ಸಾರಾಂಶ
Demand for Amit Shah's exile
ಮುದಗಲ್: ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ದೇಶದ ಗೃಹಮಂತ್ರಿಗಳಾದ ಅಮಿತ್ ಶಾ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಳಸಿದ ಪದಬಳಕೆ ಮಾಡಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದ್ದು, ಕೂಡಲೇ ಸಚವ ಸಂಪುಟದಿಂದ ಅವರನ್ನು ವಜಾಗೊಳಿಸಿ ರಾಷ್ಟ್ರಪತಿಗಳು ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಶುಕ್ರವಾರ ಮುದಗಲ್ ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಾಡತಹಸೀಲ್ದಾರ ತುಳಾಜಾರಾಮ್ ಸಿಂಗ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಸಂವಿಧಾನದಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸಂಸತ್ ಭವನದಲ್ಲಿಯೇ ಬಾಬಾ ಸಾಹೇಬ್ ಅವರ ವಿರುದ್ಧ ಮಾತನಾಡುತ್ತಿರುವ ಅಮಿತ್ ಷಾ ಅವರು ಶೋಷಿತ ವರ್ಗಗಳಿಗೆ ತೋರಿಸುತ್ತಿರುವ ಅಗೌರವ ಎಂದು ದಲಿತ ಮುಖಂಡ ಶರಣಪ್ಪ ಕಟ್ಟಿಮನಿ ಆರೋಪಿಸಿದರು. ಬಿಜೆಪಿ ಪಕ್ಷ ಹಾಗೂ ಆರ್.ಎಸ್.ಎಸ್ ನವರ ಸಂಸ್ಕೃತಿ ಇದರಿಂದಲೇ ಸಮಾಜಕ್ಕೆ ತಿಳಿಯುತ್ತಿದ್ದು, ಜನಸಾಮಾನ್ಯರು ಕೂಡ ಇವರನ್ನು ಮುಂದಿನ ದಿನಮಾನಗಳಲ್ಲಿ ತಕ್ಕಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.ದಲಿತ ಮುಂಖಡರಾದ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಸಂತೋಷ ಕುಮಾರ್, ಹನುಮಂತಪ್ಪ ಆಶಿಹಾಳ, ನಾಗರಾಜ ಕಟ್ಟಿಮನಿ, ಹನುಮಂತ ಬಡಿಗೇರ್, ಬಸವರಾಜ, ಮಹಾದೇವಪ್ಪ, ಹೊಳೆಯಪ್ಪ, ವೀರೇಶ ಸ್ಭೆರಿದಂತೆ ಇತರರಿದ್ದರು. ---20ಎಂಡಿಎಲ್01: ಮುದಗಲ್ ಪಟ್ಟಣದಲ್ಲಿ ದಸಂಸ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಆಗ್ರಹಿಸಿದರು.