ಕನಕಪುರ: ವಿಶ್ವ ಪರಿಸರ ದಿನಾಚಣೆ ಪ್ರಯುಕ್ತ ಭಾರತ್ ಗ್ಯಾಸ್ ವತಿಯಿಂದ ಸಹಕಾರ ಭಾರತ್ ಗ್ಯಾಸ್ ಮತ್ತು ಎಸ್‌ಎಂಜೆ ಎಂಟರ್ ಪ್ರೆಸಸ್ ಹಾಗೂ ಪರಿಸರ ಪ್ರೇಮಿಗಳ ಸಂಘದ ಸಹಯೋಗದಲ್ಲಿ ತಾಲೂಕು ಸಹಕಾರ ಸಂಘದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತ.
ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಮಾತನಾಡಿ, ಮನುಷ್ಯರು ತಮ್ಮ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುತ್ತಿದ್ದಾರೆ. ಇದರಿಂದ ಸಕಾಲದಲ್ಲಿ ಮಳೆಯಾಗದೆ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಅದೇ ರೀತಿ ಜಾಗತಿಕ ತಾಪಮಾನದ ಹೆಚ್ಚಳದಿಂದ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದ್ದು, ನಾವು ಪರಿಸರ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ನಮ್ಮ ಮುಂದಿನ ಪೀಳಿಗೆಯ ಆರೋಗ್ಯಕರ ಜೀವನಕ್ಕೆ ಮರಗಳ ನೆಡುವಿಕೆ, ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.ಎಸ್‌ಎಂಜೆ ಎಂಟರ್ ಪ್ರೈಸಸ್ ಮಾಲೀಕ ಜೋಸೆಫ್ ಗೊನ್ಸಾಲ್ವಿಸ್, ಕಾವ್ಯ ಪ್ರಸಾದ್, ಟಿಎಪಿಸಿಎಂಎಸ್ ನಿರ್ದೇಶಕರಾದ ಚಿಕ್ಕಣ್ಣ, ದೇವರಾಜು, ನಾಚಿ ನಾಗರಾಜು, ರಾಜಶೇಖರ್, ಮಂಗಳಗೌರಿ, ಸಹಕಾರ ಭಾರತ್ ಗ್ಯಾಸ್‌ನ ಸಿಇಒ ಆಶಾ, ವ್ಯವಸ್ಥಾಪಕ ಕೆ.ನಾಗರಾಜ್ ಇತರರು ಭಾಗವಹಿಸಿದ್ದರು.
ಕೆಕೆಪಿ ಸುದ್ದಿ 03:ಕನಕಪುರ ರೈಸ್‌ಮಿಲ್ ಆವರಣದಲ್ಲಿ ಭಾರತ್ ಗ್ಯಾಸ್ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವೆಂಕಟೇಶ್, ಜೋಸೆಫ್ ಗೊನ್ಸಾಲ್ವಿಸ್, ಕಾವ್ಯ ಪ್ರಸಾದ್, ಚಿಕ್ಕಣ್ಣ, ನಾಗರಾಜು ಉಪಸ್ಥಿತರಿದ್ದರು.