ರಾಜ್ಯಾದ್ಯಂತ ಕುಪ್ಮಾ ಬಲಪಡಿಸಲು ತೀರ್ಮಾನ: ಡಾ.ಮೋಹನ ಆಳ್ವ

| Published : Sep 02 2024, 02:11 AM IST

ಸಾರಾಂಶ

2023-24ರ ಸಾಲಿನ ವಾರ್ಷಿಕ ವರದಿಯನ್ನು ಪ್ರೊ.ನರೇಂದ್ರ ಎಲ್. ನಾಯಕ್ ಮಂಡಿಸಿದರು. ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ನಟ್ಟೊಜ ಆರ್ಥಿಕ ವರ್ಷದ ಆಯವ್ಯಯ ಪಟ್ಟಿ ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಪ್ಮಾ)ದ 2023-2024 ರ ಸಾಲಿನ ವಾರ್ಷಿಕ ಮಹಾಸಭೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಕುಪ್ಮಾದ ಗೌರವ ಅಧ್ಯಕ್ಷ ಕೆ.ಸಿ. ನಾಯಕ್, ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ , ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಉದ್ಘಾಟಿಸಿದರು. ರಾಜ್ಯ ಕುಪ್ಮಾ ಸಮಿತಿ ಅಧ್ಯಕ್ಷ ಡಾ. ಮೋಹನ ಆಳ್ವ ಮಾತನಾಡಿ, ಕುಪ್ಮಾ ಕಾರ್ಯಕಾರಿಣಿ ಸಮಿತಿ ರಾಜ್ಯಾದ್ಯಂತ ಬಲಪಡಿಸುವ ಬಗ್ಗೆ ಮತ್ತು ಕುಪ್ಮಾಗೆ ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ನೂತನ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸಮಿತಿಯು ಕಾರ್ಯನಿರ್ವಹಿಸುತ್ತದೆ ಎಂದರು.

ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ಕೀರ್ತನ್ ಕುಮಾರ್, ಕುಪ್ಮಾ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ, ಕುಪ್ಮಾ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಯುವರಾಜ್ ಜೈನ್, ಜೊತೆ ಕಾರ್ಯದರ್ಶಿಗಳಾದ ವಿಶ್ವನಾಥ ಶೇಷಾಚಲ, ರಮೇಶ್ ಕೌಡೂರು, ಸದಸ್ಯ ಬಿ.ಎ. ನಝೀರ್‌ ಇದ್ದರು. 2023-24ರ ಸಾಲಿನ ವಾರ್ಷಿಕ ವರದಿಯನ್ನು ಪ್ರೊ.ನರೇಂದ್ರ ಎಲ್. ನಾಯಕ್ ಮಂಡಿಸಿದರು. ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ನಟ್ಟೊಜ ಆರ್ಥಿಕ ವರ್ಷದ ಆಯವ್ಯಯ ಪಟ್ಟಿ ಪ್ರಸ್ತುತಪಡಿಸಿದರು.ಕುಪ್ಮಾ ಬೆಂಗಳೂರು ಉಪಾಧ್ಯಕ್ಷ ದಿಲೀಪ್ ವಂದಿಸಿದರು. ಕಾರ್ಯದರ್ಶಿ ಡಾ.ದೇವರಾಜ್‌ ನಿರೂಪಿಸಿದರು.