ಕಾಯಕಯೋಗಿ ಪ್ರಶಸ್ತಿಯನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್
ಕನ್ನಡಪ್ರಭ ವಾರ್ತೆ ಮೈಸೂರುನಗರದ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.2026ರ ಶರಣು ದಿನಚರಿಯನ್ನು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬಸವಭಾನು ಸಂಚಿಕೆಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕವಯತ್ರಿ ಮಂಗಳಾ ಮುದ್ದುಮಾದಪ್ಪ ಅವರ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿ ಕೃತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜ್ಞಾನಸಂಗಮ ಕೈಪಿಡಿಯನ್ನು ಮಂಗಳಾ ಮುದ್ದುಮಾದಪ್ಪ ಬಿಡುಗಡೆ ಮಾಡಿದರು.ಕಾಯಕಯೋಗಿ ಪ್ರಶಸ್ತಿಯನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಚನ ಭಂಡಾರಿ ಶಾಂತರಸ ಪ್ರಶಸ್ತಿಯನ್ನು, ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ, ಆದರ್ಶ ಶರಣ ದಂಪತಿ ಪ್ರಶಸ್ತಿಯನ್ನು ಶಾರದಾ ಜತ್ತಿ ಮತ್ತು ಅರವಿಂದ ಜತ್ತಿ, ವೀರ ಗಣಾಚಾರಿ ಮಡಿವಾಳ ಮಾಚಿದೇವ ಪ್ರಶಸ್ತಿಯನ್ನು ಬಾಗಲಕೋಟೆ ಜಿಲ್ಲೆ ನಿವೃತ್ತ ಸೈನಿಕ ಬಸವರಾಜ ಮಾಲಾಬಾದಿ ಅವರಿಗೆ ಪ್ರದಾನ ಮಾಡಲಾಯಿತು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರೂಪಾ ಕುಮಾರಸ್ವಾಮಿ ಸ್ವಾಗತಿಸಿದರು. ಅನಿತಾ ನಾಗರಾಜ್ ವಂದಿಸಿದರು. ಅನಿಲ್ ಕುಮಾರ್ ವಾಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ವಚನ, ಯು. ಶ್ರದ್ಧಾ ಕುತ್ನಿಕರ್ ವಚನ ನೃತ್ಯ ಪ್ರದರ್ಶಿಸಿದರು. ಚೂಡಾಮಣಿ, ಸರಸ್ವತಿ ರಾಮಣ್ಣ ವಚನ ಗಾಯನ ಪ್ರಸ್ತುತಪಡಿಸಿದರು. ನಂತರ ಶರಣು ದಿನದರ್ಶಿಕೆ, ವಚನಗ್ರಾಮ, ವೀಣಾ ನಂದೀಶ್ ಅವರ ಶಿವಶರಣರ ಪ್ರಶ್ನೋತ್ತರ ದೀವಿಗೆ ಕೃತಿ ಬಿಡುಗಡೆ, ವಿವಿಧ ಪ್ರಶಸ್ತಿಗಳ ಪ್ರದಾನ, ಸಂಸ್ಥೆಯ ದತ್ತಿ ದಾಸೋಹಿಗಳು, ಆಜೀವ ಸದಸ್ಯರು, ಪ್ರೋತ್ಸಾಹದಾಯಕರಿಗೆ ಅಭಿನಂದನಾ ಸಮಾರಂಭ ಜರುಗಿದವು.ಶಿಕ್ಷಕರ ಕಣ್ಮಣಿ ಪ್ರಶಸ್ತಿಯನ್ನು ಯೋಗಾಚಾರ್ಯ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಸಿ. ವಿರುದ್ರಾರಾಧ್ಯ, ವಚನ ಸೇವಾರತ್ನ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಕಲಾಕೂಟದ ಎಂ. ಚಂದ್ರಶೇಖರ್, ವಚನ ಕೋಗಿಲೆ ಪ್ರಶಸ್ತಿಯನ್ನು ಗಾಯಕಿ ಅನುರಾಗ್ ಗದ್ದಿ ಅವರಿಗೆ ಪ್ರದಾನ ಮಾಡಲಾಯಿತು.ಫೌಂಡೇಷನ್ ಗೌರವಾಧ್ಯಕ್ಷೆ ಮಂಗಳಾ ಮುದ್ದುಮಾದಪ್ಪ, ಜಿಲ್ಲಾ ಶರಣು ವಿಶ್ವ ವಚನ ಫೌಂಡೇಷನ್‌ನ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ನಿವೃತ್ತ ಶಾಖಾ ಅಧೀಕ್ಷಕ ಪಂಚಾಕ್ಷರಯ್ಯ, ಶ್ರೀ ರಾಜರಾಜೇಶ್ವರಿ ಅಕ್ಕನ ಬಳಗದ ವೀಣಾ ನಂದೀಶ್, ಎ.ಆರ್. ನಾಗೇಂದ್ರಸ್ವಾಮಿ, ಅಗಸನಪುರ ಪಾಲ್ಗೊಂಡಿದ್ದರು.--- ಬಾಕ್ಸ್---- ಚಿನ್ಮಯ ಜ್ಞಾನ ಶಿಕ್ಷಕ ಪ್ರಶಸ್ತಿ--ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಂ.ಎನ್. ಕುಮಾರಸ್ವಾಮಿ, ಬೆಂಗಳೂರು ಶೇಷಾದ್ರಿಪುರಂ ಸಂಜೆ ಕಾಲೇಜಿನ ಸಹ ಪ್ರಾಧ್ಯಾಪಕ ಜೆ.ವಿ. ಸಂತೋಷ್, ಜಮಖಂಡಿ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕ ರಾಘವೇಂದ್ರ ಕುಲಕರ್ಣಿ,ಹುಲ್ಯಾಳ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕಿ ವನಜಾಕ್ಷಿ ನಾರಾಯಣ ಕುಲಕರ್ಣಿ, ಸವದಿ ಚಿಪ್ಪಾಡಿ ತೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆನಂದ ಅಣ್ಣಾಜಿ ದೇಶಮುಖ, ಪಿರಿಯಾಪಟ್ಟಣ ತಾ. ಆವರ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರೇಣುಕಾಸ್ವಾಮಿ, ಗುಡ್ಡೇನಹಳ್ಳಿ ಸರ್ಕಾರಿ ಕಿರಿ. ಪ್ರಾಥಮಿಕ ಶಾಲೆ ಶಿಕ್ಷಕಿ ಕಲಾವತಿ, ನಗರದ ಗೋಕುಲಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕೆ.ಎನ್. ಅನ್ನಪೂರ್ಣ, ಕಡೂರು ಮಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿರೂಪಾಕ್ಷಪ್ಪ, ಮಲ್ಲಿದೇವಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಂ.ಆರ್. ಅನಿತಾ, ಹೊಳಲ್ಕೆರೆ ಎಸ್‌ಜೆಎಂ ಪ್ರೌಢಶಾಲೆ ಶಿಕ್ಷಕ ಎಸ್.ಎಸ್. ವಿರೂಪಾಕ್ಷಯ್ಯ, ಕುಶಾಲನಗರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಬಿ.ಬಿ. ಹೇಮಲತಾ, ಬೆಂಗಳೂರು ಅಂಚೆಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್. ರಾಜೇಶ್ವರಿ, ಎಚ್.ಡಿ. ಕೋಟೆ ತಾ. ಅಂತರಸಂತೆ ಓಂಶಿವ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಆರ್. ಶಬರಿ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.