ದೇವನಹಳ್ಳಿ: ರಾಜಕೀಯ ಜೀವನಕ್ಕೆ ಕಾಲಿಟ್ಟಾಗಿಂದಲೂ ಜೆಡಿಎಸ್ ಪರಿವಾರದೊಂದಿಗೆ ಇದ್ದೇನೆ. ಇತರೆ ಪಕ್ಷಗಳ ಜೊತೆ ವಿಶ್ವಾಸದಿಂದ ಇರುವುದರಿಂದ ಈ ಗೆಲುವಿಗೆ ಬೇರೆ ಪಕ್ಷದ ಜೊತೆ ಕೈಜೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಬಿಡಿಸಿಸಿ ಬ್ಯಾಂಕ್ ನೂತನ ನಿದೇರ್ಶಕ ಕಾಮೇನಹಳ್ಳಿ ರಮೇಶ್ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆಗೆ ಒಟ್ಟು ೧೩ ಕ್ಷೇತ್ರದ ಮತಗಳಿದ್ದು ದೊಡ್ಡಬಳ್ಳಾಪುರದಿಂದ ಬಾಶೆಟ್ಟಹಳ್ಳಿ ನಾರಾಯಣಸ್ವಾಮಿ ಬಿಜೆಪಿಯಿಂದ, ನಾನು ಜೆಡಿಎಸ್‌ನಿಂದ ಸ್ಪರ್ಧಿಸಿದ್ದೆವು. ಪ್ರತಿಸ್ಪರ್ಧಿಗೆ ೫ ಮತ್ತು ನನಗೆ ೫ ಸಮಾನವಾಗಿ ಮತ ಬಿದ್ದು, ಚುನಾವಣಾಧಿಕಾರಿಗಳು ಲಾಟರಿ ಎತ್ತಿದಾಗ ವಿಜಯಲಕ್ಷ್ಮಿ ನನ್ನ ಪಾಲಿಗೆ ಒಲಿಯಿತು ಎಂದರು.ಈ ಗೆಲುವಿಗೆ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಪೂರ್ಣ ಬೆಂಬಲ ನೀಡಿದರು. ಬ್ಯಾಂಕ್ ನಿದೇರ್ಶಕನಾಗಿ ನನ್ನ ಪಕ್ಷಾತೀತ ಸೇವೆ ಈ ಗೆಲುವು ಬಂದಿರಬಹುದು. ಏನೇ ಆದರೂ ನನ್ನ ಈ ಅದೃಷ್ಠದ ಗೆಲುವಿಗೆ ಆಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರದಾನ ಕಾರ್ಯದರ್ಶಿ ಜಿ.ಎ ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಹುರಳಗುರ್ಕಿ ಶ್ರೀನಿವಾಸ್, ಚನ್ನಕೃಷ್ಣಪ್ಪ, ಲಕ್ಷ್ಮಣ್, ಜಗದೀಶ್ ನರಗನಹಳ್ಳಿ ಶ್ರೀನಿವಾಸ್ ಮುಂತಾದವರಿದ್ದರು.೧೭ ದೇವನಹಳ್ಳಿ ಚಿತ್ರಸುದ್ದಿ: ೦೧
ಬಿಡಿಸಿಸಿ ಬ್ಯಾಂಕ್ ನಿದೇರ್ಶಕರಾಗಿ ಲಾಟರಿ ಮೂಲಕ ವಿಜೇತರಾದ ಕಾಮೇನಹಳ್ಳಿ ರಮೇಶ್ ರವರನ್ನು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ ಇತರರು.