ಸಾರಾಂಶ
ತಾಲೂಕು ಪತ್ರಕರ್ತರ ಸಂಘ ಸದಸ್ಯರು ಯಾವುದೇ ಸಂಘರ್ಷಗಳಿಲ್ಲದೇ ಸೌಹಾರ್ದದಿಂದ ತಮ್ಮ ಮತಗಳನ್ನು ಚಲಾವಣೆ ಮಾಡಿ, ಈ ತಾಲೂಕಿನಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿಕಳಿಸಿದ್ದಾರೆ. ಇದು ನಿಮ್ಮಲ್ಲಿರುವ ಒಗ್ಗಟ್ಟು ತೋರುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕು ಪತ್ರಕರ್ತರ ಸಂಘ ಸದಸ್ಯರು ಯಾವುದೇ ಸಂಘರ್ಷಗಳಿಲ್ಲದೇ ಸೌಹಾರ್ದದಿಂದ ತಮ್ಮ ಮತಗಳನ್ನು ಚಲಾವಣೆ ಮಾಡಿ, ಈ ತಾಲೂಕಿನಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿಕಳಿಸಿದ್ದಾರೆ. ಇದು ನಿಮ್ಮಲ್ಲಿರುವ ಒಗ್ಗಟ್ಟು ತೋರುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಮಂಜುನಾಥ್ ಹೇಳಿದರು.ಶನಿವಾರ ಸಂಜೆ ಪಟ್ಟಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್, ಕಾರ್ಯದರ್ಶಿ ಬದರೀನಾಥ್, ಖಜಾಂಚಿ ವಿರೇಶ್, ತಾಲೂಕಿನಿಂದ ಆಯ್ಕೆಯಾದ ಕಿರಣ್ ಕುಮಾರ್, ರಘುಪ್ರಸಾದ್ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವಿಸಲಾಯಿತು. ಗೌರವ ಸಮರ್ಪಣೆ ಸ್ವೀಕರಿಸಿದ ಬಳಿಕ ಮಂಜುನಾಥ್ ಮಾತನಾಡಿದರು.
ವೃತ್ತಿಪರವಾಗಿ ಕೆಲಸ ಮಾಡುವಂತಹ ಪತ್ರಕರ್ತರಿಗೆ ಯಾವುದೇ ಸಾಮಾಜಿಕ ಸಮಸ್ಯೆಗಳು ಎದುರಾದರೂ ಅದಕ್ಕೆ ಜಿಲ್ಲಾ ಸಂಘ ಬೆಂಬಲವಾಗಿರಲಿದೆ. ಮುಂದೆ ಬರುವಂತಹ ತಾಲೂಕು ಸಂಘದ ಚುನಾವಣೆಗೆ ಸನ್ನದ್ಧರಾಗಿರಬೇಕಿದೆ. ಕಾರ್ಯದರ್ಶಿ ಬದರೀನಾಥ್ ಮಾತನಾಡಿ, ಸಂಘದ ಬಲವರ್ಧನೆಗಾಗಿ ತಾಲೂಕು ಸಂಘದಲ್ಲಿ ಸಂಗ್ರಹವಾಗುವಂತಹ ಹಣವನ್ನು ಬ್ಯಾಂಕ್ ಮುಖಾಂತರವಾಗಿ ವ್ಯವಹರಿಸಿಕೊಂಡು ಸಂಘದ ಬಲವರ್ಧನೆ ಮಾಡಬೇಕೆಂದು ಹೇಳಿದರು.ಸಮಾರಂಭದಲ್ಲಿ ಪತ್ರಕರ್ತರಾದ ಬಾ.ರಾ.ಮಹೇಶ್, ಸತೀಶ್ ಪವಾರ್, ಟಿ.ಎನ್.ಜಗದೀಶ್, ಅಣ್ಣೋಜಿರಾವ್, ಸಂಘದ ಬೆಳವಣಿಗೆ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಹರೋಸಾಗರದ ಲಿಂಗರಾಜ್ ವಹಿಸಿದ್ದರು.
ಸಭೆಯಲ್ಲಿ ಸಂಘದ ಸದಸ್ಯರಾದ ನಟರಾಜ್, ಪ್ರಸನ್ನ, ಸಂತೋಷ್, ಪುನೀತ್, ಕಾಶೀಸ್ವಾಮಿ, ನಿತೀಶ್, ಅರುಣ್, ದೇವರಾಜ್ ಇತರರು ಹಾಜರಿದ್ದರು.- - -
-16ಕೆಸಿಎನ್‌ಜಿ1.ಜೆಪಿಜಿ:ಚನ್ನಗಿರಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
;Resize=(128,128))
;Resize=(128,128))