ಜೆಪ್ಪು ಮಹಾಕಾಳಿಪಡ್ಪು ಅಂಡರ್‌ ಬ್ರಿಡ್ಜ್‌ ಕಾಮಗಾರಿ ಮುಕ್ತಾಯಕ್ಕೆ ಗಡುವು

| Published : Oct 01 2025, 01:01 AM IST

ಜೆಪ್ಪು ಮಹಾಕಾಳಿಪಡ್ಪು ಅಂಡರ್‌ ಬ್ರಿಡ್ಜ್‌ ಕಾಮಗಾರಿ ಮುಕ್ತಾಯಕ್ಕೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಜೆಪ್ಪು ಮಹಾಕಾಳಿಪಡ್ಪು ಅಂಡರ್‌ ಬ್ರಿಡ್ಜ್‌ ಕಾಮಗಾರಿ ವಿಳಂಬ ವಿರುದ್ಧ ಮಂಗಳವಾರ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಕೂಡಲೆ ಅಂಡರ್‌ ಬ್ರಿಡ್ಜ್‌ನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆಗೊಳಿಸಿ, ಇಲ್ಲದಿದ್ದರೆ ಅಧಿಕಾರದಿಂದ ತೊಲಗಿ ಎಂದು ಆಗ್ರಹಿಸಿದರು.

ಕಾಮಗಾರಿ ವಿಳಂಬ ವಿರುದ್ಧ ಬೃಹತ್‌ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಜೆಪ್ಪು ಮಹಾಕಾಳಿಪಡ್ಪು ಅಂಡರ್ ಬ್ರಿಡ್ಜ್‌ 30 ದಿನದೊಳಗೆ ಸಾರ್ವಜನಿಕ ಸೇವೆಗೆ ನೀಡದಿದ್ದರೆ ಸಾರ್ವಜನಿಕರಿಂದಲೇ ಉದ್ಘಾಟನೆ ನಡೆಸುವುದಾಗಿ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.ಜೆಪ್ಪು ಮಹಾಕಾಳಿಪಡ್ಪು ಅಂಡರ್‌ ಬ್ರಿಡ್ಜ್‌ ಕಾಮಗಾರಿ ವಿಳಂಬ ವಿರುದ್ಧ ಬೃಹತ್‌ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಕೂಡಲೆ ಅಂಡರ್‌ ಬ್ರಿಡ್ಜ್‌ನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆಗೊಳಿಸಿ, ಇಲ್ಲದಿದ್ದರೆ ಅಧಿಕಾರದಿಂದ ತೊಲಗಿ ಎಂದು ಐವನ್‌ ಆಗ್ರಹಿಸಿದರು.ಯು.ಟಿ. ಖಾದರ್‌ ಉಸ್ತುವಾರಿ ಸಚಿವರಾಗಿದ್ದಾಗ ಸ್ಮಾರ್ಟ್‌ ಸಿಟಿಯ ಮೂಲಕ ಈ ರಸ್ತೆ ಕಾಮಗಾರಿ ಮಾಡಿದ್ದರೂ, ಕೇವಲ ಒಂದು ಅಂಡರ್‌ ಬ್ರಿಡ್ಜ್‌ ಮಾಡಿಕೊಡಲು ಲೋಕಸಭಾ ಸದಸ್ಯರಿಂದ ಹಾಗೂ ಶಾಸಕರಿಂದ ಆಗಿಲ್ಲ. ಕೇವಲ ಅಂಡರ್‌ ಬ್ರಿಡ್ಜ್‌ ಮಾಡಲು ನಾಲ್ಕು ವರ್ಷ ತೆಗೆದುಕೊಳ್ಳುವುದಾದರೆ ಬಿಜೆಪಿ ಸಂಸದರು, ಶಾಸಕರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಲೇಸು ಎಂದು ಆಗ್ರಹಿಸಿದರು.

ಮಾಜಿ ಕಾರ್ಪೊರೇಟರ್‌ ಪ್ರವೀಣ್ ಚಂದ್ರ ಮಾತನಾಡಿ, ಈ ರಸ್ತೆಯನ್ನು ಕೂಡಲೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಮಂಗಳೂರು ದಕ್ಷಿಣ ಬ್ಲಾಕ್ ಸಮಿತಿ ಅಧ್ಯಕ್ಷ ಅಬ್ದುಲ್ ಸಲೀಂ, ಮಾಜಿ ಕಾರ್ಪೊರೇಟರ್‌ಗಳಾದ ಅಶ್ರಫ್ ಬಜಾಲ್, ಅಪ್ಪಿ, ಮುಖಂಡರಾದ ನಾಗೇಂದ್ರ ಕುಮಾರ್, ಕವಿತಾ ವಾಸು, ವಿಜಯ ಲಕ್ಷ್ಮಿ, ಬಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಳ್ ಬಾಗ್, ಶಾಹುಲ್ ಹಮೀದ್, ನವಾಜ್ ಜೆಪ್ಪು, ನೆಲ್ಸನ್ ರೊಚೆ, ಹೈದರ್ ಮತ್ತಿತರರು ಇದ್ದರು.