ಮುನಿಗೌಡನದೊಡ್ಡಿ ಗ್ರಾಮದಲ್ಲಿ ಕಾಡಾನೆಗಳಿಂದ ಬೆಳೆ ಹಾನಿ

| Published : Jan 29 2025, 01:31 AM IST

ಸಾರಾಂಶ

ಮುನಿಗೌಡನದೊಡ್ಡಿ ಗ್ರಾಮದ ರೈತ ಮಹದೇವಪ್ಪ ಜಮೀನಿಗೆ ನಿರಂತರವಾಗಿ ರಾತ್ರಿ ವೇಳೆ ಕಾಡಾನೆಗಳು ನುಗ್ಗಿ ಜಮೀನಿನಲ್ಲಿ ಬೆಳೆಯಲಾಗಿರುವ ಬೀನ್ಸ್, ಬೆಳ್ಳುಳ್ಳಿ, ಎಲೆಕೋಸ್, ಮುಸುಕಿನ ಜೋಳ ಹಾಗೂ ಕೃಷಿ ಹೊಂಡದ ಟಾರ್ಪಲ್ ಮತ್ತು ವಿದ್ಯುತ್ ಕೇಬಲ್ ಸಹ ತುಂಡರಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದೆ.

ಕನ್ನಡಪ್ರಭ ವಾರ್ತೆ ಹನೂರುಬಿಆರ್‌ಟಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಫಸಲು ಹಾನಿಗೊಳಿಸಿರುವ ಬಗ್ಗೆ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮುನಿಗೌಡನದೊಡ್ಡಿ ಗ್ರಾಮದ ರೈತ ಮಹದೇವಪ್ಪ ಜಮೀನಿಗೆ ನಿರಂತರವಾಗಿ ರಾತ್ರಿ ವೇಳೆ ಕಾಡಾನೆಗಳು ನುಗ್ಗಿ ಜಮೀನಿನಲ್ಲಿ ಬೆಳೆಯಲಾಗಿರುವ ಬೀನ್ಸ್, ಬೆಳ್ಳುಳ್ಳಿ, ಎಲೆಕೋಸ್, ಮುಸುಕಿನ ಜೋಳ ಹಾಗೂ ಕೃಷಿ ಹೊಂಡದ ಟಾರ್ಪಲ್ ಮತ್ತು ವಿದ್ಯುತ್ ಕೇಬಲ್ ಸಹ ತುಂಡರಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದೆ.

ಬಿಆರ್‌ಟಿ ವನ್ಯಧಾಮ ಅರಣ್ಯ ಪ್ರದೇಶದಿಂದ ದಿನನಿತ್ಯ ರಾತ್ರಿವೇಳೆ ಬರುವ ಕಾಡಾನೆಗಳು ಮಲೆ ಮಾದೇಶ್ವರ ವನ್ಯಧಾಮ ವ್ಯಾಪ್ತಿಯ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆಯ ನಷ್ಟ ಉಂಟು ಮಾಡುವುದರ ಜೊತೆಗೆ ರಾತ್ರಿ ವೇಳೆ ಕಾವಲು ಕಾಯುವ ಹಾಗೂ ಜಮೀನಿನಲ್ಲಿ ವಾಸದ ಮನೆಗಳಲ್ಲಿರುವ ರೈತರು ಭಯಭೀತರಾಗಿದದ್ದು, ನಿರಂತರ ಕಾಡಾನೆಗಳ ದಾಳಿಯಿಂದ ಫಸಲಿನ ನಷ್ಟದ ಜೊತೆಗೆ ರೈತರು ಭಯ ಭೀತರಾಗಿದ್ದಾರೆ.

ಸಂಬಂಧಪಟ್ಟ ಬಿಆರ್‌ಟಿ ವಲಯ ಅರಣ್ಯ ಅಧಿಕಾರಿಗಳು ಈ ಬಗ್ಗೆ ಹಲವಾರು ತಿಂಗಳುಗಳಿಂದ ರೈತರು ಕಾಡಾನೆ ತಡೆಗಟ್ಟುವಂತೆ ಮನವಿ ಸಲ್ಲಿಸಿದ್ದರು ನಿರ್ಲಕ್ಷೆ ವಹಿಸಿರುವುದರಿಂದ ರೈತರಿಗೆ ಸ್ಪಂದಿಸದೆ ಇರುವುದರಿಂದ ನಷ್ಟದ ಜೊತೆಗೆ ಜೀವ ಭಯದಲ್ಲೇ ರಾತ್ರಿ ಕಳೆಯುವ ಅಂತ ಪರಿಸ್ಥಿತಿ ಗಡಿ ಗ್ರಾಮದ ಅರಣ್ಯ ಪ್ರದೇಶದ ಅಂಚಿನಲ್ಲಿ ರೈತರು ಭಯಭೀತರಾಗಿದ್ದಾರೆ ಎಂದು ಅರಣ್ಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ರೈತ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.

ಕೋಟ್‌------

ಈ ಬಗ್ಗೆ ಬಿಆರ್‌ಟಿಡಿಸಿಎಫ್ ಶ್ರೀಪತಿ ಅವರಿಗೆ ಮೌಖಿಕವಾಗಿ ದೂರವಾಣಿ ಕರೆ ಮಾಡಿ ತಿಳಿಸಲಾಗಿದೆ. 15 ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಈಗೇ ಮುಂದುವರಿದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.ಹೊನ್ನೂರ್ ಪ್ರಕಾಶ್, ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ

--------------28ಸಿಎಚ್‌ಎನ್‌53ಹನೂರು ತಾಲೂಕಿನ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುನಿಗೌಡನದೊಡ್ಡಿ ಗ್ರಾಮದ ರೈತ ಮಹದೇವಪ್ಪ ಜಮೀನಿನಲ್ಲಿ ಬೆಳೆಯಲಾಗಿರುವ ಬೀನ್ಸ್ ಬೆಳೆಯನ್ನು ಕಾಡಾನೆಗಳು ತುಳಿದು ನಾಶಗೊಳಿಸಿರುವುದು.

----------------28ಸಿಎಚ್‌ಎನ್‌54

ಹನೂರು ತಾಲೂಕಿನ ಬೈಲೂರು ಗ್ರಾಮ ವ್ಯಾಪ್ತಿಯ ಮುನಿಗೌಡನದೊಡ್ಡಿ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳ್ಳುಳ್ಳಿ ಬೆಳೆಯನ್ನು ಕಾಡಾನೆಗಳು ತುಳಿದು ನಾಶಗೊಳಿಸಿರುವ ಚಿತ್ರ.

------------