ಅರಣ್ಯ ಅತಿಕ್ರಮಣದಾರರ ದಿಕ್ಕು ತಪ್ಪಿಸುವ ಕೆಲಸ: ಸಂಸದ ಕಾಗೇರಿ ಆರೋಪ

| Published : Jan 29 2025, 01:31 AM IST

ಅರಣ್ಯ ಅತಿಕ್ರಮಣದಾರರ ದಿಕ್ಕು ತಪ್ಪಿಸುವ ಕೆಲಸ: ಸಂಸದ ಕಾಗೇರಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿಕೊಳ್ಳಲು ಯಾವುದೇ ಅವಕಾಶವಿಲ್ಲ. ಹಲವು ತಲೆಮಾರಿನಿಂದ ಅರಣ್ಯ ಅತಿಕ್ರಮಣ ಮಾಡಿಕೊಂಡು ವಾಸವಾಗಿರುವವವರಿಗೆ ಯಾವುದೇ ತೊಂದರೆ ಇಲ್ಲ. ಇದರಿಂದ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸಂಸದ ಕಾಗೇರಿ ತಿಳಿಸಿದರು.

ಮುಂಡಗೋಡ: ಶೇ. ೭೦ರಷ್ಟು ಅರಣ್ಯ ಅತಿಕ್ರಮಣದಾರರು ಬಡವರೇ ಆಗಿರುವುದರಿಂದ ಕೆಲವರು ತಮ್ಮ ಸ್ಥಾರ್ಥ ರಾಜಕಾರಣಕ್ಕಾಗಿ ಬಡ ಅತಿಕ್ರಮಣದಾರರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳಲು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಂದ ಎಚ್ಚರ ವಹಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಮಂಗಳವಾರ ಸಂಜೆ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ, ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿಕೊಳ್ಳಲು ಯಾವುದೇ ಅವಕಾಶವಿಲ್ಲ. ಹಲವು ತಲೆಮಾರಿನಿಂದ ಅರಣ್ಯ ಅತಿಕ್ರಮಣ ಮಾಡಿಕೊಂಡು ವಾಸವಾಗಿರುವವವರಿಗೆ ಯಾವುದೇ ತೊಂದರೆ ಇಲ್ಲ. ಇದರಿಂದ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ.

ಅತಿಕ್ರಮಣ ಮಂಜೂರಿಗೆ ೩ ತಲೆಮಾರಿನಿಂದ ತಾವು ಆ ಸ್ಥಳದಲ್ಲಿ ವಾಶಿಸುತ್ತಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಹಲವರು ಈ ಬಗ್ಗೆ ದಾಖಲೆ ಒದಗಿಸದೆ ಇರುವುದರಿಂದ ಅತಿಕ್ರಮಣ ಜಮೀನು ಮಂಜೂರಿಗೆ ತೊಂದರೆಯಾಗುತ್ತಿದೆ. ಅರಣ್ಯ ಅತಿಕ್ರಮಣ ಮಂಜೂರಿಗೆ ತೊಡಕಿರುವ ಕಾನೂನಿನ ಬಗ್ಗೆ ಕೇಂದ್ರ ಸರ್ಕಾರದಿಂದ ಪರಿಶೀಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಹಾರವಾಗಲಿದೆ ಎಂದರು.

ಇದೇ ವೇಳೆಯಲ್ಲಿ ಕಾಡುಪ್ರಾಣಿಗಳಿಂದ ಹಾನಿಯಾದ ಬಗ್ಗೆ ಹಾಗೂ ವಿವಿಧ ಬೇಡಿಕೆಗಳ ಕುರಿತು ಸಾರ್ವಜನಿಕರು ಸಂಸದರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಬಸವರಾಜ ಓಶಿಮಠ, ಪಪಂ ಮಾಜಿ ಉಪಾಧ್ಯಕ್ಷ ಶ್ರೀಕಾಂತ ಸಾನು, ಅಶೋಕ ಚಲವಾದಿ, ಮಹೇಶ ಹೊಸಕೊಪ್ಪ, ರಮೇಶ ರಾಯ್ಕರ, ಪಿ.ಜಿ. ತಂಗಚ್ಚನ್, ಉಮೇಶ ಗಾಣಿಗೇರ, ಸಿ.ಕೆ. ಅಶೋಕ ಮುಂತಾದವರು ಉಪಸ್ಥಿತರಿದ್ದರು.ಯಲ್ಲಾಪುರದಲ್ಲಿ ನಂದಿರಥ ಯಾತ್ರೆಗೆ ಸ್ವಾಗತ

ಯಲ್ಲಾಪುರ: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಬಂಟ್ವಾಳ ಇವರು ಗೋವಿನ ರಕ್ಷಣೆಯ ಕುರಿತು ರಾಜ್ಯಾದ್ಯಂತ ಡಿ. ೩೧ರಿಂದ ಹಮ್ಮಿಕೊಂಡ ನಂದಿ ರಥಯಾತ್ರೆ ಜ. ೨೮ರಂದು ಪಟ್ಟಣಕ್ಕೆ ಆಗಮಿಸಿತು. ತಟಗಾರ್ ಕ್ರಾಸ್‌ನಲ್ಲಿರುವ ವಿಶ್ವ ಹಿಂದೂ ಪರಿಷತ್ ಮಹಾಗಣಪತಿ ದೇವಸ್ಥಾನದಲ್ಲಿ ರಥಯಾತ್ರೆಗೆ ಭವ್ಯ ಸ್ವಾಗತವನ್ನು ಕೋರಲಾಯಿತು.ರಥ ಹಾಗೂ ಗೋವನ್ನು ಪೂಜಿಸುವ ಮೂಲಕ ರಥಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಸಿದ್ದಿ ಸಮೂದಾಯದ ಮಹಿಳೆಯರ ಭಜನಾ ತಂಡ, ಸುಮಂಗಲಿಯರ ಪೂರ್ಣಕುಂಭದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರಥಯಾತ್ರೆ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ, ಜಿಲ್ಲಾ ಖಜಾಂಚಿ ನಾಗರಾಜ ಮದ್ಗುಣಿ, ಗೋ ಸೇವಾ ಗತಿವಿಧಿಯ ಗಣಪತಿ ಭಟ್ಟ ಕೋಲಿಬೇಣ, ತಾಲೂಕು ಸಂಯೋಜಕ ನಾರಾಯಣ ಸಭಾಹಿತ, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ನಾಗೇಶ ಯಲ್ಲಾಪುರಕರ್, ಗೋಪಾಲಕೃಷ್ಣ ಗಾಂವ್ಕರ್, ಬಾಬು ಬಾಂದೇಕರ್, ಜಿ.ಎಸ್. ಭಟ್ಟ ಹಳವಳ್ಳಿ, ಅನಂತ ಗಾಂವ್ಕರ್, ರಾಮಕಷ್ಣ ಕವಡಿಕೆರೆ, ಮಾರುತಿ ಘಟ್ಟಿ ಮುಂತಾದವರಿದ್ದರು.