ಸಾರಾಂಶ
ಸಂಚಾರ ವ್ಯವಸ್ಥೆ, ಚಹಾ ಡಬ್ಬಿ ಅಂಗಡಿಗಳಿಗೆ ಅವಕಾಶ, ಪಾರ್ಕಿಂಗ್ ವ್ಯವಸ್ಥೆ, ಪೆಂಡಾಲ್‌ಗಳಿಗೆ ಜನಸಾಂಧ್ರತೆ ನಿಯಂತ್ರಿಸಲು ಪೊಲೀಸ್ ಹಾಗೂ ಹೋಂಗಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು ಎಂದು ಕಮಿಷನರ್‌ಗೆ ಮನವಿ ಮಾಡಲಾಯಿತು.
ಹುಬ್ಬಳ್ಳಿ:
ಗಣೇಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಗಣೇಶೋತ್ಸವವನ್ನು ಶಾಂತತೆ, ಏಕತೆ ಮನೋಭಾವದಿಂದ ಆಚರಿಸಬೇಕು. ಈ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕಾರ್ಯವಾಗಬೇಕು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಹೇಳಿದರು.ಗಣೇಶೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವಗಳ ಸಮಿತಿಗಳ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈ ವೇಳೆ ಮಹಾ ಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಸಂಚಾರ ವ್ಯವಸ್ಥೆ, ಚಹಾ ಡಬ್ಬಿ ಅಂಗಡಿಗಳಿಗೆ ಅವಕಾಶ, ಪಾರ್ಕಿಂಗ್ ವ್ಯವಸ್ಥೆ, ಪೆಂಡಾಲ್‌ಗಳಿಗೆ ಜನಸಾಂಧ್ರತೆ ನಿಯಂತ್ರಿಸಲು ಪೊಲೀಸ್ ಹಾಗೂ ಹೋಂಗಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು. ಪ್ರತಿಷ್ಠಾಪನೆ, ವಿಸರ್ಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಬೇಕು ಎಂದರು.ಈ ವೇಳೆ ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಸದಸ್ಯರಾದ ಅನಿಲ ಬೇವಿನಕಟ್ಟಿ, ಸಂತೋಷ ಶೆಟ್ಟಿ, ಗಾಯತ್ರಿ ನೆಲ್ಲಿಕೊಪ್ಪ, ಸಾಧನಾ ಪೂಜಾರ, ರೂಪಾ ಅಂಗಡಿ, ಸಂತೋಷ ವೆರ್ಣೇಕರ, ಅನಿಲ ಕವಿಶೆಟ್ಟಿ, ಡಾ. ಚಿದಾನಂದ ತೆಗ್ಗಿಹಳ್ಳಿ, ಸಿ.ಜಿ. ಧಾರವಾಡ ಶೆಟ್ರು, ರೋಹನ ಗೊಂದಕರ, ಪ್ರಮೋದ ಬದ್ಧಿ ಸೇರಿದಂತೆ ಹಲವರು ಈ ವೇಳೆ ಇದ್ದರು. ಬಳಿಕ ಮಹಾ ಮಂಡಳದ ನಿಯೋಗವು ಆಯುಕ್ತರನ್ನು ಸನ್ಮಾನಿಸಿತು. ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸ್ವಾಗತಿಸಿ ವಂದಿಸಿದರು.