ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಸಮಾಜ ಸೇವೆ ಮಾಡುವಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳು ಎನ್ನೆಸ್ಸೆಸ್ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ತಿಳಿಯುತ್ತಿದೆ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸಾಧ್ಯ ಎಂದು ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ 2023-24ನೇ ಸಾಲಿನ ಎನ್‌ಎಸ್‌ಎಸ್, ಕ್ರೀಡೆ, ಸಾಂಸ್ಕೃತಿಕ, ರಿಬ್ಬನ್ ಕ್ಲಬ್ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ಅಭ್ಯಾಸ ಅಂಕ ಪಡೆದು ಉದ್ಯೋಗ ಪಡೆಯಬೇಕು. ತಂದೆ-ತಾಯಂದಿರಿಗೆ ಹೆಸರು ತರಬೇಕು ಎಂದರು.ವಿಶ್ರಾಂತ ಪ್ರಾಂಶುಪಾಲ ಡಾ. ರಾಘವೇಂದ್ರ ಗುಡಗುಂಟಿ ಮಾತನಾಡಿ, ಶಿಕ್ಷಕರೇ ಶಕ್ತಿಯಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉಪನ್ಯಾಸಕರನ್ನು ವಿದ್ಯಾಭ್ಯಾಸಕ್ಕೆ ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ಉತ್ತಮ ಅಂಕ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಈಗಿನಿಂದಲೇ ಅಭ್ಯಾಸ ಮಾಡಬೇಕು. ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಸರಕಾರಿ ಉದ್ಯೋಗ ಪಡೆಯಲು ಮುಂದಾಗಬೇಕು ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಈಗಿನಷ್ಟು ಸೌಲಭ್ಯಗಳನ್ನು ಹೊಂದಿರಲಿಲ್ಲ. ಆಗಿನ ಸಂಸದ ರಾಜಾ ರಂಗಪ್ಪ ನಾಯಕ, ಶಾಸಕ ರಾಜಾ ವೆಂಕಟಪ್ಪ ನಾಯಕ, ಎಪಿಎಂಸಿ ರಾಜಾ ಮೌನೇಶ ನಾಯಕ ಅವರ ಸೇವೆಯನ್ನು ಮರೆಯುವಂತಿಲ್ಲ. ಪರೀಕ್ಷೆ ಕೇಂದ್ರ, ಕೊಠಡಿಗಳು, ಗ್ರಂಥಾಲಯಕ್ಕೆ ಪುಸ್ತಕ, ಉಪನ್ಯಾಸಕರು ಸೇರಿದಂತೆ ವಿವಿಧ ಸೇವೆಗಳನ್ನು ನೀಡಿದ್ದಾರೆ. ಇಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದೇನೆ. ಇಲ್ಲಿರುವ ವಿದ್ಯಾರ್ಥಿಗಳು ಸರಕಾರ ಹುದ್ದೆಗೆ ಸೇರಿದಾಗ ನನ್ನಷ್ಟು ಸಂತೋಷ ಪಡುವವರು ಯಾರು ಇಲ್ಲ. ಅನೇಕರಿಗೆ ಪಿಹೆಚ್‌ಡಿ ಮಾರ್ಗದರ್ಶನ ಮಾಡಿದ್ದೇನೆ. ಇಲ್ಲಿನ ಅನುಭವ ಜೀವನದುದ್ದಕ್ಕೂ ಇರುತ್ತದೆ ಎಂದರು.ವಿದ್ಯಾರ್ಥಿಗಳಾದ ರತ್ನಾ, ಪ್ರಜಾ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಂಶುಪಾಲರಾದ ಆನಂದಕುಮಾರ ಜೋಶಿ, ಶಹಾಪುರದ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಿದ್ಧಪ್ಪ ದಿಗ್ಗಿ, ಶೋಭಾ ಎಂ. ಶೆಟ್ಟಿ ಪ್ರಾಧ್ಯಾಪಕರು, ವಿಶ್ವನಾಥರೆಡ್ಡಿ, ಎನ್ನೆಸ್ಸೆಸ್ ಅಧಿಕಾರಿ ಬಲಭೀಮರಾಯ ದೇಸಾಯಿ, ವೆಂಕೋಬ ಬಿರಾದಾರ, ಹಣಮಂತ ವಗ್ಗರ್, ಡಾ. ರಮೇಶ ಬಿ. ಶಹಾಪುರಕರ್, ರೂಪಲಕ್ಷ್ಮಿ ಕುಲಕರ್ಣಿ, ಪ್ರೊ. ದೇವಿಂದ್ರಪ್ಪ ಪಾಟೀಲ, ಡಾ. ಗುರುರಾಜ ನಾಗಲೀಕರ, ಡಾ. ಪ್ರಮೋದ ಕುಲಕರ್ಣಿ, ಶಶಿಕಲಾ ಎಸ್. ಪಾಟೀಲ, ಡಾ. ದೇವು ಹೆಬ್ಬಾಳ, ಡಾ. ರವಿ ಇತರರಿದ್ದರು.
;Resize=(128,128))
;Resize=(128,128))
;Resize=(128,128))