ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ದುರ್ಗಾ ಫೌಂಡೇಷನ್ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಡಹಬ್ಬ ಮೈಸೂರು ದಸರಾ 2025ರ ಮನೆಮನೆ ಗೊಂಬೆ ಗೊಂಬೆ ಕೂರಿಸುವ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯ ಪೋಸ್ಟರನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಗರದ ಬಿಜೆಪಿ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರುಸ್ಪರ್ಧೆಯ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ 200 ರೂ. ನೋಂದಣಿ ಶುಲ್ಕ ಇರುತ್ತದೆ. ದಸರಾ ಗೊಂಬೆ ಸ್ಪರ್ಧೆಯು ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡಂತೆ ಗೊಂಬೆಗಳನ್ನು ಕೂರಿಸಿದ 10 ವಿಜೇತರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲೇ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ. ಹೆಸರು ನೋಂದಣಿಗೆ ಅ. 2 ಕೊನೆ ದಿನವಾಗಿದ್ದು, ಆಸಕ್ತರು ಮೊ. 89713 89539 ಸಂಪರ್ಕಿಸಬಹುದು ಎಂದರು.ಈ ದೂರವಾಣಿ ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ಗೊಂಬೆ ಜೋಡಣೆ ಮಾಡಿರುವ ಚಿತ್ರ ಹಾಗೂ 3 ನಿಮಿಷದ ವೀಡಿಯೋ ಕಳುಹಿಸಿಕೊಡಬೇಕು. ಬಳಿಕ ತೀರ್ಪುಗಾರರು ಅವರ ನಿವಾಸಕ್ಕೆ ತೆರಳಿ ವೀಕ್ಷಿಸಿ ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡ ಅದ್ಭುತವಾಗಿ ಗೊಂಬೆ ಜೋಡಣೆ ಮಾಡಿದಂತಹ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಾಗಿ ಅವರು ತಿಳಿಸಿದರು.ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಮೇಯರರ್ ಶಿವಕುಮಾರ್, ಮುಖಂಡರಾದ ಮಹೇಶ್ ರಾಜ್ ಅರಸ್, ಕಾರ್ತಿಕ್ ಮರಿಯಪ್ಪ, ಪರಿಕ್ಷತ್ ರಾಜ್ ಮೊದಲಾದವರು ಇದ್ದರು.