ಕುದೂರು: ನಾಡಪ್ರಭು ಮಾಗಡಿ ಕೆಂಪೇಗೌಡರು ಆಳಿದ ದುರ್ಗಗಳಲ್ಲಿ ಒಂದಾದ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿರುವ ಬೈರವನದುರ್ಗದ್ದು ದುರಂತ ಕಥೆಯಾಗಿದೆ.

ಕುದೂರು: ನಾಡಪ್ರಭು ಮಾಗಡಿ ಕೆಂಪೇಗೌಡರು ಆಳಿದ ದುರ್ಗಗಳಲ್ಲಿ ಒಂದಾದ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿರುವ ಬೈರವನದುರ್ಗದ್ದು ದುರಂತ ಕಥೆಯಾಗಿದೆ.

ಕೆಂಪೇಗೌಡರ ಕಾಲದಲ್ಲಿದ್ದ ಕೋಟೆಗಳು ಉರುಳಿ ಬೀಳುತ್ತಿವೆ. ಬೆಟ್ಟದ ತಪ್ಪಲನ್ನು ಒತ್ತುವರಿ ಮಾಡಿಕೊಂಡು ಹೊಲ, ತೋಟ, ಎಸ್ಟೇಟ್‌ಗಳು ನಿರ್ಮಾಣವಾಗುತ್ತಿವೆ. ಮರಗಳ್ಳರಿಗೆ ಆದಾಯದ ದುರ್ಗವಾಗಿದೆ. ಜೊತೆಗೆ ಕುದೂರು ಗ್ರಾಪಂ ನಮ್ಮದೂ ಒಂದು ಕಲ್ಲಿರಲಿ ಎಂದು ಊರ ಕಸವನ್ನೆಲ್ಲಾ ಭೈರವನದುರ್ಗದ ಬುಡದಲ್ಲಿ ಸುರಿದು ಬೆಂಕಿ ಹಚ್ಚಿ ಸುತ್ತಲಿನ ವಾತಾವರಣವನ್ನೆಲ್ಲಾ ವಿಷಯಮವಾಗಿಸುತ್ತಿದೆ.

ಭೈರವನದುರ್ಗದ ಇತಿಹಾಸ:

ಮಾಗಡಿ ನಿರ್ಮಾತೃ ಇಮ್ಮಡಿ ಕೆಂಪೇಗೌಡರು ತಮ್ಮ ಆಳ್ವಿಕೆಯ ಕೊನೆಯ ದಿನಗಳನ್ನು ಕಳೆದಂತಹ ದುರ್ಗವಿದು ಎಂದು ಸಂಶೋಧನೆ ತಿಳಿಸಿದೆ. ಬಿ.ಎಲ್. ರೈಸ್ ಮೈಸೂರು ಗೆಜೆಟಿಯರ್‌ನಲ್ಲಿ ದಾಖಲಿಸಿರುವ ಪ್ರಕಾರ 1609ರಲ್ಲಿ ಮರಾಠರು ಭೈರವನದುರ್ಗದಲ್ಲಿ ಕೋಟೆ ನಿರ್ಮಿಸಿದರು. ಇದು ಸಮುದ್ರ ಮಟ್ಟದಿಂದ 1066 ಅಡಿ ಎತ್ತರದಲ್ಲಿದೆ. ಆಗ ಕುದೂರು ಎನ್ನುವ ಪಟ್ಟಣವೇ ಇರಲಿಲ್ಲ. ಹುಲಿಕಲ್ಲು ಗ್ರಾಮವನ್ನು ಆಳ್ವಿಕೆ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.

ಕೆಂಪೇಗೌಡರು ಆಳಿದ ಕೋಟೆಗಳನ್ನು ಸಾಂಪ್ರದಾಯಿಕವಾಗಿ ನೆಲದುರ್ಗ ಮತ್ತು ಗಿರಿದುರ್ಗ ಎಂದು ವಿಂಗಡಿಸಲಾಗಿದೆ. ಬೆಂಗಳೂರು, ದೇವನಹಳ್ಳಿ, ಯಲಹಂಕ, ಮತ್ತು ಮಾಗಡಿ ಕೋಟೆಗಳು ನೆಲದುರ್ಗದಲ್ಲಿದ್ದರೆ, ಸಾವನದುರ್ಗ, ಉತ್ರಿದುರ್ಗ, ಆವತಿ, ರಾಮಗಿರಿ, ಹುಲಿಯೂರುದುರ್ಗ ಮತ್ತು ಕುದೂರು ಭೈರವನದುರ್ಗದ ಗಿರಿದುರ್ಗಗಳಾಗಿವೆ.

ಕೆಂಪೇಗೌಡರ ಗುರುವಿನ ಗದ್ದುಗೆಯ ದುರ್ಗ:

ಶಿಥಿಲಾವಸ್ಥೆಯಲ್ಲಿರುವ ಕೋಟೆಗಳು:

ಭೈರವನಗರ್ದುದಲ್ಲಿ ಮೂರು ಹಂತದಲ್ಲಿ ಕೋಟೆಗಳನ್ನು ಕಾಣಬಹುದು. ಬೆಟ್ಟದ ತುದಿಯಲ್ಲಿರುವ ಒಂದು ಹಂತದ ಕೋಟೆ ಮಾತ್ರ ಚೆನ್ನಾಗಿದೆ. ಉಳಿದ ಎರಡು ಹಂತದ ಕೋಟೆಗಳು ಕಂದಕಗಳಾಗುತ್ತಿವೆ. ಬೆಟ್ಟದ ತುದಿಯಲ್ಲಿ ಕುಡಿಯುವ ನೀರಿಗಾಗಿ ಪ್ರಕೃತಿಯೇ ನಿರ್ಮಾಣ ಮಾಡಿದಂತೆ ದೊಣೆಯೊಂದಿದೆ. ಅದು ರಕ್ಷಣೆಯಿಲ್ಲದೆ ಅವಸಾನದ ಹಂತ ತಲುಪಿದೆ. ಕೆಂಪೇಗೌಡರ ಕಾಲದ ಯುದ್ದೋಪಕರಣಗಳನ್ನು ಸಂಗ್ರಹಿಸುತ್ತಿದ್ದ ಮದ್ದಿನ ಮನೆಯೊಂದಿದೆ. ಅವುಗಳನ್ನು ಸಂರಕ್ಷಿಸಬೇಕಿದೆ.

ಮಾಗಡಿಯನ್ನಾಳಿದ ಜನಪ್ರತಿನಿಧಿಗಳ ನಿರ್ಲಕ್ಷ್ಯ:

ಇದುವರೆಗೂ ಮಾಗಡಿಯನ್ನಾಳಿದ ಯಾವ ಜನಪ್ರತಿನಿಧಿಗಳು ಈ ದುರ್ಗವನ್ನು ಉಳಿಸಬೇಕೆಂದು ಶ್ರಮಿಸಲೇ ಇಲ್ಲ. ಬೆಟ್ಟದ ಬುಡವನ್ನೇ ಜೆಸಿಬಿ ಹಿಟಾಚಿ ಯಂತ್ರಗಳನ್ನು ಬಳಸಿ ದೊಡ್ಡ ದೊಡ್ಡ ಬಂಡೆಗಳನ್ನು ಉರುಳಿಸಿ ಎಸ್ಟೇಟ್, ಬಡಾವಣೆಗಳು ಮಾಡಿದ್ದಾರೆ. ತಾಲೂಕು ಆಡಳಿತ ಜಾಣಕುರುಡುತನ ವಹಿಸಿದೆ. ಅಪರೂಪದ ಓಡೊಮಸ್ ಮರಗಳನ್ನು ಹೇಳ ಹೆಸರಿಲ್ಲದಂತೆ ಮರಗಳ್ಳರು ಕದ್ದೊಯ್ಯುತ್ತಾರೆ. ಹಾಡಹಗಲೇ ಇಲ್ಲಿ ಮರಗಳ್ಳತನ ನಡೆಯುತ್ತದೆ. ಅರಣ್ಯ ಇಲಾಖೆ ಪ್ರಕೃತಿ ಉಳಿಸಿ ಎಂಬ ನಾಮಫಲಕ ಅಳವಡಿಸುವುದು ಬಿಟ್ಟು ದುರ್ಗದ ಅರಣ್ಯ ಪ್ರದೇಶ ಉಳಿಸಲು ಪ್ರಯತ್ನಿಸುತ್ತಿಲ್ಲ. ಇದ್ದಕಿದ್ದಂತೆ ದುರ್ಗದ ಬುಡವನ್ನು ಉತ್ತು ರಾಗಿ ಉರುಳಿ ಬೆಳೆಯುತ್ತಿದ್ದು ಕೇಳುವವರಿಲ್ಲವಾಗಿದೆ.

ಹುತ್ರಿದುರ್ಗದ ಸಂರಕ್ಷಣೆಗೆ 35 ಕೋಟಿ ಬಿಡುಗಡೆ:

ಕೆಂಪೇಗೌಡರು ಆಳಿದ ಕೋಟೆಗಳಲ್ಲಿ ಮಾಗಡಿಗೆ ಹೊಂದಿಕೊಂಡಿರುವ ಕುಣಿಗಲ್ ತಾಲೂಕಿನ ಹುತ್ರಿದುರ್ಗದ ಅಭಿವೃದ್ದಿಗೆ ಸರ್ಕಾರ ಈ ಹಿಂದೆ 35 ಕೋಟಿ ರು. ಬಿಡುಗಡೆ ಮಾಡಿದೆ. ಆದರೆ, ಕುದೂರು ಗ್ರಾಮದ ಭೈರವನದುರ್ಗದ ಅಭಿವೃದ್ದಿಗೆ ಹಣ ಬಿಡುಗಡೆ ಇರಲಿ ಆ ಕುರಿತು ಶಾಸಕ-ಸಂಸದರಾಗಿ ಯಾರೂ ಸರ್ಕಾರದ ಜೊತೆಗೆ ಮಾತಾಡಿಲ್ಲ. ಅಭಿವೃದ್ದಿಗೆ ಆಗ್ರಹಿಸಿಲ್ಲ. ಈ ಹಿಂದೆ ಸಂಸದರಾಗಿದ್ದ ತೇಜಸ್ವಿನಿಗೌಡರು ಈ ದುರ್ಗವನ್ನು ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಮುಂದಿನ ತಲೆಮಾರಿಗೆ ಕರುಹುಗಳೇ ಇಲ್ಲದಂತಾಗುತ್ತದೆ. ಇದನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದು ನೀಲನಕ್ಷೆ ಸಿದ್ದಪಡಿಸಿದ್ದರು. ನಂತರದ ಚುನಾವಣೆಯಲ್ಲಿ ಸೋತ ಕಾರಣ ಅದು ಅಲ್ಲಿಗೆ ನಿಂತಿತು.

ಬಾಕ್ಸ್‌..............

ದುರ್ಗದ ಬುಡದಲ್ಲಿ ಕಸದ ರಾಶಿ, ವಿಷದ ಹೊಗೆ:

ಈ ಹಿಂದೆ ಕುದೂರು ಗ್ರಾಪಂ ಅಧ್ಯಕ್ಷರಾಗಿದ್ದ ಕೆ.ಬಿ.ಬಾಲರಾಜು ಬೆಟ್ಟದ ತಪ್ಪಲಿನಲ್ಲಿ ಕಸ ಸುರಿಯುವ ಕೆಲಸಕ್ಕೆ ಚಾಲನೆ ನೀಡಿದರು. ಅಂದು ಅರಣ್ಯ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ಅವರಿಂದ ಒಂದು ಶಿಫಾರಸ್ಸು ಪತ್ರ ತಂದು ಕಾನೂನು ಕ್ರಮ ಕೈಗೊಳ್ಳುವಂತೆ ಕಣ್ಣೊರೆಸುವ ತಂತ್ರ ಮಾಡಿದರು. ಅಲ್ಲಿಂದ ಇಲ್ಲಿಯ ತನಕ ಶುಭ್ರವಾಗಿದ್ದ ಭೈರವನದುರ್ಗದ ಪರಿಸರಕ್ಕೆ ಕಸ ಸುರಿದು ಬೆಂಕಿ ಹಚ್ಚಿದರು. ಇದನ್ನು ಒಂದಷ್ಟು ಪ್ರಜ್ಞಾವಂತ ಯುವಕರು ಪ್ರತಿಭಟಿಸಿದ್ದರಿಂದ ಎಸ್‌ಎಸ್ ಪಾಳ್ಯದ ಬಳಿ ಎರಡು ಎಕರೆ ಪ್ರದೇಶವನ್ನು ಕಸ ವಿಲೇವಾರಿ ಮಾಡಿ ಅಲ್ಲಿ ಸಂಸ್ಕರಣ ಕೇಂದ್ರವನ್ನಾಗಿ ಮಾಡಬೇಕೆಂದು ಎಂಟತ್ತು ವರ್ಷಗಳ ಹಿಂದೆ ಜಾಗ ಮಂಜೂರಾಗಿದೆ. ಆದರೆ ಅಲ್ಲಿ ಕಟ್ಟಡದ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಭೈರವನದುರ್ಗದ ಸುಂದರ ಪರಿಸರ ನಾಶವಾಗುತ್ತಿದೆ.

ಕೋಟ್ ...............

ಕುದೂರಿನ ಭೈರವನದುರ್ಗದ ತಪ್ಪಲಿನಲ್ಲಿ ಕಸ ಸುರಿಯುವುದನ್ನು ಪಂಚಾಯ್ತಿ ನಿಲ್ಲಿಸಬೇಕು. ಆದರೆ ಎಸ್‌ಎಸ್ ಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಕಸ ಸಂಸ್ಕರಣ ಕಟ್ಟಡದ ಕಾಮಗಾರಿಯನ್ನು ಶೀಘ್ರ ನಿರ್ಮಿಸಿಕೊಡಬೇಕು. ಕಸದ ತೊಂದರೆಯಿಂದ ಮುಕ್ತವನ್ನಾಗಿಸಲು ನಾವೂಶ್ರಮಿಸುತ್ತಿದ್ದೇವೆ.

- ಪುರುಷೋತ್ತಮ್, ಪಿಡಿಒ, ಕುದೂರು ಗ್ರಾಪಂ

ಕೋಟ್ ..............

ಭೈರವನದುರ್ಗದಲ್ಲಿ ಕೆಂಪೇಗೌಡರ ಆಡಳಿತದ ಕುರುಹುಗಳಿರುವ ಕೋಟೆಕೊತ್ತಲಗಳನ್ನು ರಕ್ಷಿಸಬೇಕು. ಒತ್ತುವರಿ ಜಾಗವನ್ನು ದುರ್ಗದ ಆಸ್ತಿಯನ್ನಾಗಿ ಮಾಡಬೇಕು. ಬೆಟ್ಟದಲ್ಲಿರುವ ಮರಗಿಡ, ಪ್ರಾಣಿ ಪಕ್ಷಿ ಸಂಕುಲಗಳನ್ನು ರಕ್ಷಿಸಬೇಕು. ಅದಕ್ಕಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹೋರಾಟಕ್ಕೂ ಸಿದ್ದರಿದ್ದೇವೆ.

-ರಮೇಶ್‌ಗೌಡ, ಪ್ರಾಚಾರ್ಯರು, ಭಗತ್‌ಸಿಂಗ್ ಕರಾಟೆ ಸಂಸ್ಥೆ

28ಕೆಆರ್ ಎಂಎನ್ 1,2,3,4,5.ಜೆಪಿಜಿ

1.ಭೈರವನದುರ್ಗದ ವಿಹಂಗಮ ನೋಟ.

2.ಭೈರವನದುರ್ಗದ ತಪ್ಪಲಿನಲ್ಲಿ ಕಸ ಸುರಿದು ಬೆಂಕಿಯಿಟ್ಟು ಪರಿಸರ ವಿಷಮಯ.

3.ಎಸ್‌ಎಸ್ ಪಾಳ್ಯದಲ್ಲಿ ಕಸ ಸಂಸ್ಕರಣೆಗೆ ನಿರ್ಮಿಸುತ್ತಿರುವ ಶಡ್.