ಕೇಂದ್ರ ಕಾರಾಗೃಹದ ಕೈದಿಗಳ ದಂತ ತಪಾಸಣಾ ಶಿಬಿರ ಉದ್ಘಾಟನೆ

| Published : Oct 22 2024, 12:01 AM IST

ಕೇಂದ್ರ ಕಾರಾಗೃಹದ ಕೈದಿಗಳ ದಂತ ತಪಾಸಣಾ ಶಿಬಿರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಯಿ ಆರೋಗ್ಯವೇ ಭಾಗ್ಯವಾಗಿದೆ. ಬಾಯಿ ಆರೋಗ್ಯ ಚೆನ್ನಾಗಿದ್ದರೆ ಇಡೀ ದೇಹದ ಆರೋಗ್ಯ ಚೆನ್ನಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೈಸೂರು ಕೇಂದ್ರ ಕಾರಾಗೃಹದ ಕೈದಿಗಳಿಗೆ ಆಯೋಜಿಸಿರುವ 5 ದಿನಗಳ ದಂತ ತಪಾಸಣಾ ಶಿಬಿರವನ್ನು ಬಾಯಿ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ.ಎಸ್. ಅನಿತಾ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಪ್ರತಿಯೊಬ್ಬರ ಬಾಯಿ ಆರೋಗ್ಯ ಮುಖ್ಯವಾಗಿದ್ದು, ಬಾಯಿ ಆರೋಗ್ಯದ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಾಯಿ ಆರೋಗ್ಯವೇ ಭಾಗ್ಯವಾಗಿದೆ. ಬಾಯಿ ಆರೋಗ್ಯ ಚೆನ್ನಾಗಿದ್ದರೆ ಇಡೀ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೋಬ್ಬರು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ದೇಹ ನಾನಾ ರೋಗಗಳಿಗೆ ಈಡಾಗುತ್ತದೆ ಎಂದರು.ಪ್ರತಿ ದಿನ ಎರಡು ಬಾರಿ ಬ್ರಶ್ ಮಾಡುವುದರೊಂದಿಗೆ ಹಲ್ಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹಲ್ಲಿನ ಸಮಸ್ಯೆ ಕಂಡು ಬಂದರೆ ತಕ್ಷಣ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಈ ದಂತ ತಪಾಸಣಾ ಶಿಬಿರವು ಅ.25 ರವರೆಗೆ ನಡೆಯಲಿದ್ದು, ಕಾರಾಗೃಹದಲ್ಲಿನ 800 ಮಂದಿ ಕೈದಿಗಳಿಗೆ ದಂತ ತಪಾಸಣೆಯನ್ನು 10 ಮಂದಿ ದಂತ ವೈದ್ಯರು ನಡೆಸಲಿದ್ದಾರೆ. ಈ ವೇಳೆ ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಜಿಲ್ಲಾಸ್ಪತ್ರೆ ಮತ್ತು ಕೆ.ಆರ್. ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದರು.ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್, ದಂತ ವೈದ್ಯರಾದ ಡಾ. ಸಮೀವುಲ್ಲಾ ಷರೀಫ್, ಡಾ. ರಾಘವೇಂದ್ರ, ಡಾ. ಕಿರಣ್, ಡಾ. ಸಂತೋಷ್ ಹಾಗೂ ಜೈಲು ಅಧಿಕಾರಿಗಳು ಇದ್ದರು.