ಪಕ್ಷದ ಕಚೇರಿಗಳು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಇದೀಗ ಇಂಜಿಲೆಗೆರೆಯಲ್ಲಿ ಪ್ರಾರಂಭಿಸಿದ ನೂತನ ಬಿಜೆಪಿ ಕಚೇರಿಯಿಂದ ಗ್ರಾಮವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಕೊಡಗು ಮೈಸೂರು ಕ್ಷೇತ್ರ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಪಕ್ಷದ ಕಚೇರಿಗಳು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಇದೀಗ ಇಂಜಿಲೆಗೆರೆಯಲ್ಲಿ ಪ್ರಾರಂಭಿಸಿದ ನೂತನ ಬಿಜೆಪಿ ಕಚೇರಿಯಿಂದ ಗ್ರಾಮವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಕೊಡಗು ಮೈಸೂರು ಕ್ಷೇತ್ರ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟರು.ಅಮ್ಮತ್ತಿ ಗ್ರಾಮ ಪಂಚಾಯಿತಿಯ ಪುಲಿಯೇರಿ ಗ್ರಾಮದ ಇಂಜಿಲೆಗೆರೆಯಲ್ಲಿ ಭಾರತೀಯ ಜನತಾ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಅಭಿವೃದ್ಧಿಗೆ ಅನುದಾನ ಒದಗಿಸುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮಸ್ಥರ ಅಹವಾಲುಗಳನ್ನು ಸಂಸದರು ಸ್ವೀಕರಿಸಿದರು.ಸಮಾರಂಭದಲ್ಲಿ ಮಾಜಿ ಶಾಸಕ ಕೆ ಜಿ ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ತಾಲೂಕು ಅಧ್ಯಕ್ಷ ಸುವೀನ್ ಗಣಪತಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಜು ಸುಬ್ರಮಣಿ, ವಿರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಕಟ್ಟಡದ ಮಾಲೀಕರು ಹಾಗೂ ಬಿಜೆಪಿ ನಾಯಕಿ ಪದ್ಮಿನಿ ಪೊನ್ನಪ್ಪ ಮಾಂಗೇರ ಪೊನ್ನಪ್ಪ ಅಮ್ಮತ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್, ಎನ್ ಎಸ್ ಅಮ್ಮತ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ನಿತೀಶ್ ಎಂ ಹೆಚ್ ದಿತಿ ನಾಚಪ್ಪ ಸುಗುಣ ಶಾಂತಾ- ಪಿ ಎಸ್ ಅಶ್ವಿನಿ ಕಾರ್ ಮಾಡು ಶಕ್ತಿ ಕೇಂದ್ರದ ಅಧ್ಯಕ್ಷ ನಿರು ನಾಣಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿಯ ಪ್ರಸಾದ್ ಜಂಗಪ್ಪ ಸೇರಿದಂತೆ ಊರಿನ ಹಿರಿಯರು ಹಾಗೂ ಕಾರ್ಯಕರ್ತರು ಇದ್ದರು.