ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2025: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 55 ಪದಕ

| Published : Aug 22 2025, 02:00 AM IST

ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2025: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 55 ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ವಿದ್ಯಾರ್ಥಿಗಳು 22 ಚಿನ್ನ, 21 ಬೆಳ್ಳಿ, 12 ಕಂಚಿನ ಪದಕದೊಂದಿಗೆ ಒಟ್ಟು 55 ಪದಕಗಳನ್ನು ಪಡೆದುಕೊಂಡರು.

ಮೂಡುಬಿದಿರೆ: ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಸಂಸ್ಥೆಯ ವತಿಯಿಂದ ನಡೆದ ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ವಿದ್ಯಾರ್ಥಿಗಳು 22 ಚಿನ್ನ, 21 ಬೆಳ್ಳಿ, 12 ಕಂಚಿನ ಪದಕದೊಂದಿಗೆ ಒಟ್ಟು 55 ಪದಕಗಳನ್ನು ಪಡೆದುಕೊಂಡರು.

ಆ. 23 ರಿಂದ 25 ರವರೆಗೆ ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕಿರಿಯರ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಕಿರಿಯರ ವಿಭಾಗದಲ್ಲಿ 60 ವಿದ್ಯಾರ್ಥಿಗಳು ಹಾಗೂ ಹಿರಿಯರ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 90 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಫಲಿತಾಂಶ:14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಸುಭಾಷ್ - ತ್ರಯತ್ಲನ್ ಸಿ (ಪ್ರಥಮ), ಕುಬೇರ - ತ್ರಯತ್ಲನ್ ಬಿ (ತೃತೀಯ), ಪ್ರಣವ್ - ತ್ರಯತ್ಲನ್ ಎ (ಪ್ರಥಮ), 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಕೃಷ್ಣ - ಜವಲಿನ್ ಎಸೆತ (ಪ್ರಥಮ), ಗುಂಡು ಎಸೆತ (ತೃತೀಯ), ಕುಶಾನ್ – ಗುಂಡು ಎಸೆತ (ದ್ವಿತೀಯ), ಮೈಲಾರಿ - ಜವಲಿನ್ ಎಸೆತ (ದ್ವಿತೀಯ), ಅಜಯ್ ಕುಮಾರ್ – 60ಮೀ (ಪ್ರಥಮ), ಧೈನಾದೇವ್ - 80ಮೀ ಹರ್ಡಲ್ಸ್ (ಪ್ರಥಮ), ಕೌಶಿಕ್ – ಉದ್ದ ಜಿಗಿತ (ತೃತೀಯ), ನವೀನ್ – ಎತ್ತರ ಜಿಗಿತ (ದ್ವಿತೀಯ), ಪೃಥ್ವಿಕ್ – ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಲೋಹಿತ್ – ಉದ್ದ ಜಿಗಿತ (ಪ್ರಥಮ). 18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಧನುಷ್ - ಚಕ್ರ ಎಸೆತ (ಪ್ರಥಮ), ಗುಂಡು ಎಸೆತ (ದ್ವಿತೀಯ), ನಿಖಿಲ್ - ಗುಂಡು ಎಸೆತ (ಪ್ರಥಮ), ಕವೀಶ್ ಕೃಷ್ಣ - ಜವಲಿನ್ ಎಸೆತ (ದ್ವಿತೀಯ), ಹಿತೇಶ್ – 110ಮೀ ಹರ್ಡಲ್ಸ್ (ತೃತೀಯ), ಪೃಥ್ವಿರಾಜ್ – 100ಮೀ (ದ್ವಿತೀಯ), ಆಕಾಶ್ - 110ಮೀ ಹರ್ಡಲ್ಸ್ (ಪ್ರಥಮ), ಸಾಗರ್ – 100ಮೀ (ಪ್ರಥಮ), ವಿನಯ್ – 1000ಮೀ (ತೃತೀಯ), ವರುಣ್ – 1000ಮೀ (ದ್ವಿತೀಯ), ಧ್ರುವ – 200ಮೀ (ದ್ವಿತೀಯ), 100ಮೀ (ತೃತೀಯ), ಜಶ್ವಿನ್ – ಎತ್ತರ ಜಿಗಿತ (ದ್ವಿತೀಯ), ಗುರು – ಉದ್ದ ಜಿಗಿತ (ದ್ವಿತೀಯ), ಮನೀಶ್ – ಉದ್ದ ಜಿಗಿತ (ಪ್ರಥಮ),14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಮೇಘಾ - ತ್ರಯತ್ಲನ್ ಸಿ (ಪ್ರಥಮ), ಮಾಲ ಟಿ ಆರ್ - ತ್ರಯತ್ಲನ್ ಬಿ (ದ್ವಿತೀಯ), ಸುಜಾತ - ತ್ರಯತ್ಲನ್ ಸಿ (ದ್ವಿತೀಯ), ಕೃತಿಕಾ - ತ್ರಯತ್ಲನ್ ಎ (ತೃತೀಯ)16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಪ್ರೇಕ್ಷಿತಾ – ಜವೆಲಿನ್ ಎಸೆತ (ಪ್ರಥಮ), ಸವಿತಾ – ಗುಂಡು ಎಸೆತ (ದ್ವಿತೀಯ), ಪ್ರತಿಭಾ - ಗುಂಡು ಎಸೆತ (ಪ್ರಥಮ), ವೀಕ್ಷಾ – 60ಮೀ (ದ್ವಿತೀಯ), ಪ್ರಿಯಾಂಕ - 600ಮೀ (ಪ್ರಥಮ), ಕಿರಣ - 600ಮೀ (ದ್ವಿತೀಯ), ರಕ್ಷಿತಾ - ಎತ್ತರ ಜಿಗಿತ (ತೃತೀಯ), ನಿಸರ್ಗ - ಉದ್ದ ಜಿಗಿತ (ಪ್ರಥಮ),18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಚಸ್ಮಿತಾ - ಚಕ್ರ ಎಸೆತ (ದ್ವಿತೀಯ), ಗುಂಡು ಎಸೆತ (ತೃತೀಯ), ಜಿಷ್ನಾ - ಚಕ್ರ ಎಸೆತ (ಪ್ರಥಮ), ಗುಂಡು ಎಸೆತ (ದ್ವಿತೀಯ), ನಿರ್ಮಲಾ – 400ಮೀ (ತೃತೀಯ), ಜಾನಕಿ – ಎತ್ತರ ಜಿಗಿತ (ದ್ವಿತೀಯ), ವೈಷ್ಣವಿ - 100ಮೀ (ಪ್ರಥಮ), ಉದ್ದ ಜಿಗಿತ (ಪ್ರಥಮ), ಗೋಪಿಕಾ – 200ಮೀ (ಪ್ರಥಮ), 100ಮೀ (ದ್ವಿತೀಯ), ಚರಿಷ್ಮಾ – 1000ಮೀ (ದ್ವಿತೀಯ), ಅಪೇಕ್ಷಾ - 100ಮೀ ಹರ್ಡಲ್ಸ್ (ತೃತೀಯ), ಗಾನವಿ - 1000 ಮೀ (ತೃತೀಯ), ನಾಗಿಣಿ – 1000ಮೀ (ಪ್ರಥಮ) ಸ್ಥಾನ ಪಡೆದಿದ್ದಾರೆ.

ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.