ರೈತರಿಗೆ ಕೊಟ್ಟ ಮಾತಂತೆ ನಡೆದುಕೊಳ್ಳುತ್ತೇನೆ‌

| Published : Nov 17 2025, 12:30 AM IST

ರೈತರಿಗೆ ಕೊಟ್ಟ ಮಾತಂತೆ ನಡೆದುಕೊಳ್ಳುತ್ತೇನೆ‌
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ವಿಧಾನಸಭಾ ಕ್ಷೇತ್ರಕ್ಕೆ ಈ ಭಾಗದಿಂದ ಅಡಗೂರು ಮತ್ತು ಹಗರೆ ಚೀಕನಹಳ್ಳಿ ಅರೇಹಳ್ಳಿ ಹಾಗೂ ಗೆಂಡೆಹಳ್ಳಿ ಮತ್ತು ಬೇರೆ ಭಾಗಗಳಿಗೆ ತಾಲೂಕಿನಿಂದ ಬರುವಂತಹ ಜನತೆಗೆ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಡು ರಸ್ತೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ಅಡಗೂರು ಗ್ರಾಮಕ್ಕೆ ಮುಖ್ಯರಸ್ತೆ ಅಗಲೀಕರಣ ಮಾಡಲು ಹಾಗೂ ರಸ್ತೆ ಅಭಿವೃದ್ಧಿ ಚೆಕ್ ಡ್ಯಾಂ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇತರೆ ಕೆಲಸಗಳಿಗೆ ಅನುದಾನ ಇಟ್ಟು ಒಟ್ಟು ೧೦ ಕೋಟಿಗಳಲ್ಲಿ ಈಗಾಗಲೇ ಅಭಿವೃದ್ಧಿ ಪಥದಲ್ಲಿ ಸಾಗಲು ಹಣ ಮೀಸಲಿಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಅಡುಗೂರು ಗ್ರಾಮದ ಮುಖ್ಯರಸ್ತೆ ಅಗಲೀಕರಣ ಹಾಗೂ ವೃತ್ತ ನಿರ್ಮಾಣಕ್ಕೆ ಶಾಸಕ ಎಚ್ ಕೆ ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಅಡಗೂರು ಗ್ರಾಮದಿಂದ ನೀರಳ್ಳ ರಸ್ತೆ ಡಾಂಬರೀಕರಣ ಹಾಗೂ ರಾಷ್ಟ್ರೀಯ ರಸ್ತೆಗೆ ಕಾಯಕಲ್ಪ ನೀಡಲು ಸುಮಾರು ೬ ಕೋಟಿ ರು. ವೆಚ್ಚದಲ್ಲಿ ಅಡಗೂರು ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರಕ್ಕೆ ಈ ಭಾಗದಿಂದ ಅಡಗೂರು ಮತ್ತು ಹಗರೆ ಚೀಕನಹಳ್ಳಿ ಅರೇಹಳ್ಳಿ ಹಾಗೂ ಗೆಂಡೆಹಳ್ಳಿ ಮತ್ತು ಬೇರೆ ಭಾಗಗಳಿಗೆ ತಾಲೂಕಿನಿಂದ ಬರುವಂತಹ ಜನತೆಗೆ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಡು ರಸ್ತೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ಅಡಗೂರು ಗ್ರಾಮಕ್ಕೆ ಮುಖ್ಯರಸ್ತೆ ಅಗಲೀಕರಣ ಮಾಡಲು ಹಾಗೂ ರಸ್ತೆ ಅಭಿವೃದ್ಧಿ ಚೆಕ್ ಡ್ಯಾಂ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇತರೆ ಕೆಲಸಗಳಿಗೆ ಅನುದಾನ ಇಟ್ಟು ಒಟ್ಟು ೧೦ ಕೋಟಿಗಳಲ್ಲಿ ಈಗಾಗಲೇ ಅಭಿವೃದ್ಧಿ ಪಥದಲ್ಲಿ ಸಾಗಲು ಹಣ ಮೀಸಲಿಡಲಾಗಿದೆ ಎಂದರು. ಸುಮಾರು ೧೦ ಮೀಟರ್‌ ರಸ್ತೆ ಅಗಲೀಕರಣವಾಗುವುದರಿಂದ ಮುಂದಿನ ಭವಿಷ್ಯದ ಉದ್ದೇಶದಿಂದ ಎಲ್ಲರ ಸಹಕಾರ ಬೇಕು. ಇನ್ನು ಅಡಗೂರು ಕೆರೆ ಅಭಿವೃದ್ಧಿ ಗಾಗಿ ಸುಮಾರು ೧.೫೦ ಕೋಟಿ ರು. ನೀರಾವರಿ ಇಲಾಖೆಯಿಂದ ಹಣ ತಂದು ಅಭಿವೃದ್ಧಿ ಪಡಿಸಿದ್ದೇನೆ‌. ಇದರ ಜೊತೆಯಲ್ಲಿ ಹಳೆಬೀಡು ಮುಖ್ಯರಸ್ತೆ ಅಗಲೀಕರಣವಾಗುತ್ತಿದ್ದು ಹೊಯ್ಸಳ ವೃತ್ತದಿಂದ ಈ ಭಾಗದವರೆಗೂ ೫ ಮೀ. ರಸ್ತೆ ಅಭಿವೃದ್ಧಿ ಆಗಲಿದೆ. ೬ ಕೋಟಿ ರು. ವೆಚ್ಚದಲ್ಲಿ ನಮ್ಮ ತಾಲೂಕಿನ ಐದಳ್ಳದಿಂದ ಅಡಗೂರು ವೃತ್ತ ಸೇರಿದಂತೆ ಎರಡು ಬದಿಯಲ್ಲಿ ಬಾಕ್ಸ್ ಚರಂಡಿ ಹಾಗೂ ವಿಶೇಷವಾಗಿ ಹೈಟೆಕ್ ಮಾದರಿಯಲ್ಲಿ ವೃತ್ತವನ್ನು ಅಭಿವೃದ್ಧಿ ಪಡಿಸಿ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.ಈಗಾಗಲೇ ಗ್ರಾಮಸ್ಥರು ‌ನೀರಾವರಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆಯಿಂದ ಅಡಗೂರು ಕೆರೆ ಭರ್ತಿ ಮಾಡಲು ಸಣ್ಣಪುಟ್ಟ ಲೋಪದೋಷಗಳಿದ್ಸು ಕೂಡಲೇ ಅದನ್ನು ನಾನೇ ನಿಂತು ಬಗೆಹರಿಸಿ ರೈತರಿಗೆ ಕೊಟ್ಟ ಮಾತಂತೆ ನಡೆದುಕೊಳ್ಳುತ್ತೇನೆ‌. ಈ ಭಾಗದ ಸಮಸ್ತ ಜನತೆ ಅತಿ ಹೆಚ್ಚಿನ ರೀತಿಯಲ್ಲಿ ಆರ್ಶಿರ್ವಾದ ಮಾಡಿದ್ದು ನಿಮ್ಮ ಋಣವನ್ನು ನಾನು ತೀರಿಸುತ್ತೇನೆ‌ ಎಂದು ಹೇಳಿದರು. ನಮ್ಮ ಜೈನ ಪರಂಪರೆ ಹಾಗೂ ಜೈನರ ಗುತ್ತಿ ಇರುವುದರಿಂದ ಅಲ್ಲಿ ಅಭಿವೃದ್ಧಿಗಾಗಿ ಅಲ್ಲಿಯ ರಸ್ತೆಗೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲು ಮುಂದಾಗಲಿದ್ದು, ನನ್ನ ತಾಲೂಕಿಗೆ ಬರುವ ಗಡಿ ಭಾಗದ ಲಿಂಕ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.ತಾಲೂಕು ಪಂಚಾಯತಿ ಮಾಜಿ ಸದಸ್ಯ ವಿಜಯ್ ಕುಮಾರ್ ಮಾತನಾಡಿ ಶಾಸಕರು ಸರ್ಕಾರದಿಂದ ಅನುದಾನ ತಂದು ಗ್ರಾಮದ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ. ಇದರ ಜೊತೆಯಲ್ಲಿ ಎತ್ತಿ‌ನಹೊಳೆಯಿಂದ ಹಳೆಬೀಡು ಕೆರೆಯನ್ನು ಭರ್ತಿ ಮಾಡುತ್ತಿದ್ದು ಅದರಂತೆ ನಮ್ಮ ಅಡಗೂರು ಸಮೀಪವಿರುವ ಎತ್ತಿನಹೊಳೆಯಲ್ಲಿ ನಿಂತಿರುವ ನೀರನ್ಬು ಪೈಪ್‌ಲೈನ್ ಮೂಲಕ ನಮ್ಮ ಕೆರೆಯನ್ನು ಭರ್ತಿ ಮಾಡಲು ಅವಕಾಶ ಇದ್ದು ಅಲ್ಲಿ ಅರಣ್ಯ ಇಲಾಖೆಯವರು ಗೊಂದಲ ಮಾಡುತ್ತಿರುವುದರಿಂದ ಈ ಕೆರೆಗೆ ನೀರು ಹರಿಯುತ್ತಿಲ್ಲ.ಆ ಗೊಂದಲ ನಿವಾರಿಸಿ ಕೊಟ್ಟರೆ ಈ ಭಾಗದಲ್ಲಿ ತುಂಬಾ ಅನುಕೂಲವಾಗುತ್ತದೆ ಎಂದರು.ರೈತ ಮುಖಂಡ ವಿಜಿಕುಮಾರ್ ಮಾತನಾಡಿ ನಾನು ಶಾಸಕ ಎಂದು ಅಹಂ ತೋರದೆ ಯಾವುದೇ ಪಕ್ಷದ ಕಾರ್ಯಕರ್ತರು ಬಂದರು ಕೆಲಸ ಮಾಡಿಕೊಡುವ ಗುಣ ಶಾಸಕರಾಗಿದ್ದು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಸಣ್ಣಪುಟ್ಟ ಗೊಂದಲವಿದ್ದು ಶಾಸಕರು ಅದನ್ನು ನಿವಾರಿಸಿ ರಸ್ತೆ ಎಲ್ಲರಿಗೂ ಸಹ ಅತಿ ಮುಖ್ಯ ವಾಗಿರುವುದರಿಂದ ಇಲ್ಲಿ ಗುತ್ತಿಗೆದಾರರು ಶಾಶ್ವತವಾಗಿ ಕೆಲಸ ಮಾಡುವಂತೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು‌.ಈ ವೇಳೆ ಬಿಜೆಪಿ ತಾಲೂಕು ಮಂಡಳ ಮಾಜಿ ಅದ್ಯಕ್ಷ ಹಾಗು ಗ್ರಾಮದ ಮುಖಂಡ ಅಡಗೂರು ಆನಂದ್, ಗ್ರಾಪಂ ಸದಸ್ಯ ಶಿವೇಗೌಡ, ರಂಗಯ್ಯ, ವಿರುಪಾಕ್ಷ, ಕೇಶವಮೂರ್ತಿ, ಗುತ್ತಿಗೆದಾರ ಪ್ರಭಾಕರ್, ಪಿಡಿಒ ರಘುನಾಥ್ ಇದ್ದರು.