ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ದಿ.ಎಚ್.ಎಸ್.ಮಹದೇವಪ್ರಸಾದ್ ಸಮಾಧಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ಕುಟುಂಬಸ್ಥರು ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಾಲಹಳ್ಳಿಯಲ್ಲಿ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ೮ನೇ ವರ್ಷದ ಪುಣ್ಯಾರಾಧನೆಗೆ ಸ್ಥಳೀಯ ಜನಪ್ರತಿನಿಧಿಗಳು, ಕೈ ಪಾಳೆಯದ ಮುಖಂಡರ ಜೊತೆಗೆ ಬಿಜೆಪಿ ಹಲವು ಮುಖಂಡರು ಆಗಮಿಸಿದ್ದರು.ಗ್ರಾಮದ ಎಚ್.ಎನ್.ಶ್ರೀಕಂಠಶೆಟ್ಟರ ಸಮುದಾಯ ಭವನ ಹಾಗೂ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ನಿವಾಸದ ಮುಂದೆ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ಬೀಡುಬಿಟ್ಟಿದ್ದರು. ಹಾಲಹಳ್ಳಿ-ನಿಟ್ರೆ ತೆರಳುವ ರಸ್ತೆಯ ಬೊಗ್ಗನಪುರ ಫಾರಂ ಹೌಸ್‌ನಲ್ಲಿರುವ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್ ಸಮಾಧಿ ಸ್ಥಳಕ್ಕೆ ಸಾವಿರಾರು ಜನರು ಭೇಟಿ ನೀಡಿ ನಮನ ಸಲ್ಲಿಸಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಚ್.ನಂಜುಂಡಪ್ರಸಾದ್, ರೂಪ ನಂಜುಂಡಪ್ರಸಾದ್, ಎಚ್.ಎಸ್.ಪ್ರೇಮ, ಡಾ.ಚಂದ್ರಚೂಡ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರ ಪತ್ನಿ ವಿದ್ಯಾಗಣೇಶ್, ಪುತ್ರ ಇಷ್ಟಾರ್ಥ್ ಪ್ರಸಾದ್ ಹಾಗೂ ಕುಟುಂಬದ ಸದಸ್ಯರು ನಮನ ಸಲ್ಲಿಸಿದರು.
ಈ ಸಮಯದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹುಣಸೂರು ಮಾಜಿ ಶಾಸಕ ಮಂಜುನಾಥ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರುಜಯರಾಂ, ಮೈಸೂರು-ಚಾಮರಾಜನಗರ ಜಿಲ್ಲಾ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಮಧುಕುಮಾರ್, ಕಾರ್ಯದರ್ಶಿ ಎಚ್.ಎಸ್.ದಿನೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮುಖಂಡರಾದ ಶಿವಪುರ ಸುರೇಶ್, ಹಂಗಳ ಎಚ್.ಎಂ.ಮಹದೇವಪ್ಪ, ಎಸ್.ಶಿವನಾಗಪ್ಪ, ಟಿ.ಪಿ.ನಾಗರಾಜು, ಬೆಟ್ಟಹಳ್ಳಿ ಕೆಂಪರಾಜು, ಮಂಚಹಳ್ಳಿ ಲೋಕೇಶ್, ಪುರಸಭೆ ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಚಾಮರಾಜನಗರ, ಮೈಸೂರು ಜಿಲ್ಲೆಯ ಸಾವಿರಾರು ಮಂದಿ ಕಾರ್ಯಕರ್ತರು, ಮುಖಂಡರು ಹಾಗೂ ಹಲವು ಅಧಿಕಾರಿಗಳು ನಮನ ಸಲ್ಲಿಸಿದರು.ಪತಿ ನೆನದು ಕಣ್ಣೀರಿಟ್ಟ ಮಾಜಿ ಸಚಿವೆ ಡಾ.ಗೀತಾ
ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಪತಿ ದಿ.ಎಚ್.ಎಸ್.ಮಹದೇವಪ್ರಸಾದ್ ನೆನಪಿಸಿಕೊಂಡು ಸಮಾಧಿ ಬಳಿ ಕಣ್ಣೀರು ಹಾಕಿದರು. ಶುಕ್ರವಾರ ಬೆಳಗ್ಗೆ ನಿಟ್ರೆ ರಸ್ತೆಯ ಬೊಕ್ಕನಪುರ ತೋಟದಲ್ಲಿನ ಪತಿ ಮಹದೇವಪ್ರಸಾದ್ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ನೆನೆದು ಕಣ್ಣೀರು ಹಾಕಿದ್ದು ನೋಡಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮೈದುನ ಎಚ್.ಎಸ್.ನಂಜುಂಡಪ್ರಸಾದ್, ಸೊಸೆ ವಿದ್ಯಾ ಗಣೇಶ್ ಕಣ್ಣು ಒದ್ದೆಯಾಯಿತು.