ಸರ್ಕಾರಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಯಂತ್ರ ವಿತರಣೆ

| Published : Jul 12 2024, 01:33 AM IST

ಸರ್ಕಾರಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಯಂತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಪದವಿ ಪೂರ್ವ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯಂತ್ರವನ್ನು ವಿತರಣೆ ಮಾಡುವಂತೆ ಶಾಲೆ ಹಿರಿಯ ವಿದ್ಯಾರ್ಥಿಯೂ ಆದ ಟ್ರಸ್ಟ್ ಅಧ್ಯಕ್ಷ ಕೆ.ಜೆ.ರಾಮಚಂದ್ರ ಅವರ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಜನ್ಮ ದಿನದ ಅಂಗವಾಗಿ ಶಾಲೆಗೆ ಉಚಿತವಾಗಿ 20 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಅಕ್ವಗಾರ್ಡ್ ಯಂತ್ರ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಅಕ್ಷರಧಾಮ ಸೇವಾ ಟ್ರಸ್ಟ್ ಅಧ್ಯಕ್ಷ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜೆ.ರಾಮಚಂದ್ರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಗೆ ಉಚಿತ ಶುದ್ಧ ಕುಡಿಯುವ ನೀರು ಪೂರೈಕೆ ಯಂತ್ರ ವಿತರಿಸಿದರು.

ಮುಖ್ಯಶಿಕ್ಷಕಿ ಕೆ.ವಿದ್ಯಾ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯಂತ್ರವನ್ನು ವಿತರಣೆ ಮಾಡುವಂತೆ ಶಾಲೆ ಹಿರಿಯ ವಿದ್ಯಾರ್ಥಿಯೂ ಆದ ಟ್ರಸ್ಟ್ ಅಧ್ಯಕ್ಷ ಕೆ.ಜೆ.ರಾಮಚಂದ್ರ ಅವರ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಜನ್ಮ ದಿನದ ಅಂಗವಾಗಿ ಶಾಲೆಗೆ ಉಚಿತವಾಗಿ 20 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಅಕ್ವಗಾರ್ಡ್ ಯಂತ್ರ ನೀಡಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾನಿಗಳು ಸಹಕಾರ ನೀಡಿದರೆ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

ಇದೇ ವೇಳೆ ಮಕ್ಕಳಿಗೆ ಯೋಗಾಭ್ಯಾಸ ತರಬೇತಿ ನೀಡಲಾಯಿತು. ಈ ವೇಳೆ ಪಿಡಿಒ ಕುಳ್ಳೇಗೌಡ, ಮೈಸೂರಿನ ಪತಾಂಜಲಿ ಯೋಗ ಸಮಿತಿ, ಯುವ ಭಾರತ್ ಹಾಗೂ ಆದಿತ್ಯ ಯೋಗಧಾಮದ ವೀರೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಮಾಲ, ಯತೀಂದ್ರಕುಮಾರ್, ಶಿಕ್ಷಕರ ವೃಂದವರು ಸೇರಿದಂತೆ ಹಲವರು ಇದ್ದರು.ಮಗು ನಾಪತ್ತೆ, ವಿಸಿ ನಾಲೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ

ಮಂಡ್ಯ: ತಾಲೂಕಿನ ಹೊನಗಾನಹಳ್ಳಿ ಮಠ ಗ್ರಾಮದ ಮನೆ ಬಳಿ ಆಟವಾಡುವ ಮಗು ನಾಪತ್ತೆಯಾಗಿದ್ದು, ವಿಸಿ ನಾಲೆಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ರಾಜು ಹಾಗೂ ಕಸ್ತೂರಿ ದಂಪತಿ ಪುತ್ರ ಸಬಿನ್ (4) ವಿಸಿ ನಾಲೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಂಗನವಾಡಿಯಿಂದ ಬಂದು ಸಬಿನ್ ಮನೆ ಬಳಿ ಆಟವಾಡುತ್ತಿದ್ದನು. ಆದರೆ, ಮಧ್ಯಾಹ್ನ 2.30ರಿಂದ ನಾಪತ್ತೆಯಾಗಿದ್ದು, ಮನೆ ಪಕ್ಕದಲ್ಲೇ ಇರುವ ವಿಸಿ ನಾಲೆ ಬಳಿ ಮಗು ಚಪ್ಪಲಿ ಪತ್ತೆಯಾಗಿದೆ. ಸ್ಥಳೀಯರು, ಕುಟುಂಬಸ್ಥರಿಂದ ಮಗುವಿಗಾಗಿ ಹುಡುಕಾಟ ನಡೆಸಿದ್ದರೂ ಮಗು ಪತ್ತೆಯಾಗಿಲ್ಲ. ಮಗು ಪತ್ತೆಗಾಗಿ ನೀರು ನಿಲ್ಲಿಸಲು ನೀರಾವರಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಆರ್‌ಎಸ್ ಜಲಾಶಯದಿಂದ ನಿನ್ನೆಯಷ್ಟೇ ವಿಸಿ ನಾಲೆಗೆ ನೀರು ಹರಿಸಲಾಗಿತ್ತು. ಇಂದು ನಾಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಮಗು ವಿಸಿ ನಾಲೆಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಚಿರತೆ ದಾಳಿ ಮೂರು ಹಸಗಳು ಸಾವುಮಳವಳ್ಳಿ: ಚಿರತೆ ದಾಳಿಯಿಂದ ಮೂರು ಹಸುಗಳು ಸಾವಪ್ಪಿರುವ ಘಟನೆ ತಾಲೂಕಿನ ಬೀಚನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಭಾಗ್ಯಮ್ಮರಿಗೆ ಸೇರಿದ ಹಸುಗಳನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಹಸುಗಳ ಮೇಲೆ ಚಿರತೆ ದಾಳಿ ಮಾಡಿದ್ದು ಮೂರು ಹಸುಗಳು ಸಾವನ್ನಪ್ಪಿವೆ. ಹಸುಗಳ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು, ಹಸುಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಹಿಡಿಯದ ಕಾರಣ ಹಸುಗಳು ಸಾವನ್ನಪ್ಪಿವೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು. ಹಸು ಕಳೆದುಕೊಂಡ ಕುಟುಂಬಸ್ಥರಿಗೆ ಪರಿಹಾರ ವಿತರಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.