ನೆಲಮಂಗಲ: ಒಕ್ಕಲಿಗರ ಸಮುದಾಯಕ್ಕೆ ಪ್ರತಿಯೊಬ್ಬರು ಕೈಲಾದ ಸೇವೆ ಸಲ್ಲಿಸುವುದುರಿಂದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿ ತರಲು ನೆರವಾಗುತ್ತದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು ತಿಳಿಸಿದರು.
ನೆಲಮಂಗಲ: ಒಕ್ಕಲಿಗರ ಸಮುದಾಯಕ್ಕೆ ಪ್ರತಿಯೊಬ್ಬರು ಕೈಲಾದ ಸೇವೆ ಸಲ್ಲಿಸುವುದುರಿಂದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿ ತರಲು ನೆರವಾಗುತ್ತದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು ತಿಳಿಸಿದರು.
ನಗರದ ಸಂಘದ ಕಚೇರಿಯಲ್ಲಿ ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು,ಒಕ್ಕಲಿಗ ಸಮಾಜ ತಾಲೂಕಾದ್ಯಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಕೃಷಿ ಕಾಯಕವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಒಕ್ಕಲಿಗ ಸಮಾಜ, ಸಕಾಲದಲ್ಲಿ ಮಳೆ -ಬೆಳೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಒಕ್ಕಲಿಗ ಸಮಾಜದ ಏಳಿಗೆಗೆ ಪ್ರತಿಯೊಬ್ಬರ ಸಹಕಾರ ಅನಿವಾರ್ಯ. ಈಗಾಗಲೇ ತಾಲೂಕು ಒಕ್ಕಲಿಗ ಸಂಘದ ನೇತೃತ್ವದಲ್ಲಿ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ತಿಳಿಸಿದರು.
ಸದಸ್ಯತ್ವ ಅಭಿಯಾನ:ತಾಲೂಕಿನಲ್ಲಿ ಒಕ್ಕಲಿಗ ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ತಾಲೂಕಾದ್ಯಂತ ಪ್ರತಿಯೊಂದು ಗ್ರಾಮದಲ್ಲೂ ಸದಸ್ಯ ಅಭಿಯಾನ ಕೈಗೊಳ್ಳಲಾಗುವುದು. ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲಾ ಮುಖಂಡರು ತಮ್ಮ ಕುಟುಂಬದ ಸದಸ್ಯರನ್ನು ಸಂಘದ ಸದಸ್ಯರನ್ನಾಗಿ ಮಾಡುವ ಕಾರ್ಯ ಮಾಡಬೇಕೆಂದು ತಿಮ್ಮರಾಜು ತಿಳಿಸಿದರು.
ಕ್ಯಾಲೆಂಡರ್ ಬಿಡುಗಡೆ:ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮರಾಜು ಸಂಘದ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಪ್ಯಾಕೆಟ್ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಸಂಘದ, ಪ್ರಧಾನ ಕಾರ್ಯದರ್ಶಿ ಪಿ.ಭೈರಪ್ಪ, ಖಜಾಂಚಿ ಎಚ್.ಜಿ.ರಾಜು, ಸಹ ಕಾರ್ಯದರ್ಶಿ ಲಕ್ಷ್ಮೀವೆಂಕಟೇಶ್, ಲೆಕ್ಕ ಪರಿಶೋಧಕ ಅನ್ನದಾನಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಜಿ. ಭೀಮರಾಜು, ಸಿದ್ದಬೈರಯ್ಯ, ಸಂಚಾಲಕರಾದ ಪ್ರಕಾಶ್, ರಂಗಸ್ವಾಮಿ, ಪ್ರಮೋದ್ಕುಮಾರ್, ಲತಾ ಮತ್ತಿತರರು ಉಪಸ್ಥಿತರಿದ್ದರು.ಪೊಟೊ-17ಕೆಎನ್‌ಎಲ್‌ಎಮ್1-
ನೆಲಮಂಗಲದ ತಾಲೂಕು ಕಚೇರಿ ಮುಂಭಾಗದ ಸಂಘದ ಕಚೇರಿಯಲ್ಲಿ ಅಧ್ಯಕ್ಷ ತಿಮ್ಮರಾಜು ಸಂಘದ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಪ್ಯಾಕೆಟ್ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಿದರು.