ಡಿಕೆಸು ಪರ ಬೀದಿ ಬದಿ ವ್ಯಾಪಾರಿಗಳಿಂದ ಮತಯಾಚನೆ

| Published : Apr 21 2024, 02:20 AM IST

ಡಿಕೆಸು ಪರ ಬೀದಿ ಬದಿ ವ್ಯಾಪಾರಿಗಳಿಂದ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸಂಸದ ಡಿ.ಕೆ.ಸುರೇಶ್ ಅವರ ಅಭಿವೃದ್ಧಿ ಕೆಲಸಗಳಿಂದಲೇ ರಾಜ್ಯದಲ್ಲಿ ಮನೆ ಮಾತಾಗಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿನ ರಸ್ತೆ ಬದಿ ವ್ಯಾಪಾರಿಗಳನ್ನು ಸಂಪರ್ಕಿಸಿ ಮತಯಾಚನೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷ ಡಾ.ಸಿ.ಇ.ರಂಗಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ರಾಮನಗರ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ವಿಭಾಗ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳನ್ನು ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಮತಯಾಚಿಸಬೇಕು ಎಂದು ಹೇಳಿದರು.

ಈ ಹಿಂದಿನ ಯಾವ ಸರ್ಕಾರಗಳು ರಸ್ತೆ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಆಲಿಸಲಿಲ್ಲ. ಆದರೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಸ್ತೆ ಬದಿ ವ್ಯಾಪಾರಿಗಳ ಸಮಸ್ಯೆ ಆಲಿಸಿ, ಪರಿಹಾರ ನೀಡುತ್ತಿದೆ. ಹಾಗಾಗಿ ರಾಜ್ಯದ ಐದು ಗ್ಯಾರಂಟಿ ಯೋಜನೆಗಳಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಆಗುತ್ತಿರುವ ಪ್ರಯೋಜನ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಜತೆಯಲ್ಲಿರುತ್ತದೆ. ಜಿಲ್ಲೆಯಿಂದ ಅಧಿಕಾರದ ಪಡೆದು, ಪ್ರಧಾನಮಂತ್ರಿ ಹಾಗು ಮುಖ್ಯಮಂತ್ರಿಯಾಗಿ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದವರು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಇನ್ನು ರಸ್ತೆ ಬದಿ ವ್ಯಾಪಾರಿಗಳ ಜೀವನ ಮಟ್ಟ ಸುಧಾರಣೆ ಮಾಡಿಲ್ಲ. ರಾಜ್ಯದ ಬೇರೆ ಜಿಲ್ಲಾ ಕೇಂದ್ರಗಳನ್ನು ಹೋಲಿಸಿದರೆ, ರಾಮನಗರ ಜಿಲ್ಲಾ ಕೇಂದ್ರವೂ ಸಾಕಷ್ಟು ಹಿಂದುಳಿದೆ ಎಂದರು.

ಕೆಪಿಸಿಸಿ ರಸ್ತೆ ಬದಿ ವ್ಯಾಪಾರಿಗಳ ಜಿಲ್ಲಾಧ್ಯಕ್ಷ ಮುನಿಸ್ವಾಮಿ (ಚಂದ್ರು), ತಾಲೂಕು ಮುಖಂಡರಾದ ಸುರೇಶ್, ವೆಂಕಟೇಶ್ ಕೃಷ್ಣಮೂರ್ತಿ, ಸಂಬಯ್ಯ, ಮಾದೇವ ಚಂದ್ರಶೇಖರ್, ಶ್ರೀನಿವಾಸ್, ಸಿದ್ದರಾಜು, ನವೀನ್ ಕುಮಾರ್, ಮಹೇಶ್, ಶಿಲ್ಪ, ಇಮ್ರಾನ್, ಅನಿಲ್ ಕುಮಾರ್, ಚೇತು ಹಾಜರಿದ್ದರು.20ಕೆಆರ್ ಎಂಎನ್ 12

ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷ ಡಾ.ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.