ಎನ್‌ಡಿಎ ಅಭ್ಯರ್ಥಿ ಎಚ್ಡಿಕೆ ಪರ ಸಿ.ಪಿ.ಶಿವರಾಜು ಬಿರುಸಿನ ಪ್ರಚಾರ

| Published : Apr 21 2024, 02:20 AM IST

ಎನ್‌ಡಿಎ ಅಭ್ಯರ್ಥಿ ಎಚ್ಡಿಕೆ ಪರ ಸಿ.ಪಿ.ಶಿವರಾಜು ಬಿರುಸಿನ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಮಂಡ್ಯ ಜಿಲ್ಲೆಗೆ ಅಪಾರವಾಗಿದೆ. ನೀರಾವರಿ, ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿಎಂ ಆಗಿ ರೈತರ 26 ಸಾವಿರ ಕೋಟಿ ಸಾಲಮನ್ನಾ ಮಾಡಿ ದೇಶದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜು ಕೆನ್ನಾಳು ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಗ್ರಾಮದಲ್ಲಿ ಮನೆಮನೆಗೆ ತೆರಳಿ ಕರಪತ್ರ ನೀಡಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜನಪರ ಯೋಜನೆಗಳು ಬಗ್ಗೆ ಅರಿವು ಮೂಡಿಸಿ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಕೊಟ್ಟು ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಮಂಡ್ಯ ಜಿಲ್ಲೆಗೆ ಅಪಾರವಾಗಿದೆ. ನೀರಾವರಿ, ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿಎಂ ಆಗಿ ರೈತರ 26 ಸಾವಿರ ಕೋಟಿ ಸಾಲಮನ್ನಾ ಮಾಡಿ ದೇಶದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ಕಾಂಗ್ರೆಸ್‌ನವರು 60 ವರ್ಷಗಳ ಕಾಲ ಅಧಿಕಾರ ನಡೆಸಿ ಮಾಡಲು ಸಾಧ್ಯವಾಗದ ಕೆಲಸವನ್ನು ನರೇಂದ್ರ ಮೋದಿ ಅವರು ಕೇವಲ 10 ವರ್ಷದಲ್ಲಿ ಮಾಡಿದ್ದಾರೆ. ಮೋದಿ ಅವರಿಗೆ ಶಕ್ತಿ ನೀಡಲು ಎನ್ ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಯುವ ಮುಖಂಡ ಚಿಕ್ಕಾಡೆ ಚೇತನ್, ಪ್ರಸನ್ನ, ಬಿಜೆಪಿ ಮುಖಂಡ ಕಾಂತರಾಜ್, ಚಿಕ್ಕಣ್ಣ, ಜೆಡಿಎಸ್ ಮುಖಂಡರಾದ ಕೆ.ಟಿ.ವಿಶ್ವನಾಥ್, ಎಂ.ಸ್ವಾಮಿ, ಪ್ರಕಾಶ್, ಮಂಜುಳ, ಕೆ.ಎಚ್.ಲೋಕೇಶ್‌ಗೌಡ, ಹೇಮಂತ್, ಕೆ.ಎಸ್.ಮಂಜು, ದೊಡ್ಡೇಗೌಡ, ಅನಿಲ್ ಸೇರಿದಂತೆ ಹಲವರು ಹಾಜರಿದ್ದರು.ಹಲಗೂರಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ

ಕನ್ನಡಪ್ರಭ ವಾರ್ತೆ ಹಲಗೂರುಮಂಡ್ಯ ಲೋಕಸಭೆ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಸ್ಥಳೀಯ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಮನೆ ಮನೆಗೆ ತೆರಳಿ ಮತಯಾಚಿಸಿದರು.ಶನಿವಾರ ಬೆಳಗ್ಗೆ ನಡಕೇರಿ ಶ್ರೀವೀರಭದ್ರ ದೇವಸ್ಥಾನದಲ್ಲಿ ಕಾರ್ಯಕರ್ತರು ಕುಮಾರಣ್ಣನವರ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿ ಹೊರಟ ಮೈತ್ರಿ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಕುಮಾರಸ್ವಾಮಿ ಮಾಡಿರುವ ಸಾಧನೆಯ ಕರಪತ್ರ ನೀಡಿ ಮತಯಾಚಿಸಿದರು.ಗ್ರಾಮ ಪಂಚಾಯ್ತಿ ಸದಸ್ಯ ಮೂರ್ತಿ ಮಾತನಾಡಿ, ದೇಶವೇ ಮೆಚ್ಚುವಂತಹ ಕಾರ್ಯಗಳನ್ನು ಮಾಡಿರುವ ಪ್ರಧಾನಿ ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಅವರು ಮತ್ತೆ ಪ್ರಧಾನ ಮಂತ್ರಿಯಾದರೆ ನಮ್ಮ ದೇಶ ಸುಭದ್ರವಾಗಿರುತ್ತದೆ. ಕುಮಾರಸ್ವಾಮಿ ಅವರ ಗೆಲುವಿನಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನುಡಿದರು.

ಜೆಡಿಎಸ್ ಮುಖಂಡ ಎಚ್.ಎನ್.ರಾಮಚಂದ್ರೆಗೌಡ, ಗ್ರಾಪಂ ಸದಸ್ಯರಾದ ಎಚ್.ಎನ್.ಶಿವಕುಮಾರ್, ರವೀಶ್, ಶಶಿ, ವೀರೇಶ, ಮೂರ್ತಿ, ಮಾಜಿ ಅಧ್ಯಕ್ಷೆ ಮಂಗಳಮ್ಮ, ಲಕ್ಷ್ಮೀ, ಸದಾಶಿವ, ಜೆ. ದೇವರಾಜು, ರವಿ ಮೋದಿ, ಶಿವು, ಎಚ್.ಆರ್.ವಿಶ್ವ ದಿವ್ಯಾನಂದ, ಮಹಮ್ಮದ್, ಇಂತಿಯಾಜ್ ಪಾಷಾ, ಮಹಮ್ಮದ್ ಸುಹೇಲ್, ಬಾಬು, ಮಂಜುನಾಥ್ ಇತರರಿದ್ದರು.