ಸಾರಾಂಶ
ಹಿರಿಯೂರು: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದಲ್ಲಿ ಕನ್ನಡ ಜಾಗೃತಿ ಅಭಿಯಾನ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದು, ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ನಾಮಫಲಕ ಹಾಗೂ ಜಾಹೀರಾತು ಫಲಕಗಳಿರಬೇಕು. ಫೆಬ್ರವರಿ 10ನೇ ತಾರೀಕಿನ ಒಳಗಾಗಿ ಅನ್ಯ ಭಾಷೆಯ ನಾಮಫಲಕಗಳನ್ನು ಬದಲಿಸಿ ಕನ್ನಡ ನಾಮಫಲಕಗಳನ್ನು ಹಾಕಬೇಕು. ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ಅಂತಹ ನಾಮಫಲಕಗಳಿಗೆ ಮಸಿ ಬಳಿಯುವ ಕಾರ್ಯಕ್ರಮವನ್ನು ಮತ್ತು ಅವುಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಹಮ್ಮಿಕೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗೋ ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್, ನಗರಾಧ್ಯಕ್ಷ ಮೊಹಮ್ಮದ್ ಜಾಕೀರ್, ಉದಯ್ ಶಂಕರ್, ಹುಚ್ಚವನಹಳ್ಳಿ ರಮೇಶ್, ರಾಜಣ್ಣ ಗೌಡ್ರು, ಗಿರೀಶ್, ಸುಹೇಲ್, ರಾಮತಿ, ಮುಬಾರಕ್, ರಂಗಸ್ವಾಮಿ, ಅನ್ಸರ್, ರಫೀಕ್, ಆಫ್ರಿದ್ ಮುಂತಾದ ಕರವೇ ಕಾರ್ಯಕರ್ತರು ಹಾಜರಿದ್ದರು.