ಪಾಜಿ, ಮಂಡ್ಯ ಅನುಪಮಾ, ಅಗ್ನಿಶಾಮಕ ದಳದ ಸಿಬ್ಬಂದಿ ಶ್ರೀಶೈಲ, ತೇಜೋಮೂರ್ತಿ, ಗ್ರಾಪಂ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಧ್ಯಕ್ಷರಾಗಿ ಎಚ್.ಟಿ.ರಾಜಶೇಖರ್ ಅವಿರೋಧ ಆಯ್ಕೆ


ಶ್ರೀರಂಗಪಟ್ಟಣ ತಾಲೂಕು ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಟಿ.ರಾಜಶೇಖರ್ ಅವಿರೋಧವಾಗಿ ಆಯ್ಕೆಯಾದರು.

14 ಮಂದಿ ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರ್ ಎಚ್.ಟಿ., ರಾಘವೇಂದ್ರ ಎಚ್ ಹಾಗೂ ಪ್ರಕಾಶ್.ಎನ್.ಎನ್ ನಾಮಪತ್ರ ಸಲ್ಲಿಸಿದರು. ನಿವೃತ್ತ ಶಿಕ್ಷಕ ಸಿದ್ದಲಿಂಗು ಅವರ ಸಂಧಾನದಿಂದ ರಾಘವೇಂದ್ರ ಹಾಗೂ ಪ್ರಕಾಶ ಅವರು ನಾಮಪತ್ರ ಹಿಂಪಡೆದ ಕಾರಣ ಅಂತಿಮವಾಗಿ ರಾಜಶೇಖರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಸಾದ್ ಅವಿರೋಧ ಎಂದು ಘೋಷಣೆ ಮಾಡಿದರು.ಚುನಾವಣೆಗೆ ಸೂಚಕರಾಗಿ ಪ್ರಕಾಶ್, ಅನುಮೋದಕರಾಗಿ ರಮೇಶ ಪಾಲ್ಗೊಂಡಿದ್ದರು. ಸಂಘದ ನಿರ್ದೇಕರಾದ ಚಂದ್ರು, ರಮೇಶ, ಪ್ರಕಾಶ, ರಮೇಶ, ಮಂಜುನಾಥ್, ಸುಮತಿ, ರವಿಕುಮಾರ್ ಇದ್ದರು.