ಮಠ-ಮಾನ್ಯಗಳು ಬದುಕು ರೂಪಿಸುವ ಶ್ರದ್ಧಾ ಕೇಂದ್ರಗಳು: ಶ್ರೀಶೈಲ ಶ್ರೀ

| Published : Dec 28 2024, 01:00 AM IST

ಮಠ-ಮಾನ್ಯಗಳು ಬದುಕು ರೂಪಿಸುವ ಶ್ರದ್ಧಾ ಕೇಂದ್ರಗಳು: ಶ್ರೀಶೈಲ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ತೇರು ಎಳೆಯುವ, ಜಾತ್ರೆ ಆಚರಿಸುವ ಉದ್ದೇಶ ಸರ್ವರಲ್ಲೂ ಸಹಬಾಳ್ವೆ, ಸಾಮರಸ್ಯ ಬೆಳೆಸುವುದೇ ಆಗಿದೆ. ಸರ್ವರೂ ದಾನಕ್ಕೆ ಆದ್ಯತೆ ನೀಡಬೇಕು

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದೇಗುಲಗಳು, ಮಠ-ಮಾನ್ಯಗಳು ಉತ್ತಮ ಸಂಸ್ಕಾರ ಕಲಿಸುವ ಮೂಲಕ ಸುಂದರ ಬದುಕು ರೂಪಿಸುವ ಶ್ರದ್ಧಾ ಕೇಂದ್ರಗಳಾಗಿವೆ. ಧರ್ಮ, ದೇವರು ಮತ್ತು ಪ್ರಕೃತಿಗೆ ನೀವು ನೀಡಿದ ದಾನ ಸಾವಿರಪಟ್ಟು ನಿಮಗೇ ಮರಳುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಗುರುವಾರ ರಾತ್ರಿ ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ನಡೆದ ಹರಕೆಯ ರಥವನ್ನು ಲೋಕಾರ್ಪಣೆಗೊಳಿಸಿದ ಅವರು, ತೇರು ಎಳೆಯುವ ಪ್ರಾಚೀನ ಪರಂಪರೆ ಹಿಂದೆ ಗಹನ ಸಂಗತಿ ಮಿಳಿತವಾಗಿದೆ. ಪುರಾಣಗಳಲ್ಲಿನ ಹೇಳಿಕೆಯಂತೆ ದೇವರು ಎಲ್ಲರಿಗೂ ಸಮಾನ. ಹಿಂದೆ ಕೆಲ ಸಮುದಾಯಗಳಿಗೆ ದೇಗುಲ ಪ್ರವೇಶವಿರಲಿಲ್ಲ ಆದರೆ ದೇವರೆ ಹೊರಬಂದು ಭಕ್ತರಿಗೆ ಸಮಾನ ದರ್ಶನ ಭಾಗ್ಯ ನೀಡುವ ಉದ್ದೇಶದಿಂದ ತೇರು ಎಳೆಯಲಾಗುತ್ತಿತ್ತು. ತೇರು ಎಳೆಯುವ, ಜಾತ್ರೆ ಆಚರಿಸುವ ಉದ್ದೇಶ ಸರ್ವರಲ್ಲೂ ಸಹಬಾಳ್ವೆ, ಸಾಮರಸ್ಯ ಬೆಳೆಸುವುದೇ ಆಗಿದೆ. ಸರ್ವರೂ ದಾನಕ್ಕೆ ಆದ್ಯತೆ ನೀಡಬೇಕು ಎಂದರು.ರಥದಾನಿಗಳಾದ ಮಲ್ಲೇಶಪ್ಪ ಕುಚನೂರ ಮತ್ತು ದಾಸೋಹ ದಾನಿ ಸೋಮಶೇಖರ ಕೊಟ್ರಶೆಟ್ಟಿ ರವರನ್ನು ಸನ್ಮಾನಿಸಿ ಅವರು ಎಲ್ಲರಿಗೂ ಮಾದರಿಯಾಗಲಿ. ಸದ್ಯ ಇರುವ ರಥ ಕೆಲವೇ ದಿನಗಳಲ್ಲಿ ರಜತ ರಥವಾಗಲೆಂದು ಹಾರೈಸಿದರು.

ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯರು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿ, ರಬಕವಿ ನಗರದ ಧಾರ್ಮಿಕ ಆಚರಣೆಗಳ ಶ್ರದ್ಧಾ ಕೇಂದ್ರವಾಗಿದೆ. ಕಳೆದೆರಡು ವರ್ಷಗಳಿಂದ ಅವ್ಯಾಹತವಾಗಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಡಿ.೨೯ರಿಂದ ಜ.೧೪ರವರೆಗೆ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಗುರುಸಿದ್ದೇಶ್ವರ ಶ್ರೀಗಳ ದ್ವಾದಶ ಪೀಠಾರೋಹಣ ನಿಮಿತ್ತ ಗುರುಭವನ, ಕಳಸಾರೋಹಣ, ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಗೆ ದಾನ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಸಕ ಸಿದ್ದು ಸವದಿ, ಧರೆಪ್ಪ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ನಾಶಿ, ಸಂಜಯ ಉಮದಿ, ಶಂಕರ ಗಣಮುಖಿ, ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ಮಹಾದೇವ ದುಪದಾಳ, ನಾರಾಯಣ ಬೋರಗಿನಾಯಕ, ಉದಯ ಜಿಗಜಿನ್ನಿ ಸೇರಿದಂತೆ ಪ್ರಮುಖರಿದ್ದರು.