ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಿಂದುಳಿದ ವರ್ಗಗಳ ಸಮುದಾಯಗಳ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಶ್ರಮಿಸಿದ ಡಿ.ದೇವರಾಜ ಅರಸ್ ಅವರು ಮಹಾನ್ ಚೇತನ ಎಂದು ತಹಸೀಲ್ದಾರ್ ಚೇತನಾ ಯಾದವ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಾಮಾಜಿಕ ಪರಿವರ್ತನಕಾರ ಡಿ.ದೇವರಾಜ ಅರಸುರವರ 111ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಾಜಿ ಸಿಎಂ ಅರಸು ಅವರ ಕೊಡುಗೆಗಳು ರಾಜ್ಯದಲ್ಲಿ ಅಪಾರವಾಗಿವೆ. ಸಮಾಜದ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಬದುಕು ಕಟ್ಟಿಕೊಳ್ಳಲು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಲವು ಜನಪ್ರಿಯ ಯೋಜನೆಗಳ ಜಾರಿಗೆ ತಂದಿದ್ದರು. ಅವರ ದೂರ ದೃಷ್ಟಿಯ ಫಲವೇ ಇವತ್ತಿನ ಸಮಾಜ ಸುಧಾರಣೆಗೆ ಸಾಮಾಜಿಕ ನ್ಯಾಯಕ್ಕೆ ಹೊತ್ತು ಕೊಟ್ಟ ಹರಿಕಾರ. ಹಿಂದುಳಿದ ವರ್ಗಕ್ಕೆ ಶಕ್ತಿ ನೀಡಿದ ಮಹಾನ್ ಚೇತನರಾಗಿದ್ದಾರೆ. ಅವರ ತತ್ವ ಆದರ್ಶಗಳನ್ನು ನಾವು ಅಳವಡಿಸಿಕೊಂಡರೆ ದೇಶದ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪುಷ್ಪ, ಕಸಾಪ ಅಧ್ಯಕ್ಷ ಸಿದ್ದಲಿಂಗು, ಬಿಜೆಪಿ ಒಬಿಸಿ ಮುಖಂಡ ಮಂಜುನಾಥ್, ಕರವೇ ಶಂಕರ್ ಚಂದಗಾಲು, ಕರವೇ ಸ್ವಾಮೀಗೌಡ, ಪುರಸಭೆ ಮಾಜ ಸದಸ್ಯ ಕೃಷ್ಣಪ್ಪ, ಗೌಡಹಳ್ಳಿ ದೇವರಾಜು, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಪ್ಸರ್ ಪಾಷ, ಡಿಎಸ್‌ಎಸ್‌ಎಸ್ ಮುಖಂಡ ಕುಬೇರಪ್ಪ, ಕುಮಾರ್ ಅಲ್ಲಾ ಪಟ್ಟಣ, ಶೆಟ್ಟಹಳ್ಳಿ ಸುರೇಶ್, ಪಾಲಹಳ್ಳಿ ನಾರಾಯಣಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಡ್ರಗ್ಸ್ ವಿರೋಧಿ ಜಾಥಾ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣತಾಲೂಕಿನ ಕೆ.ಆರ್.ಸಾಗರದಲ್ಲಿ ಡಿ.ಪೌಲ್ ಕಾಲೇಜಿನ ರೆಡ್ ಕ್ರಾಸ್ ಹಾಗೂ ಎನ್.ಎಸ್.ಎಸ್ ಘಟಕ ಮತ್ತು ಕೆ.ಆರ್.ಸಾಗರ ಪೊಲೀಸ್ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಡ್ರಗ್ಸ್ ವಿರೋಧಿ ಜಾಥಾ ನಡೆಸಿದರು.ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ, ಇದರಿಂದ ಆಗುವ ಹಾನಿ ಕುರಿತ ಬೋರ್ಡ್ ಗಳನ್ನು ಹಿಡಿದು ಘೋಷಣೆ ಕೂಗಿದರು. ನಂತರ ಅರಳಿಕಟ್ಟೆ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಎಎಸ್‌ಐ ಅರುಣ್ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಹೆಚ್ಚು ಒಳಗಾಗುವುದು ಕಂಡು ಬರುತ್ತಿದೆ.ಈ ಬಗ್ಗೆ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಾಥಾದಲ್ಲಿ ಕಾಲೇಜು ಪ್ರಾಂಶುಪಾಲ ರೆ.ಡಾ.ಬೈಜು ಅಂಟೋನಿ, ಉಪಪ್ರಾಂಶುಪಾಲೆ ಡಾ.ಲೂಸಿ ಕೆ.ಜಿ., ಯೂತ್ ರೆಡ್ ಕ್ರಾಸ್ ಘಟಕದ ಮುಖ್ಯಸ್ಥ ಹರ್ಷಿತ್, ಎನ್ಎಸ್ಎಸ್ ಘಟಕದ ಗಣೇಶ್ ರಾಮುಪುರೆ ಸೇರಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.