ಸಾರಾಂಶ
ಕೋವಿಡ್ ಮಹಾಮಾರಿಯಿಂದ ಸ್ಥಗಿತಗೊಂಡಿದ್ದ ಧಾರವಾಡ ಜಿಲ್ಲಾ ಮಿನಿ ಒಲಿಂಪಿಕ್ಸ್ ಕೂಟಕ್ಕೆ ಮರುಚಾಲನೆ ನೀಡಲು ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ ನಿರ್ಧರಿಸಿದ್ದು ಫೆ. 16ರಂದು ಚಾಲನೆ ನೀಡಲಾಗುತ್ತಿದೆ.
ಧಾರವಾಡ:
ಕೊರೋನಾ ಮಹಾಮಾರಿಯ ಕಾರಣ ನಿಂತುಹೋಗಿದ್ದ `ಧಾರವಾಡ ಜಿಲ್ಲಾ ಮಿನಿ ಒಲಿಂಪಿಕ್ಸ್'''''''' ಕೂಟಕ್ಕೆ ಮರುಚಾಲನೆ ನೀಡಲು ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ(ಡಿಡಿಒಎ) ನಿರ್ಧರಿಸಿದೆ.ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಶಿವು ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದ್ದು, ಅದರನ್ವಯ ಫೆ. 16ರಂದು ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಮತ್ತೆ ಈ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಯಿತು.
12ರಿಂದ 16 ವರ್ಷದವರೊಳಗಿನ ಬಾಲಕ-ಬಾಲಕಿಯರಿಗಾಗಿ 199 ಮೀಟರ್ ಹಾಗೂ 600 ಮೀಟರ್ ಓಟ, ಉದ್ದ ಜಿಗಿತ, ಉಕ್ಕಿನ ಗುಂಡೆಸೆತ (4 ಕೆಜಿ) ಮತ್ತು 400 ಮೀಟರ್ ರೀಲೆ ಸ್ಪರ್ಧೆಗಳು ನಡೆಯಲಿದ್ದರೆ, 14ರಿಂದ 17 ವರ್ಷದ ವರೊಳಗಿನ ಬಾಲಕ-ಬಾಲಕಿಯರಿಗಾಗಿ 100 ಮೀಟರ್ ಹಾಗೂ 1,500 ಮೀಟರ್ ಓಟ, ಉದ್ದ ಜಿಗಿತ, ಉಕ್ಕಿನ ಗುಂಡೆಸೆತ (5 ಕೆಜಿ) ಮತ್ತು 400 ಮೀಟರ್ ರೀಲೆ ಸ್ಪರ್ಧೆಗಳು ನಡೆಯಲಿವೆ. ಫೆ. 10 ಪ್ರವೇಶ ಪತ್ರ ಸಲ್ಲಿಸುವ ಕೊನೆಯ ದಿನಾಂಕವಾಗಿರಲಿದೆ.ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಪಿ.ಎಚ್. ನೀರಲಕೇರಿ, ಉಪಾಧ್ಯಕ್ಷ ಜಿ.ಎಸ್. ಜಾಧವ, ಕಾರ್ಯದರ್ಶಿ ಬಸವರಾಜ ತಾಳಿಕೋಟಿ, ಖಜಾಂಚಿ ಕೆ.ಎಸ್. ಭೀಮಣ್ಣವರ, ರಾಮಚಂದ್ರ ಪಡತಾರೆ, ಡಿ.ಬಿ. ಗೋವಿಂದಪ್ಪ, ಶಿವಪ್ರಕಾಶ ಬೊಂಗಾಳೆ, ಆನಂದ ಯಲಿಗಾರ, ವಿರೂಪಾಕ್ಷಿ ಕುರ್ತಕೋಟಿ, ಟಿ.ಎಸ್. ಪಾಟೀಲ, ರೇಖಾ ಜೋಶಿ ಮೊದಲಾದವರು ಸಭೆಯಲ್ಲಿದ್ದರು.